Horoscope: ಬುಧದೇವನ ಕೃಪೆ ಇದ್ದರೆ ಒಬ್ಬ ವ್ಯಕ್ತಿಯ ಬದುಕಿನಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ. ನವೆಂಬರ್ 23ರಂದು ಬುಧದೇವನು ಧನು ರಾಶಿಗೆ ಪ್ರವೇಶ ಮಾಡಲಿದ್ದಾನೆ, ಡಿಸೆಂಬರ್ 28ರವರೆಗು ಇದೇ ರಾಶಿಯಲ್ಲಿದ್ದು ಬಳಿಕ ವೃಶ್ಚಿಕ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಧನು ರಾಶಿಗೆ ಬುಧನ ಆಗಮನ ಆಗುತ್ತಿದ್ದ ಹಾಗೆ ಕೆಲವು ರಾಶಿಗಳ ಅದೃಷ್ಟ ಬದಲಾಗಲಿದೆ, ಅವರ ಬದುಕಿನಲ್ಲಿ ಸಂತೋಷ ಬರುವುದರ ಜೊತೆಗೆ, ಸಾಧನೆಗಳನ್ನು ಮಾಡುತ್ತಾರೆ. ಆ ರಾಶಿಗಳು ಯಾವುವು? ಅವುಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..
ಮಿಥುನ ರಾಶಿ :- ಬುಧದೇವನಿಂದ ನಿಮಗೆ ಅದೃಷ್ಟ ಸಿಗುತ್ತದೆ.. ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಿದರು ಯಶಸ್ಸು ನಿಮಗೆ ಕಟ್ಟಿಟ್ಟ ಬುತ್ತಿ, ಇನ್ನು ಮದುವೆ ಆಗಿಲ್ಲದೆ ಇರುವವರಿಗೆ ಒಳ್ಳೆಯ ಸಂಬಂಧ ಕೂಡಿ ಬರಲಿದೆ. ಬಹಳ ಸಮಯದಿಂದ ಉಳಿದಿರುವ ಕೆಲಸಗಳೆಲ್ಲಾ ಪೂರ್ತಿಯಾಗುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಪ್ರತಿಷ್ಠೆ ಹೆಚ್ಚಾಗುತ್ತದೆ. ಬ್ಯುಸಿನೆಸ್ ನಲ್ಲಿ ಲಾಭ ಪಡೆಯುತ್ತೀರಿ.
ಕನ್ಯಾ ರಾಶಿ :- ಬುಧದೇವನ ಸ್ಥಾನ ಬದಲಾವಣೆ ಇಂದ ನಿಮಗೆ ಅದೃಷ್ಟ ಯಶಸ್ಸು ಸಿಗಲಿದೆ. ಆದಾಯಕ್ಕೆ ಹೊಸ ಮೂಲಗಳು ಶುರುವಾಗಲಿದೆ. ನಿಮ್ಮ ಜೊತೆಗೆ ಕೆಲಸ ಮಾಡುವವರ ಸಪೋರ್ಟ್ ಸಿಗುತ್ತದೆ. ಬ್ಯುಸಿನೆಸ್ ನಲ್ಲಿ ಯಶಸ್ಸು ಮತ್ತು ಲಾಭ ಸಿಗುತ್ತದೆ.
ಧನು ರಾಶಿ :- ಬುಧದೇವ ಪ್ರವೇಶ ಮಾಡಲಿರುವುದು ಈ ರಾಶಿಗೆ ಹಾಗಾಗಿ ಇವರಿಗೆ ಹೆಚ್ಚಿನ ಅನುಕೂಲ ಮತ್ತು ಅದೃಷ್ಟ ಸಿಗಲಿದೆ. ಬ್ಯುಸಿನೆಸ್ ಮಾಡುತ್ತಿರುವವರು ಅಂದುಕೊಂಡಿದ್ದೆಲ್ಲವನ್ನು ಸಾಧಿಸುತ್ತಾರೆ, ಅವರ ಇಷ್ಟದ ಬ್ರಾಂಚ್ ಓಪನ್ ಮಾಡುತ್ತಾರೆ. ಪಾರ್ಟ್ನರ್ಶಿಪ್ ನಲ್ಲಿ ಮಾಡುವ ಬ್ಯುಸಿನೆಸ್ ಇಂದ ಲಾಭ ಪಡೆಯುತ್ತಾರೆ.