Horoscope: ಮಕರ ರಾಶಿಗೆ ಮಂಗಳನ ಆಗಮನ! 4 ರಾಶಿಗಳ ಬದುಕಿನಲ್ಲಿ ಮುಖ್ಯವಾದ ಬದಲಾವಣೆ ಆಗಲಿದೆ!

0 18

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳನನ್ನು ಗ್ರಹಗಳ ಕಮಾಂಡರ್ ಎಂದು ಕರೆಯುತ್ತಾರೆ. ಪ್ರಸ್ತುತ ಮಂಗಳನು ಧನು ರಾಶಿಯಲ್ಲಿದ್ದು, ಇದೇ ಫೆಬ್ರವರಿ 6ರಂದು ಮಕರ ರಾಶಿಗೆ ಪ್ರವೇಶ ಮಾಡಲಿದ್ದಾನೆ. 2024ರ ಮಾರ್ಚ್ 15ರವರೆಗೂ ಇದೇ ರಾಶಿಯಲ್ಲಿ ಇರಲಿದ್ದಾನೆ. ಈ ವೇಳೆ ಮಂಗಳನ ಪ್ರಭಾವ ಎಲ್ಲಾ ರಾಶಿಗಳ ಮೇಲೆ ಬೀರಲಿದ್ದು, ವಿಶೇಷವಾಗಿ 4 ರಾಶಿಗಳ ಮೇಲೆ ಮಂಗಳನ ವಿಶೇಷ ಅನುಗ್ರಹ ಇರಲಿದೆ. ಈ 4 ರಾಶಿಗಳ ಬದುಕಿನಲ್ಲಿ ಮುಖ್ಯವಾದ ಪರಿಣಾಮಗಳು ನಡೆಯಲಿದ್ದು, ಆ ರಾಶಿಗಳು ಯಾವುವು? ಅವುಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಮಂಗಳನ ಸ್ಥಾನ ಬದಲಾವಣೆ ಇವರಿಗೆ ಮಂಗಳಕರ ಫಲ ನೀಡುತ್ತದೆ. ಈ ವೇಳೆ ನಿಮ್ಮ ಬ್ಯುಸಿನೆಸ್ ನಲ್ಲಿ ಹೆಚ್ಚಿನ ಏಳಿಗೆ ಕಾಣುತ್ತೀರಿ. ಕೆಲಸಕ್ಕಾಗಿ ಪ್ರಯತ್ನ ಪಡುತ್ತಿರುವವರಿಗೆ ಒಳ್ಳೆಯ ಕೆಲಸ ಸಿಗುತ್ತದೆ.

ಮಿಥುನ ರಾಶಿ :- ಮಂಗಳನ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಒಳ್ಳೆಯ ಪರಿಣಾಮ ಬೀರುವುದಿಲ್ಲ. ಸಹೋದರ ಸಹೋದರಿಯರ ಜೊತೆಗೆ ಇದು ಒಳ್ಳೆಯ ಸಮಯ ಅಲ್ಲ, ಅವರ ಮೇಲೆ ನೀವು ಕೋಪ ಮಾಡಿಕೊಳ್ಳಬಹುದು. ವಿವಾದ ಸೃಷ್ಟಿಸುವಂಥ ಘಟನೆಗಳಿಂದ ದೂರವಿರಿ, ಆರೋಗ್ಯ ಸಮಸ್ಯೆಗಳು ಶುರುವಾಗುವ ಸಾಧ್ಯತೆ ಇರುತ್ತದೆ.

ತುಲಾ ರಾಶಿ :- ಮಂಗಳನ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಶುಭ ಫಲಿತಾಂಶ ತರುತ್ತದೆ. ಮನೆ, ಅಂತಸ್ತು, ವಾಹನ ಇವುಗಳಿಂದ ಲಾಭ ಪಡೆಯುತ್ತೀರಿ! ಉದ್ಯೋಗದಲ್ಲಿ ಏಳಿಗೆ ಕಾಣುತ್ತೀರಿ. ಫೆಬ್ರವರಿ 15ರ ನಂತರ ಅಪಘಾತ ಆಗುವ ಸಾಧ್ಯತೆ ಇದೆ, ಹಾಗಾಗಿ ಹುಷಾರಾಗಿರಿ.

ಮಕರ ರಾಶಿ :- ಮಂಗಳನ ಸ್ಥಾನ ಬದಲಾವಣೆ ನಿಮಗೆ ಒಳ್ಳೆಯ ಫಲ ನೀಡುವುದಿಲ್ಲ. ಈ ವೇಳೆ ಸಿಟ್ಟು ಕಂಟ್ರೋಲ್ ಮಾಡುವುದು ಒಳ್ಳೆಯದು. ಆಹಾರ ಉತ್ತಮವಾಗಿ ಸೇವಿಸುವುದರಿಂದ ಆರೋಗ್ಯ ಸಮಸ್ಯೆ ಬರುವದನ್ನು ತಪ್ಪಿಸಬಹುರು. ವಾಹನ ಚಲಾಯಿಸುವಾಗ ಹುಷಾರಾಗಿರಿ, ಸರ್ಕಾರಿ ಕೆಲಸಕ್ಕಾಗಿ ಟ್ರೈ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ.

Leave A Reply

Your email address will not be published.