Horoscope: ಈ ಮೂರು ರಾಶಿಯವರಿಗೆ ಗುರುವಿನ ಆಶೀರ್ವಾದ! 4 ತಿಂಗಳು ಅದೃಷ್ಟ ಫಿಕ್ಸ್!

0 1

Horoscope: ಗುರುದೇವನಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಸ್ಥಾನವಿದೆ. ಗುರುವು ಒಬ್ಬ ವ್ಯಕ್ತಿಯ ಸಂತೋಷ, ಸಮೃದ್ಧಿ, ವೈವಾಹಿಕ ಜೀವನ ಎಲ್ಲದರ ಕಾರಕ ಆಗಿರುತ್ತಾನೆ. ಹಾಗಾಗಿ ಗುರುದೇವನಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಒಳ್ಳೆಯ ಸ್ಥಾನವಿದೆ. ಮುಂದಿನ 4 ತಿಂಗಳುಗಳ ಕಾಲ ಈ 3 ರಾಶಿಯವರ ಮೇಲೆ ಗುರುದೇವನ ಆಶೀರ್ವಾದ ಯಥೇಚ್ಛವಾಗಿ ಇರಲಿದ್ದು, ಈ ರಾಶಿಯ ಜನರಿಗೆ ಗುರುವಿನಿಂದ ಎಲ್ಲಾ ಥರದ ಅನುಕೂಲಗಳು ಸಿಗುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಮುಂಬರುವ 4 ತಿಂಗಳುಗಳು ಈ ರಾಶಿಯವರಿಗೆ ಹೆಚ್ಚಿನ ಸಂತೋಷ, ಸಂಪತ್ತು, ಪ್ರತಿಷ್ಟೆ ಎಲ್ಲವೂ ಸಮಾಜದಲ್ಲಿ ಸಿಗುತ್ತದೆ. ಅದೃಷ್ಟ ನಿಮ್ಮ ಜೊತೆಗಿರುತ್ತದೆ, ಅದರಿಂದ ನೀವು ಮಾಡುವ ಎಲ್ಲಾ ಕೆಲಸದಲ್ಲಿ ಯಶಸ್ಸು ಪಡೆಯುತ್ತೀರಿ. ಈ ವೇಳೆ ಹಣ ಉಳಿತಾಯಕ್ಕೆ ಸೂಕ್ತ ಸಮಯ ಆಗಿರುತ್ತದೆ.

ಕರ್ಕಾಟಕ ರಾಶಿ :- ಈ ವೇಳೆ ನಿಮಗೆ ಉದ್ಯೋಗದಲ್ಲಿ ಭಾರಿ ಯಶಸ್ಸು ಸಿಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಇನ್ನು ಒಳ್ಳೆಯ ಕಡೆ ಒಳ್ಳೆಯ ಅವಕಾಶ ಸಿಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಹೊರ ದೇಶದಿಂದ ಲಾಭ ಸಿಗುತ್ತದೆ. ಇನ್ನು ಕೆಲಸ ಸಿಗದೆ ಇರುವವರಿಗೆ ಒಳ್ಳೆಯ ಕೆಲಸ ಸಿಗುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ.

ಸಿಂಹ ರಾಶಿ :- ಸ್ವಲ್ಪ ದಿನಗಳಿಂದ ಇರುವ ಎಲ್ಲಾ ಸಮಸ್ಯೆಗಳು ಸರಿ ಹೋಗುತ್ತದೆ. ಅದೃಷ್ಟ ನಿಮ್ಮ ಜೊತೆಗಿರುವ ಕಾರಣ ನಿಮ್ಮ ಪ್ಲಾನ್ ಗಳು ಯಶಸ್ವಿಯಾಗುತ್ತದೆ. ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ. ಹೆಚ್ಚಿನ ಮೂಲಗಳಿಂದ ಹಣ ಬರುತ್ತದೆ..

Leave A Reply

Your email address will not be published.