Horoscope: ಹೊಸ ವರ್ಷಕ್ಕಿಂತ ಮೊದಲು ಮಂಗಳನ ಸ್ಥಾನ ಬದಲಾವಣೆ, ಈ ರಾಶಿಗಳಿಗೆ ಶುಭಸಮಯ ಶುರು!

Written by Pooja Siddaraj

Published on:

Horoscope: ಹೊಸ ವರ್ಷ ಶುರು ಆಗುವುದಕ್ಕೆ ಉಳಿದಿರುವುದು ಇನ್ನು ಕೆಲವೇ ದಿನಗಳು. ಈ ವೇಳೆ ಇನ್ನೆರಡು ದಿನಗಳಲ್ಲಿ ಮಂಗಳ ಗ್ರಹದ ಸ್ಥಾನ ಬದಲಾವಣೆ ಆಗಲಿದೆ, ಈಗ ವೃಶ್ಚಿಕ ರಾಶಿಯಲ್ಲಿರುವ ಮಂಗಳನು ಧನು ರಾಶಿಗೆ ಪ್ರವೇಶ ಮಾಡಲಿದ್ದಾನೆ. ಡಿಸೆಂಬರ್ 27ರ ರಾತ್ರಿ 11:40ಕ್ಕೆ ಈ ಸ್ಥಾನ ಬದಲಾವಣೆ ನಡೆಯಲಿದೆ. ಈ ಬದಲಾವಣೆ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಬೀಳಲಿದ್ದು, ಕೆಲವು ರಾಶಿಗಳ ಮೇಲೆ ವಿಶೇಷ ಅನುಗ್ರಹ ಸಿಗಲಿದೆ. ಆ ರಾಶಿಗಳು ಯಾವುವು? ಅವುಗಳಿಗೆ ಏನೆಲ್ಲಾ ಬದಲಾವಣೆ ಸಿಗಲಿದೆ ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಮಂಗಳನ ಸ್ಥಾನ ಬದಲಾವಣೆ ಇಂದ ಇವರಿಗೆ ಹೆಚ್ಚಿನ ಪ್ರಯೋಜನ ಸಿಗುತ್ತದೆ. ಈ ವೇಳೆ ನೀವು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು, ಬ್ಯುಸಿನೆಸ್ ನಲ್ಲಿ ಹೆಚ್ಚು ಪರಿಣಾಮ ವಹಿಸಿದರೆ, ಒಳ್ಳೆಯ ಫಲ ಪಡೆಯುತ್ತೀರಿ. ಈ ಸಮಯದಲ್ಲಿ ಮನೆಯವರ ಜೊತೆಗೆ ಪ್ರವಾಸಕ್ಕೆ ಹೋಗಿ ಬರುತ್ತೀರಿ.

ತುಲಾ ರಾಶಿ :- ಮಂಗಳನ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಮಂಗಳಕರ ಫಲಿತಾಂಶ ತರುತ್ತದೆ. ಇನ್ನು ಮದುವೆ ಆಗದೆ ಇರುವವರಿಗೆ ಮಂಗಳನ ಸ್ಥಾನ ಬದಲಾವಣೆ ಇಂದ ಒಳ್ಳೆಯ ಸಂಬಂಧ ಕೂಡಿಬರುತ್ತದೆ. ಹೊಸ ಕೆಲಸ ಶುರು ಮಾಡುವುದಕ್ಕೆ ಇದು ಒಳ್ಳೆಯ ಸಮಯ ಆಗಿದೆ. ಈ ವೇಳೆ ನೀವು ಶುರು ಮಾಡುವ ಎಲ್ಲಾ ಕೆಲಸದಲ್ಲಿ ಯಶಸ್ಸು ನಿಮಗೆ ಸಿಗುತ್ತದೆ..

ವೃಶ್ಚಿಕ ರಾಶಿ :- ಈ ರಾಶಿಯ ಅಧಿಪತಿಯೇ ಮಂಗಳ ಗ್ರಹ, ಹಾಗಾಗಿ ಇವರಿಗೆ ಇದು ಶುಭ ಸಮಯ ಎಂದರೆ ತಪ್ಪಲ್ಲ. ಈ ವೇಳೆ ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗುತ್ತದೆ. ಹೊಸ ಕೆಲಸಕ್ಕಾಗಿ ಹುಡುಕುತ್ತಿರುವವರಿಗೆ ಈ ವೇಳೆ ಹೊಸ ಕೆಲಸ ಸಿಗುತ್ತಿದೆ. ಹಣಕಾಸಿನ ವಿಷಯದಲ್ಲಿ ಒಳ್ಳೆಯ ಫಲ ಸಿಗುತ್ತದೆ. ಇದು ನಿಮಗೆ ಒಳ್ಳೆಯ ಸಮಯ ಎಂದು ಹೇಳಬಹುದು.

Leave a Comment