Horoscope: ಶನಿ ಕೇತುವಿನಿಂದ ರೂಪುಗೊಳ್ಳಲಿದೆ ಷಡಷ್ಟಕ ಯೋಗ, ಈ ರಾಶಿಗಳಿಗೆ ಅದೃಷ್ಟ ಶುರು

0 1

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿದೇವರು ನ್ಯಾಯದ ದೇವರಾದರೆ, ಕೇತುವನ್ನು ಛಾಯಾಗ್ರಾಹಕ ಎಂದು ಕರೆಯುತ್ತಾರೆ. ಇವರಿಬ್ಬರು ಮುಂದಿನ ವರ್ಷ ಜೊತೆಗೂಡಲಿದ್ದು ಇದರಿಂದ ಷಡಷ್ಟಕ ಯೋಗ ರೂಪುಗೊಳ್ಳಲಿದೆ. ಪ್ರಸ್ತುತ ಶನಿ ಕುಂಭ ರಾಶಿಯಲ್ಲಿದ್ದು, ಮುಂದಿನ ವರ್ಷ ಕೂಡ ಇದೇ ರಾಶಿಯಲ್ಲಿ ಇರಲಿದ್ದಾನೆ, ಇದೇ ರಾಶಿಗೆ ಕೇತುವಿನ ಆಗಮನದಿಂದ ಯೋಗ ರೂಪುಗೊಳ್ಳಲಿದ್ದು, 2027ರವರೆಗು ಈ ಯೋಗದ ಪರಿಣಾಮ ಇರಲಿದೆ. ಈ ಯೋಗದ ಪ್ರಯೋಜನ ಪಡೆಯುವ ರಾಶಿಗಳು ಯಾವುವು ಎಂದು ಈಗ ತಿಳಿಯೋಣ..

ವೃಷಭ ರಾಶಿ :- ಷಡಾಷ್ಟಕ ಯೋಗ ಈ ರಾಶಿಯವರಿಗೆ ಶುಭ ತರುತ್ತದೆ. ಮುಂದಿನ ವರ್ಷ ಇವರಿಗೆ ಅದೃಷ್ಟ ಇರಲಿದೆ, ಸರ್ಕಾರಿ ಕೆಲಸ ಅಥವಾ ಒಳ್ಳೆಯ ಕಂಪನಿಯಲ್ಲಿ ಕೆಲಸ ಸಿಗುವ ಸಂಭವವಿದೆ..ಉದ್ಯೋಗದಲ್ಲಿ ಯಶಸ್ಸು ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ.

ಸಿಂಹ ರಾಶಿ :- ಷಡಾಷ್ಟಕ ಯೋಗ ಈ ರಾಶಿಯವರಿಗೆ ಹೆಚ್ಚಿನ ಅನುಕೂಲ ತಂದುಕೊಡುತ್ತದೆ. ಅರ್ಧಕ್ಕೆ ನಿಂತಿರುವ ಕೆಲಸಗಳು ಈ ಸಮಯದಲ್ಲಿ ಪೂರ್ತಿಯಾಗುತ್ತದೆ. ಬದುಕಿನ ಸಮಸ್ಯೆಗಳು ಕೊನೆಯಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಮೊದಲಿಗಿಂತ ಸಬಲರಾಗುತ್ತೀರಿ.

ಕನ್ಯಾ ರಾಶಿ ;- ಮುಂದಿನ ವರ್ಷ ನಿಮಗೆ ಹೆಚ್ಚಿನ ಯಶಸ್ಸು ಸಿಗುತ್ತದೆ. ಸಮಾಜದಲ್ಲಿ ಗೌರವ ಪ್ರತಿಷ್ಠೆ ಸಿಗುತ್ತದೆ. ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ಏಳಿಗೆ ಕಾಣುತ್ತೀರಿ. ಬದುಕಿನಲ್ಲಿ ಖುಷಿ ಇರುತ್ತದೆ. ಕೆಲಸದಲ್ಲಿ ಹೊಸ ಅವಕಾಶ ಸಿಗುತ್ತದೆ.

ತುಲಾ ರಾಶಿ :- ಇವರಿಗೆ ಷಡಾಷ್ಟಕ ಯೋಗದಿಂದ ಹೆಚ್ಚು ಲಾಭ ಸಿಗುತ್ತದೆ. ಇದರಿಂದ ನಿಮ್ಮ ಅದೃಷ್ಟ ಹೆಚ್ಚಾಗುತ್ತದೆ. ಹೊಸ ಕೆಲಸ್ ಸಿಗಬಹುದು. ಸಮಾಜದಲ್ಲಿ ಶ್ರೇಷ್ಠ ಸ್ಥಾನ ಸಿಗುತ್ತದೆ. ಮನೆಯಲ್ಲಿ ಸಂತೋಷ ಸಮೃದ್ಧಿ ಇರುತ್ತದೆ.

Leave A Reply

Your email address will not be published.