Horoscope: ಶಿವನೇ ಮೆಚ್ಚುವ ರಾಶಿಗಳಿವು, ಶಿವನ ಅನುಗ್ರಹದಿಂದ ಇವರಿಗೆ ಬದುಕಿನಲ್ಲಿ ಯಾವುದೇ ತೊಂದರೆ ಇಲ್ಲ!

0 18

Horoscope: ನಮ್ಮ ಹಿಂದೂ ಸಂಪ್ರದಾಯ, ಸನಾತನ ಧರ್ಮದಲ್ಲಿ ಎಲ್ಲರೂ ಪೂಜಿಸುವುದು ಭಗವಾನ್ ಶಿವನನ್ನು. ಆ ಶಿವನ ಅಪ್ಪಣೆ ಇಲ್ಲದೆ ಪ್ರಪಂಚದಲ್ಲಿ ಏನು ನಡೆಯುವುದಿಲ್ಲ ಎನ್ನುವ ಮಾತಿದೆ. ಯಾವ ವ್ಯಕ್ತಿಯ ಮೇಲೆ ಶಿವನ ಅನುಗ್ರಹ ಇರುತ್ತೋ, ಅಂಥ ವ್ಯಕ್ತಿಯ ಬದುಕಿನಲ್ಲಿ ಯಾವುದೇ ಸಮಸ್ಯೆ ಆಗೋದಿಲ್ಲ, ಹಣಕಾಸಿನ ತೊಂದರೆ ಬರೋದಿಲ್ಲ ಎಂದು ಹೇಳುತ್ತಾರೆ. ಕೆಲವು ರಾಶಿಗಳನ್ನು ಕಂಡರೆ ಶಿವನಿಗೂ ವಿಶೇಷ ಪ್ರೀತಿ ಇದೆ. ಆ ರಾಶಿಗಳಿಗೆ ಇಡೀ ಜೀವನದಲ್ಲಿ ಯಾವುದೇ ಆರ್ಥಿಕ ಸಮಸ್ಯೆ ಬರುವುದಿಲ್ಲ, ಹಾಗಿದ್ದಲ್ಲಿ ಶಿವ ಮೆಚ್ಚುವ ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮಿಥುನ ರಾಶಿ :- ಶಿವನ ಕೃಪೆ ನಿಮ್ಮ ಮೇಲೆ ಇರುವುದರಿಂದ ಸಮಾಜದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಇದ್ದ ಸಮಸ್ಯೆಗಳು ದೂರವಾಗುತ್ತದೆ. ಕುಟುಂಬದಲ್ಲಿ ಆತ್ಮೀಯತೆ ಹೆಚ್ಚಾಗುತ್ತದೆ. ಪ್ರೀತಿಯಲ್ಲಿ ಯಶಸ್ಸು ಪಡೆಯುತ್ತೀರಿ, ಬ್ಯುಸಿನೆಸ್ ಮಾಡುತ್ತಿರುವವರಿಗೆ ಲಾಭ ಸಿಗುತ್ತದೆ. ಈ ವೇಳೆ ಐಷಾರಾಮಿ ಜೀವನ ನಿಮ್ಮದಾಗುತ್ತದೆ.

ಕರ್ಕಾಟಕ ರಾಶಿ :- ಶಿವನ ಆಶೀರ್ವಾದ ಇವರ ಮೇಲೆ ಇರುವ ಕಾರಣ ಇವರ ಭವಿಷ್ಯ ಸುಂದರವಾಗಿರಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗುತ್ತದೆ, ಇನ್ನು ಕೆಲಸ ಸಿಗದವರಿಗೆ ಒಳ್ಳೆಯ ಕೆಲಸ ಸಿಗುತ್ತದೆ. ಬದುಕಿನ ಎಲ್ಲಾ ಸಮಸ್ಯೆಗಳು ಪರಿಹಾರ ಆಗುತ್ತದೆ. ಉದ್ಯೋಗದಲ್ಲಿ ಏಳಿಗೆ ಕಾಣುತ್ತೀರಿ. ಅರ್ಧಕ್ಕೆ ನಿಂತ ಕೆಲಸಗಳು ಪೂರ್ತಿಯಾಗುತ್ತದೆ.

ವೃಷಭ ರಾಶಿ :- ಇವರ ಮೇಲೆ ಯಾವಾಗಲೂ ಶಿವನ ಆಶೀರ್ವಾದ ಇರುತ್ತದೆ, ಮುಂದಿನ ವರ್ಷ ನಿಮ್ಮ ಎಲ್ಲಾ ಆಸೆಗಳು ಕನಸುಗಳು ನನಸಾಗುತ್ತದೆ. ಇಡೀ ವರ್ಷ ಹಣ ನಿಮ್ಮದಾಗುತ್ತದೆ. ಶಿವನ ಆಶೀರ್ವಾದ ಇರುವುದರಿಂದ ಹೊರದೇಶಕ್ಕೆ ಹೋಗುವ ಅವಕಾಶ ಸಿಗುತ್ತದೆ. ಮನೆಯಲ್ಲಿರುವ ಎಲ್ಲಾ ತೊಂದರೆಗಳು ದೂರವಾಗುತ್ತದೆ. ಪ್ರಯಾಣ ಮಾಡುವುದರಿಂದ ಹೆಚ್ಚು ಅನುಕೂಲ ಪಡೆಯುತ್ತೀರಿ.

Leave A Reply

Your email address will not be published.