Horoscope: ಈ ವಿಶೇಷ ತಿಂಗಳಿನಲ್ಲಿ ಹುಟ್ಟಿದವರು ತುಂಬಾ ಲಕ್ಕಿ, ಇವರಿಗೆ ಸೋಲು ಅನ್ನೋದೇ ಇಲ್ಲ!

Written by Pooja Siddaraj

Published on:

Horoscope: ಹುಟ್ಟುವ ಪ್ರತಿ ವ್ಯಕ್ತಿಯ ವ್ಯಕ್ತಿತ್ವ ಬೇರೆ ಬೇರೆ ರೀತಿ ಇರುತ್ತದೆ. ಹುಟ್ಟುವ ತಿಂಗಳು, ಗ್ರಹಗಳು ಇವುಗಳ ಮೇಲೆ ವ್ಯಕ್ತಿತ್ವ ಕೂಡ ಬದಲಾಗುತ್ತದೆ. ಇಂದು ನಾವು ನಿಮಗೆ ವರ್ಷದ ಜೂನ್ ತಿಂಗಳಿನಲ್ಲಿ ಜನಿಸಿದ ವ್ಯಕ್ತಿಯ ಬಗ್ಗೆ ತಿಳಿಸುತ್ತೇವೆ. ಈ ತಿಂಗಳು ಜನಿಸಿದವರು ಬಹಳ ಧೈರ್ಯವಂತರು, ಹಾಗೆಯೇ ಇವರು ಎಷ್ಟೇ ಸಾಹಸ ಮಾಡಲು ಹಿಂದೆ ಮುಂದೆ ಯೋಚನೆ ಮಾಡುವುದಿಲ್ಲ. ಇವರ ವಿಶೇಷ ಗುಣ ಸ್ವಭಾವದ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..

ಜೂನ್ ತಿಂಗಳಿನಲ್ಲಿ ಹುಟ್ಟಿದವರ ವ್ಯಕ್ತಿತ್ವದ ಬಗ್ಗೆ ಹೇಳುವುದಾದರೆ, ಇವರಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳುವ ಧೈರ್ಯ ಇರುತ್ತದೆ. ಜೊತೆಗೆ ರಾಜತಂತ್ರದ ಗುಣಗಳನ್ನು ಕೂಡ ಹೊಂದಿರುತ್ತಾರೆ. ಸಂಧರ್ಭಕ್ಕೆ ಸರಿಯಾಗಿ ಮಾತನಾಡುವುದು ಇವರಿಗೆ ಚೆನ್ನಾಗಿ ಗೊತ್ತಿರುತ್ತದೆ. ಹೀಗಾಗಿ ಇವರು ಕೈಗೊಳ್ಳುವ ಎಲ್ಲಾ ಕೆಲಸ ಯಶಸ್ಸು ಪಡೆಯುತ್ತದೆ.

ಇವರ ಗುಣ ಸ್ವಭಾವದ ಬಗ್ಗೆ ಮಾತನಾಡುವುದಾದರೆ, ಇವರಲ್ಲಿ ಹೆಚ್ಚಾಗಿ ಕಲಾತ್ಮಕ ಗುಣ ಇರುತ್ತದೆ. ಅಡುಗೆಯನ್ನು ಅದ್ಭುತವಾಗಿ, ರುಚಿಕಟ್ಟಾಗಿ ಮಾಡುತ್ತಾರೆ. ವಿಶೇಷವಾದ ಅಡುಗೆಗಳನ್ನು ನಾಡಿ ಬಡಿಸುವುದು ಇವರಿಗೆ ತುಂಬಾ ಇಷ್ಟ.

ಈ ತಿಂಗಳು ಜನಿಸಿದವರು ರಾಜಕೀಯಕ್ಕೆ ಎಂಟ್ರಿ ಕೊಟ್ಟರೆ ಯಶಸ್ಸು ಖಂಡಿತ. ಇವರಲ್ಲಿ ರಾಜತಂತ್ರದ ಗುಣ ಇರುವುದರಿಂದ ರಾಜಕೀಯ ಇವರಿಗೆ ಉತ್ತಮವಾದ ವೃತ್ತಿ ಆಗಿದೆ. ಈ ಕ್ಷೇತ್ರದಲ್ಲಿ ಯಶಸ್ಸು, ಕೀರ್ತಿ, ಐಶ್ವರ್ಯ ಎಲ್ಲವೂ ಸಿಗುತ್ತದೆ. ಯಾರ ಸಪೋರ್ಟ್ ಇಲ್ಲದಿದ್ದರೂ ಇವರಿಗೆ ಯಶಸ್ಸು ಸಿಗುತ್ತದೆ.

ಇವರ ಸ್ವಭಾವದ ಬಗ್ಗೆ ಹೇಳುವುದಾದರೆ, ಇವರದ್ದು ಆಗಾಗ ಮೊಂಡುತನದ ಸ್ವಭಾವ, ಇದರಿಂದ ನಷ್ಟ ಉಂಟಾಗಬಹುದು. ಇವರ ಮನಸ್ಸಿಗೆ ನೋವಾದರು ಕೂಡ ಅದನ್ನು ಯಾರ ಜೊತೆಗೂ ಹೇಳಿಕೊಳ್ಳುವುದಿಲ್ಲ. ಇವರು ಯಾವುದೇ ಭಾವನೆಯನ್ನು ಕೂಡ ಮತ್ತೊಬ್ಬರ ಜೊತೆಗೆ ಹಂಚಿಕೊಳ್ಳೋದಿಲ್ಲ. ಕಷ್ಟಗಳಿಗೆ ತಾವೇ ಪರಿಹಾರ ಹುಡುಕುತ್ತಾರೆ.

Leave a Comment