Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾಪ ಗ್ರಹಗಳು ಎಂದು ಕರೆಯಲ್ಪಡುವ ರಾಹು ಮತ್ತು ಕೇತು ಗ್ರಹಗಳು ಇದೀಗ ಸ್ಥಾನ ಬದಲಾವಣೆ ಮಾಡಿವೆ. ಆಕ್ಟೊಬರ್ 30ರಂದು ರಾಹು ಗ್ರಹ ಮೀನ ರಾಶಿಗೆ ತಲುಪಿದೆ ಹಾಗೆಯೇ ಕೇತು ಗ್ರಹ ಕನ್ಯಾ ರಾಶಿಗೆ ತಲುಪಿದೆ. ಈ ಎರಡು ಗ್ರಹಗಳ ಸ್ಥಾನ ಬದಲಾವಣೆ ಇಂದ ಕೆಲವು ರಾಶಿಗಳಿಗೆ ವಿಶೇಷವಾದ ಫಲ ಸಿಗಲಿದ್ದು, ಆ ರಾಶಿಗಳು ಯಾವುವು? ಅವುಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..
ವೃಷಭ ರಾಶಿ :- ರಾಹು ಮತ್ತು ಕೇತು ಗ್ರಹಗಳ ಸ್ಥಾನ ಬದಲಾವಣೆ ಇಂದ ನಿಮಗೆ ಹಣಕಾಸಿನ ವಿಷಯದಲ್ಲಿ ಲಾಭ ಹೆಚ್ಚಾಗುತ್ತದೆ. ನಿಮ್ಮ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ. ಈ ವೇಳೆ ನಿಮ್ಮ ಸಂಗಾತಿಯ ಸಪೋರ್ಟ್ ಸಿಗುತ್ತದೆ. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ..ಈ ವೇಳೆ ಭೂಮಿ, ಪ್ರಾಪರ್ಟಿ ಅಥವಾ ವಾಹನ ಖರೀದಿ ಮಾಡಬಹುದು..
ಮಿಥುನ ರಾಶಿ :- ರಾಹು ಮತ್ತು ಕೇತು ಗ್ರಹಗಳ ಪರಿಣಾಮದಿಂದ ಮುಂದಿನ ಒಂದೂವರೆ ವರ್ಷಗಳ ಕಾಲ ನಿಮಗೆ ಹೆಚ್ಚಿನ ಲಾಭ ಸಿಗಲಿದೆ. ಉದ್ಯೋಗದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳ ಸಪೋರ್ಟ್ ಸಿಗುತ್ತದೆ. ಮನೆಯವರ ಜೊತೆಗೆ ಒಳ್ಳೆಯ ಸಮಯ ಕಳೆಯುತ್ತೀರಿ. ಈ ವೇಳೆ ಸಂಗಾತಿಯ ಸಪೋರ್ಟ್ ಕೂಡ ಸಿಗುತ್ತದೆ. ಹಣ ಬರುವುದು ಹೆಚ್ಚಾಗುತ್ತದೆ.
ಮಕರ ರಾಶಿ :- ರಾಹು ಮತ್ತು ಕೇತುವಿನ ಸಂಚಾರ ಈ ರಾಶಿಯವರಿಗೆ ಶುಭಫಲ ನೀಡುತ್ತದೆ. ಬದುಕಿನಲ್ಲಿದ್ದ ಹಣಕಾಸಿನ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ. ಈ ವೇಳೆ ಮಕ್ಕಳ ಸಪೋರ್ಟ್ ಕೂಡ ಸಿಗುತ್ತದೆ. ಉದ್ಯೋಗದ ಸ್ಥಳದಲ್ಲಿ ಏಳಿಗೆ ಇರುತ್ತದೆ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.
ಕರ್ಕಾಟಕ ರಾಶಿ :- ರಾಹು ಮತ್ತು ಕೇತು ಗ್ರಹಗಳ ಗೋಚರವಾಗಲಿದೆ. ಇದರ ಪರಿಣಾಮ ಸ್ಪರ್ಧಾತ್ಮಕ ಪರೀಕ್ಷೆಗಾಗಿ ತಯಾರಿ ನಡೆಸುತ್ತಿರುವವರಿಗೆ ಒಳ್ಳೆಯದಾಗುತ್ತದೆ. ಈ ವೇಳೆ ನಿಮ್ಮ ಸಂಗಾತಿ ಮತ್ತು ಮಕ್ಕಳಿಂದ ಬೆಂಬಲ ಸಿಗುತ್ತದೆ. ಈ ಸಮಯದಲ್ಲಿ ನೀವು ದೊಡ್ಡ ಸಾಧನೆ ಮಾಡುತ್ತೀರಿ.