Horoscope: ಈ ವರ್ಷ ದೀಪಾವಳಿ ಹಬ್ಬದ ದಿವಸದಿಂದ ಅಂದರೆ ನವೆಂಬರ್ 12ರಿಂದ ಮಹಾಲಕ್ಷ್ಮಿ ವರ್ಷ ಶುರುವಾಗಿದೆ. ಈ ವೇಳೆ ಲಕ್ಷ್ಮೀದೇವಿಯ ಆಶೀರ್ವಾದ ಎಲ್ಲಾ ರಾಶಿಗಳ ಮೇಲೆ ಇರಲಿದೆ, ಆದರೆ 5 ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರಲಿದ್ದು, ಆ ರಾಶಿಗಳು ಯಾವುವು? ಆ ರಾಶಿಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..
ಕನ್ಯಾ ರಾಶಿ :- ಆರ್ಥಿಕ ಲಾಭ ಹೆಚ್ಚಾಗುವುದರ ಜೊತೆಗೆ ಬ್ಯಾಂಕ್ ಬ್ಯಾಲೆನ್ಸ್ ಜಾಸ್ತಿಯಾಗುತ್ತದೆ. ಪರೀಕ್ಷೆ ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿದರೆ ಯಶಸ್ಸು ನಿಮ್ಮದಾಗುತ್ತದೆ. ಖುಷಿ ಇರುತ್ತದೆ, ಸಂಪತ್ತು ಮತ್ತು ವಾಹನಗಳ ಬ್ಯುಸಿನೆಸ್ ನಲ್ಲಿ ಕೆಲಸ ಮಾಡುತ್ತಿರುವವರಿಗೆ ಲಾಭ ಸಿಗುತ್ತದೆ.
ವೃಶ್ಚಿಕ ರಾಶಿ :- ನಿಮ್ಮ ಬ್ಯುಸಿನೆಸ್ ವಿಸ್ತರಿಸುವ ಅವಕಾಶ ಸಿಗುತ್ತದೆ. ಹೆಚ್ಚು ಪ್ರಯೋಜನ ಪಡೆಯುತ್ತೀರಿ. ಬದುಕಿನಲ್ಲಿ ಹೆಚ್ಚು ಸಾಧನೆಗಳನ್ನು ಮಾಡುತ್ತೀರಿ. ಸಂಬಂಧಗಳಲ್ಲಿ ಇದ್ದ ಬಿರುಕುಗಳು ಸರಿ ಹೋಗುತ್ತದೆ. ಬದುಕಿನಲ್ಲಿ ಸಂತೋಷ ಇರುತ್ತದೆ.
ಸಿಂಹ ರಾಶಿ :- ಈ ವೇಳೆ ನಿಮ್ಮ ಒತ್ತಡಗಳಿಂದ ಮುಕ್ತಿ ಸಿಗುತ್ತದೆ. ಹಣಕಾಸಿನ ವಿಷಯದಲ್ಲಿ ಲಾಭ ನಿಮ್ಮದಾಗುತ್ತದೆ. ಅನಿರೀಕ್ಷಿತ ಅನುಕೂಲಗಳನ್ನು ಪಡೆಯುತ್ತೀರಿ. ಅರ್ಧಕ್ಕೆ ನಿಂತಿರುವ ಕೆಲಸಗಳು ಪೂರ್ತಿಯಾಗುತ್ತದೆ. ಬ್ಯುಸಿನೆಸ್ ನಲ್ಲಿ ಇರುವವರು ಹುಷಾರಾಗಿರಿ.
ಮಿಥುನ ರಾಶಿ :- ನಿಮ್ಮ ವ್ಯಕ್ತಿತ್ವದಲ್ಲಿ ಬೇರೆ ರೀತಿಯ ಪರಿಣಾಮಗಳು ಉಂಟಾಗುತ್ತದೆ. ಹಿರಿಯರ ಆಸ್ತಿಯಿಂದ ಲಾಭ ಸಿಗುತ್ತದೆ. ವಾಹನದ ಅನುಕೂಲ ಸಿಗುತ್ತದೆ. ಏಳಿಗೆಯ ದಾರಿಯ ಕಡೆಗೆ ನಡೆಯುತ್ತೀರಿ. ಹಣಕಾಸಿನ ಲಾಭ ನಿಮ್ಮದಾಗುತ್ತದೆ.
ಮಕರ ರಾಶಿ :- ನಿಮ್ಮ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗುತ್ತದೆ. ಹೆಚ್ಚಿನ ಅವಕಾಶ ನಿಮ್ಮದಾಗುತ್ತದೆ. ನಿಮ್ಮ ವ್ಯಕ್ತಿತ್ವ ಎಲ್ಲರನ್ನು ಆಕರ್ಷಿಸುತ್ತದೆ.