Horoscope: ಶನಿ ಮತ್ತು ಬುಧನ ಸಂಚಾರದಿಂದ ಈ ರಾಶಿಗಳ ಬದುಕಿನಲ್ಲಿ ಸಂಪತ್ತಿನ ಮಳೆ

Written by Pooja Siddaraj

Published on:

Horoscope: ಶನಿಗ್ರಹಕ್ಕೆ ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷವಾದ ಸ್ಥಾನವಿದೆ. ಶನಿದೇವರನ್ನು ಕರ್ಮಫಲದಾತ ಎಂದು ಕರೆಯುತ್ತಾರೆ. ಪ್ರತಿ ವ್ಯಕ್ತಿ ಮಾಡುವ ಕೆಲಸದ ಅನುಸಾರ ಶನಿದೇವರು ಆತನಿಗೆ ಫಲ ನೀಡುತ್ತಾರೆ. ಜಾತಕದಲ್ಲಿ ಶನಿದೇವರು ಒಳ್ಳೆಯ ಸ್ಥಾನದಲ್ಲಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಇನ್ನು ಬುಧ ಕೂಡ ಅದೇ ರೀತಿ, ಉತ್ತಮ ಸ್ಥಾನದಲ್ಲಿದ್ದರೆ, ಬುಧನು ಯಶಸ್ಸು ಮತ್ತು ಶುಭ ತರುತ್ತಾನೆ. ಈ ಎರಡು ಗ್ರಹಗಳು ಆಕ್ಟೊಬರ್ 15ರಂದು ತಮ್ಮ ನಕ್ಷತ್ರ ಬದಲಾವಣೆ ಮಾಡಿದ್ದಾರೆ. ಈ ವೇಳೆ ಈ ಎರಡು ಗ್ರಹಗಳ ಶುಭಫಲದಿಂದ ಅಪಾರವಾದ ಸಂಪತ್ತು, ಯಶಸ್ಸು, ಹಣ ಪಡೆಯುವ ಗ್ರಹಗಳು ಯಾವುವು ಎಂದು ಈಗ ತಿಳಿಯೋಣ..

ಸಿಂಹ ರಾಶಿ :- ಈ ವೇಳೆ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ, ಬದುಕಿನಲ್ಲಿ ಏಳಿಗೆ ಇರುತ್ತದೆ. ಈ ವೇಳೆ ನಿಮ್ಮ ಪರಿಶ್ರಮದ ಅವಶ್ಯಕತೆ ಜಾಸ್ತಿ ಇರುತ್ತದೆ. ಹಾಗೆಯೇ ನಿಮ್ಮ ಅಮ್ಮನಿಂದ ಹಣ ಪಡೆಯುತ್ತೀರಿ. ಈ ವೇಳೆ ನಿಮಗೆ ಹೆಚ್ಚಿನ ಲಾಭ ಸಿಗುವುದರ ಜೊತೆಗೆ ಖರ್ಚು ಕೂಡ ಹೆಚ್ಚಾಗಿರುತ್ತದೆ.

ಕರ್ಕಾಟಕ ರಾಶಿ :- ಎರಡು ಪ್ರಮುಖ ಗ್ರಹಗಳ ನಕ್ಷತ್ರ ಬದಲಾವಣೆ ನಿಮಗೆ ಹೆಚ್ಚಿನ ಲಾಭ ತಂದುಕೊಡುತ್ತದೆ. ಈ ಸಮಯ ನಿಮ್ಮ ಮನಸ್ಸಿಗೆ ಅಗತ್ಯವಿರುವಷ್ಟು ಶಾಂತಿ ಸಿಗುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ, ಈ ವೇಳೆ ಮಾತಿನಲ್ಲಿ ತಾಳ್ಮೆ ಇಟ್ಟುಕೊಳ್ಳುವುದು ತುಂಬಾ ಒಳ್ಳೆಯದು. ತಂದೆ ತಾಯಿಯ ಸಪೋರ್ಟ್ ನಿಮಗೆ ಸಿಗುತ್ತದೆ.

ಮಕರ ರಾಶಿ :- ಎರಡು ಗ್ರಹಗಳ ಬದಲಾವಣೆ ಇಂದ ನಿಮಗೆ ಹೆಚ್ಚಿನ ಲಾಭ ಸಿಗುತ್ತದೆ. ಈ ಸಮಯದಲ್ಲಿ ತಾಳ್ಮೆಯಿಂದ ಇರುವುದು ಒಳ್ಳೆಯದು. ಶಿಕ್ಷಣದ ವಿಚಾರದಲ್ಲಿ ನೀವು ಅಂದುಕೊಂಡಿದ್ದು ಎಲ್ಲವೂ ನಡೆಯುತ್ತದೆ, ಒಳ್ಳೆಯ ಫಲಿತಾಂಶ ಸಿಗುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಹಾಗೆಯೇ ನಿಮ್ಮ ಆದಾಯ ಕೂಡ ಜಾಸ್ತಿಯಾಗುತ್ತದೆ.

Leave a Comment