Horoscope: ಕನ್ಯಾ ರಾಶಿಗೆ ಕೇತು ಗ್ರಹದ ಆಗಮನ! ಈ ರಾಶಿಗಳಿಗೆ ಅದೃಷ್ಟ ಶುರು

Written by Pooja Siddaraj

Published on:

Horoscope: ಸಾಮಾನ್ಯವಾಗಿ ಕೇತು ಗ್ರಹವನ್ನು ಒಳ್ಳೆಯ ಗ್ರಹ ಎನ್ನುವುದಿಲ್ಲ. ಕೇತುವಿನ ಪ್ರಭಾವ ಇದ್ದರೆ ಆ ರಾಶಿಯವರ ಏಳಿಗೆ ಆಗುವುದು ಕಷ್ಟ ಎಂದು ಹೇಳುತ್ತಾರೆ. ಇದೀಗ ಕನ್ಯಾ ರಾಶಿಗೆ ಕೇತುವಿನ ಆಗಮನವಾಗಿದೆ. ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಬೀರುತ್ತದೆ. ಆದರೆ ಈ ರಾಶಿಗಳ ಮೇಲೆ ಕೇತುವಿನ ವಿಶೇಷ ಪ್ರಭಾವ ಇರಲಿದ್ದು, ಇವರಿಗೆ ಎಲ್ಲವು ಒಳ್ಳೆಯದಾಗುತ್ತದೆ. ಬದುಕಿನಲ್ಲಿ ಅದೃಷ್ಟ ಇರುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ..

ವೃಶ್ಚಿಕ ರಾಶಿ :- ಇವರ ಸಮಯ ಚೆನ್ನಾಗಿರುತ್ತದೆ. ಬ್ಯುಸಿನೆಸ್ ನಲ್ಲಿ ಎಲ್ಲರ ಜೊತೆಗೆ ಸಂಬಂಧ ಚೆನ್ನಾಗಿರುತ್ತದೆ. ಅರ್ಧಕ್ಕೆ ನಿಂತಿರುವ ಕೆಲಸಗಳು ಪೂರ್ತಿಯಾಗುತ್ತದೆ. ದುಡಿಯುವುದಕ್ಕೆ ಒಳ್ಳೆಯ ಅವಕಾಶ ಸಿಗುತ್ತದೆ. ಈ ವೇಳೆ ಅನಾವಶ್ಯಕ ಖರ್ಚುಗಳನ್ನು ಕಡಿಮೆ ಮಾಡುವುದು ಒಳ್ಳೆಯದು. ಇದರಿಂದ ಒತ್ತಡ ಆಗುವುದಿಲ್ಲ.

ಕರ್ಕಾಟಕ ರಾಶಿ :- ನೀವು ಯಾವುದಾದರೂ ಹೊಸ ಕೆಲಸ ಮಾಡಬೇಕು ಎಂದುಕೊಂಡಿದ್ದರೆ, ಅದಕ್ಕಾಗಿ ಸರಿಯಾದ ಸಮಯ ಇದು. ನಿಮ್ಮ ಅಕ್ಕ ತಂಗಿ ಅಣ್ಣ ತಮ್ಮಂದಿರ ಜೊತೆಗೆ ಸಂಬಂಧ ಚೆನ್ನಾಗಿರುತ್ತದೆ. ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ. ಮನೆಯವರ ಜೊತೆಗೆ ಹೊರಗಡೆ ಹೋಗಿ ಬರುತ್ತೀರಿ.

ಮೇಷ ರಾಶಿ :- ಕೇತುವಿನ ಸ್ಥಾನ ಬದಲಾವಣೆ ನಿಮಗೆ ಶುಭ ತರುತ್ತದೆ. ಈ ವೇಳೆ ನಿಮ್ಮ ಆಸ್ತಿ ವೃದ್ಧಿಸುತ್ತದೆ. ಬ್ಯುಸಿನೆಸ್ ನಲ್ಲಿ ಲಾಭ ಪಡೆಯುತ್ತೀರಿ. ಮನೆಯವರ ಜೊತೆಗೆ ಸಂತೋಷದ ಸಮಯ ಕಳೆಯುತ್ತೀರಿ.

Leave a Comment