Horoscope: ಮಂಗಳನ ಕೃಪೆಯಿಂದ ಈ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ.

Written by Pooja Siddaraj

Published on:

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿ ಗ್ರಹಕ್ಕೆ ತನ್ನದೇ ಆದ ಮಹತ್ವವಿದೆ. ಪ್ರಸ್ತುತ ಮಂಗಳ ಗ್ರಹವು ಮೇಷ ರಾಶಿಯಲ್ಲಿದ್ದು, ನೇರನಡೆಯಲ್ಲಿ ಸಾಗುತ್ತಿದೆ. ಈ ಬದಲಾವಣೆ ಕೆಲವು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರಲಿದ್ದು, ಕೆಲವು ರಾಶಿಗಳ ಮೇಲೆ ವಿಶೇಷವಾಗಿ ಇರಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಯೋಣ..

ಮೇಷ ರಾಶಿ :- ಮಂಗಳ ಮತ್ತು ಗುರು ಇಬ್ಬರು ಸ್ನೇಹಿತರಾಗಿದ್ದು, ಈ ವೇಳೆ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ..ಕೆಲಸ ಮಾಡುವ ಶೈಲಿ ಏಳಿಗೆ ಆಗುತ್ತದೆ, ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಒಳ್ಳೆಯ ಸುದ್ದಿ ಪಡೆಯುತ್ತೀರಿ. ಮದುವೆ ಆಗಲು ಬಯಸುತ್ತಿರುವವರಿಗೆ, ಲವ್ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ. ಈ ವೇಳೆ ವಿದೇಶಕ್ಕೆ ಹೋಗುವ ಅವಕಾಶ ಸಿಗಬಹುದು.

ಮೀನಾ ರಾಶಿ ;- ಈ ರಾಶಿಯವರಿಗೆ ಧನಲಾಭ ಸಿಗಲಿದೆ. ಬ್ಯುಸಿನೆಸ್ ಮತ್ತು ಕೆಲಸ ಎರಡರಲ್ಲಿ ಹೊಸ ಬದಲಾವಣೆ ಮತ್ತು ಏಳಿಗೆ ಉಂಟಾಗುತ್ತದೆ, ಅವಕಾಶ ಸಿಗುತ್ತದೆ. ವಿದ್ಯಾರ್ಥಿಗಳಿಗೆ ಇದು ಶುಭ ಸಮಯ. ಮಾತನಾಡುವ ಕಲೆಯಿಂದ ಜನರನ್ನು ಆಕರ್ಷಿಸುತ್ತೀರಿ.. ನಿಮ್ಮ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ. ಕೆಲಸ ಇಲ್ಲದೆ ಇರುವವರಿಗೆ ಹೊಸ ಕೆಲಸ ಸಿಗುತ್ತದೆ. ಕೆಲಸ ಇರುವವರಿಗೆ ಪ್ರಮೋಷನ್ ಇನ್ಕ್ರಿಮೆಂಟ್ ಸಿಗುತ್ತದೆ.

ಧನು ರಾಶಿ :- ಮಕ್ಕಳ ವಿಚಾರದಲ್ಲಿ ಒಳ್ಳೆಯ ಸುದ್ದಿ ಕೇಳುತ್ತೀರಿ. ಇನ್ನು ಮಕ್ಕಳಾಗದೆ ಇರುವವರಿಗೆ ಸಂತಾನ ಭಾಗ್ಯ ಸಿಗಲಿದೆ. ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲಿ ಒಳ್ಳೆಯ ಅವಕಾಶಗಳು ಸಿಗುತ್ತದೆ. ಮನೆಯ ಎಲ್ಲರೂ ಕೂಡ ನಿಮ್ಮ ಮಾತನ್ನು ಕೇಳುತ್ತಾರೆ. ಬೇರೆ ಕಡೆ ಸಿಕ್ಕಿಹಾಕಿಕೊಂಡಿರುವ ಹಣ, ನಿಮ್ಮ ಕೈಸೇರುತ್ತದೆ. ಮನೆಯವರಿಂದ ಒಳ್ಳೆಯದಾಗುತ್ತದೆ. ದಿಢೀರ್ ಧನಲಾಭ ಪ್ರಾಪ್ತಿಯಾಗುತ್ತದೆ.

Leave a Comment