Horoscope: ಗುರುದೇವನ ಸಂಚಾರದಿಂದ ಗಜಕೇಸರಿಯೋಗ ಆರಂಭ, 5 ರಾಶಿಗಳ ಬದುಕು ಬಂಗಾರ!

Written by Pooja Siddaraj

Published on:

Horoscope: ವರ್ಷದ ಕೊನೆಯ ತಿಂಗಳು ಡಿಸೆಂಬರ್ ಶುರುವಾಗಿದೆ. ಈ ತಿಂಗಳು ಮುಗಿಯುವ ವೇಳೆಗೆ ಮೇಷ ರಾಶಿಯಲ್ಲಿ ಗುರುದೇವನ ನೇರ ಸಂಚಾರ ಶುರುವಾಗಲಿದೆ. ಇದರಿಂದಾಗಿ ಗಜಕೇಸರಿ ಯೋಗ ರೂಪುಗೊಳ್ಳಲಿದ್ದು, ಕೆಲ ರಾಶಿಗಳ ಬದುಕು ಬಂಗಾರ್ ಆಗಲಿದೆ. ಚಿನ್ನದಂಥ ಸಮಯ ಶುರುವಾಗಲಿದೆ. ಆ ರಾಶಿಗಳು ಯಾವುವು? ಅವುಗಳಿಗೆ ಏನೆಲ್ಲಾ ಆಗಲಿದೆ ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಗಜಕೇಸರಿ ಯೋಗದ ಪರಿಣಾಮ ನಿಮ್ಮ ವ್ಯಕ್ತಿತ್ವದಲ್ಲಿ ಹೊಸ ಆಕರ್ಷಣೆ ಶುರುವಾಗಲಿದೆ. ಈ ವೇಳೆ ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಜಾಸ್ತಿಯಾಗುತ್ತದೆ. ನಿಮ್ಮ ಎಲ್ಲಾ ಆಸೆಗಳು ಈಡೇರುತ್ತದೆ. ಉದ್ಯೋಗ ಮಾಡುತ್ತಿರುವವರಿಗೆ ಆದಾಯ ಜಾಸ್ತಿಯಾಗುತ್ತದೆ., ಹಣಕಾಸಿನ ವಿಚಾರದಲ್ಲಿ ಈ ತಿಂಗಳು ನಿಮಗೆ ಒಳ್ಳೆಯದು. ದಾಂಪತ್ಯ ಜೀವನ ಸಂತೋಷದಿಂದ ಕೂಡಿರುತ್ತದೆ. ಇನ್ನು ಮದುವೆ ಆಗದೆ ಇರುವವರಿಗೆ ಒಳ್ಳೆಯ ಸಂಬಂಧ ಕೂಡಿಬರುತ್ತದೆ.

ಸಿಂಹ ರಾಶಿ :- ಗಜಕೇಸರಿ ಯೋಗ ನಿಮಗೆ ಶುಭಫಲ ತರುತ್ತದೆ. ಈ ವೇಳೆ ಅದೃಷ್ಟ ನಿಮಗೆ ಸಾಥ್ ಕೊಡುತ್ತದೆ. ಕೆಲಸದ ವಿಚಾರದಲ್ಲಿ ನೀವು ಅಂದುಕೊಂಡಿದ್ದೆಲ್ಲವು ನಡೆಯುತ್ತದೆ. ಉದ್ಯೋಗಕ್ಕಾಗಿ ಬೇರೆ ಊರಿಗೆ ಹೋಗುವ ಪರಿಸ್ಥಿತಿ ಬರಬಹುದು. ಕೆಲಸ ಬದಲಾವಣೆ ಮಾಡಬೇಕು ಎಂದುಕೊಂಡಿರುವವರಿಗೆ ಇದು ಒಳ್ಳೆಯ ಸಮಯ., ದೊಡ್ಡ ಅವಕಾಶಗಳು ಸಿಗುತ್ತದೆ. ಸೂರ್ಯ ನಿಮ್ಮ ರಾಶಿಗೆ ಅಧಿಪತಿ ಆಗಿರುವ ಕಾರಣ ರಾಜಯೋಗ ನಿಮಗೆ ಹೆಚ್ಚು ಅನುಕೂಲ ತರುತ್ತದೆ..

ಧನು ರಾಶಿ ;- ಈ ರಾಶಿಯ ಅಧಿಪತಿ ಗುರು ಆಗಿರುವ ಕಾರಣ ನಿಮಗೆ ರಾಜಯೋಗ ಶುಭ ತರುತ್ತದೆ. ಗುರುವಿಗೆ ಚಂದ್ರನ ಜೊತೆಗೆ ಸ್ನೇಹವಿದೆ. ಹಾಗಾಗಿ ಈ ವೇಳೆ ನಿಮಗೆ ಮಕ್ಕಳ ವಿಚಾರಕ್ಕೆ ಒಳ್ಳೆಯ ಸುದ್ದಿಗಳು ಕೇಳಿಬರುತ್ತವೆ. ಮಕ್ಕಳ ಮದುವೆ ಆಗಬಹುದು ಅಥವಾ ಕೆಲಸ ಸಿಗಬಹುದು. ಲವ್ ಲೈಫ್ ನಲ್ಲಿ ಯಶಸ್ಸು ಸಿಗುತ್ತದೆ. ಎಲ್ಲಾ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ದಿಢೀರ್ ಧನಲಾಭ ಉಂಟಾಗುತ್ತದೆ.

Leave a Comment