Horoscope: ಕೇವಲ 5 ದಿನಗಳಲ್ಲಿ ರಾಹು ಗೋಚರ, ಈ 4 ರಾಶಿಗಳಿಗೆ ಅದೃಷ್ಟ ಶುರು

Written by Pooja Siddaraj

Published on:

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹು ಮತ್ತು ಕೇತು ಗ್ರಹವನ್ನು ಪಾಪದ ಗ್ರಹಗಳು ಎಂದು ಕರೆಯುತ್ತಾರೆ. ಈ ಎರಡು ಗ್ರಹಗಳಿಂದ ಆಗುವುದು ಅಶುಭ ಪರಿಣಾಮ ಎಂದು ಕೂಡ ಹೇಳುತ್ತಾರೆ. ಈ ಗ್ರಹಗಳ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಈ ಗ್ರಹಗಳ ಸ್ಥಾನ ಬದಲಾವಣೆ ಆದಾಗ, ಅದರಿಂದ ಕೆಲವು ಗ್ರಹಗಳಿಗೆ ಶುಭವಾಗುವುದರ ಜೊತೆಗೆ ಅದೃಷ್ಟ ಶುರುವಾಗುತ್ತದೆ. ರಾಹು ಕೇತು ಸಂಯೋಗ ರಾಜಯೋಗವನ್ನು ಕೂಡ ಸೃಷ್ಟಿಸುತ್ತದೆ.

ಯಾವಾಗಲೂ ಜೊತೆಯಾಗಿ ಸಾಗುವ ರಾಹು ಮತ್ತು ಕೇತು ಗ್ರಹಗಳು 2023ರ ಆಕ್ಟೊಬರ್ 30ರಂದು ತಮ್ಮ ಸ್ಥಾನ ಬದಲಾವಣೆ ಮಾಡಿ, ಮೀನ ರಾಶಿಗೆ ಪ್ರವೇಶ ಮಾಡಲಿದೆ. ಈ ಎರಡು ಗ್ರಹಗಳ ಸ್ಥಾನ ಬದಲಾವಣೆ ನಡೆಯುತ್ತಿರುವುದು 18 ತಿಂಗಳುಗಳ ನಂತರ, ಹಾಗಾಗಿ ಈ ಸ್ಥಾನ ಬದಲಾವಣೆ ಕೆಲವು ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ತುಲಾ ರಾಶಿ :- ರಾಹು ಗೋಚರದಿಂದ ಇವರಿಗೆ ಶುಭ ಸಮಯ ಶುರುವಾಗುತ್ತದೆ, ಒಳ್ಳೆಯ ಪ್ರತಿಫಲ ಸಿಗಲಿದೆ. ಬ್ಯುಸಿನೆಸ್ ನಲ್ಲಿ ಹೆಚ್ಚಿನ ಲಾಭ ಪಡೆಯುತ್ತಾರೆ. ಹೂಡಿಕೆ ಮಾಡುವುದರಿಂದ ಹಣಕಾಸಿನ ಲಾಭ ಸಿಗುತ್ತದೆ. ದೇವಸ್ಥಾನಗಳಿಗೆ ಭೇಟಿ ನೀಡುತ್ತೀರಿ. ರಾಹುವಿನ ಸ್ಥಾನ ಬದಲಾವಣೆ ನಿಮಗೆ ಲಾಭದಾಯಕವಾಗಿರುತ್ತದೆ.

ವೃಶ್ಚಿಕ ರಾಶಿ :- ರಾಹುವಿನ ಪ್ರವೇಶ ಮೀನ ರಾಶಿಗೆ ಆಗುವುದರಿಂದ ನಿಮ್ಮ ಒಳ್ಳೆಯ ಸಮಯ ಎಲ್ಲವೂ ಶುಭವಾಗುವ ಹಾಗೆ ಮಾಡುತ್ತದೆ. ಈ ಬದಲಾವಣೆ ಇಂದ ಹಣಕಾಸಿನ ವಿಷಯದಲ್ಲಿ ಹೆಚ್ಚು ಲಾಭವಾಗಬಹುದು. ಎಲ್ಲಾ ಕೆಲಸದಲ್ಲಿ ಯಶಸ್ಸು ನಿಮ್ಮದಾಗುತ್ತದೆ, ಖುಷಿಯಾಗಿರುತ್ತೀರಿ. ದಿಢೀರ್ ಧನಲಾಭ ಉಂಟಾಗುತ್ತದೆ. ಬ್ಯುಸಿನೆಸ್ ನಲ್ಲಿ ಲಾಭವಾಗುತ್ತದೆ.

ಧನು ರಾಶಿ :- ರಾಹುವಿನ ಸ್ಥಾನ ಬದಲಾವಣೆ ನಿಮಗೆ ಒಂದು ರೀತಿಯಲ್ಲಿ ದೇವರಿಂದ ವರ ಸಿಕ್ಕ ಹಾಗೆ. ಈ ವೇಳೆ ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ. ದಾಂಪತ್ಯ ಜೀವನ ಸಂತೋಷದಿಂದ ಕೂಡಿರುತ್ತದೆ. ಕೆಲಸದಲ್ಲಿ ಏಳಿಗೆ ಕಾಣುತ್ತೀರಿ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ಮನೆಯಲ್ಲಿ ಮತ್ತು ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ.

Leave a Comment