Horoscope: ಕುಂಭ ರಾಶಿಯಲ್ಲಿ ಶನಿದೇವನ ಸಂಚಾರ, ಈ ರಾಶಿಗಳಿಗೆ ಎಲ್ಲಿಲ್ಲದ ಅದೃಷ್ಟ ಶುರು!

Written by Pooja Siddaraj

Published on:

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿದೇವರಿಗೆ ವಿಶೇಷ ಸ್ಥಾನವಿದೆ. ಶನಿದೇವರು ಕರ್ಮಫಲದಾತ, ಒಬ್ಬ ವ್ಯಕ್ತಿ ಮಾಡುವ ಕರ್ಮದ ಅನುಸಾರ ಆತನಿಗೆ ಫಲ ನೀಡುತ್ತಾನೆ ಶನಿದೇವ. ಶನಿದೇವನ ಸ್ಥಾನ ಜಾತಕದಲ್ಲಿ ಚೆನ್ನಾಗಿಲ್ಲ ಎಂದರೆ ಆ ವ್ಯಕ್ತಿ ಬದುಕಿನಲ್ಲಿ ನಾನಾ ರೀತಿಯ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಪ್ರಸ್ತುತ ಶನಿದೇವನು ಕುಂಭ ರಾಶಿಯಲ್ಲಿದ್ದು, ಇದರಿಂದ ಕೆಲವು ರಾಶಿಗಳಿಗೆ ವಿಶೇಷ ಅದೃಷ್ಟ ಶುರುವಾಗಲಿದೆ.. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಈ ರಾಶಿಯ ಆದಾಯ ಹಾಗೂ ಲಾಭದ ಮನೆಯಲ್ಲಿ ಶನಿದೇವರ ಉದಯ ಆಗಲಿದೆ, 11ನೇ ಮನೆಯಲ್ಲಿ ಶನಿದೇವರ ಸಂಚಾರ ಇರುವುದರಿಂದ ಆದಾಯಕ್ಕೆ ಹೊಸ ಮಾರ್ಗಗಳು ಸೃಷ್ಟಿಯಾಗುತ್ತದೆ. ಹಣಕಾಸಿನ ಸ್ಥಿತಿ ಮೊದಲಿಗಿಂತ ಚೆನ್ನಾಗಿರುತ್ತದೆ. ಈ ವೇಳೆ ಹೂಡಿಕೆ ಮಾಡಿದರೆ ಲಾಭ ಸಿಗುತ್ತದೆ. ಎಲ್ಲಾ ಕೆಲಸದಲ್ಲೂ ಯಶಸ್ಸು ನಿಮ್ಮದೇ ಆಗಿರುತ್ತದೆ.

ಸಿಂಹ ರಾಶಿ :- ಈ ರಾಶಿಯ 7ನೇ ಮನೆಯಲ್ಲಿ ಶನಿದೇವರ ಉದಯ ಆಗಲಿದ್ದು, ಇವರಿಗೆ ಒಂದು ವರದ ರೀತಿ ಇರುತ್ತದೆ. ಈ ವೇಳೆ ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಪಾರ್ಟ್ನರ್ಶಿಪ್ ನಲ್ಲಿ ಕೆಲಸ ಮಾಡುವವರಿಗೆ ಒಳ್ಳೆಯ ಲಾಭ ಸಿಗುತ್ತದೆ. ಕಾನೂನಿನ ಕೇಸ್ ಗಳು ನಡೆಯುತ್ತಿದ್ದರೆ, ಜಯ ನಿಮ್ಮದೇ ಆಗಿರುತ್ತದೆ. ಹಣಕಾಸಿನ ಸ್ಥಿತಿ ಇನ್ನು ಚೆನ್ನಾಗಿರುತ್ತದೆ.

ಕುಂಭ ರಾಶಿ :- ಶನಿದೇವರು ಉದಯಿಸುತ್ತಿರುವುದು ಇದೇ ರಾಶಿಯಲ್ಲಿ, ಹಾಗಾಗಿ ಇವರಿಗೆ ಲಾಭ ಹೆಚ್ಚು. ಇವರಿಗೆ ಶನಿದೇವರ ವಿಶೇಷ ಆಶೀರ್ವಾದ ಸಿಗಲಿದ್ದು, ಕೆಲಸ ಮಾಡುತ್ತಿರುವವರಿಗೆ ಪ್ರತಿಷ್ಠೆ ಹೆಚ್ಚಾಗುತ್ತದೆ, ಕೆಲಸದಲ್ಲಿ ಬಡ್ತಿ ಸಿಗುತ್ತದೆ. ಒಳ್ಳೆಯ ಲಾಭದ ಜೊತೆಗೆ ಅವಕಾಶಗಳು ಕೂಡ ಸಿಗುತ್ತದೆ.

Leave a Comment