Horoscope: ಶನಿದೇವರು ಕರ್ಮಫಲದಾತ, ಇವರ ಕೃಪೆ ಇದ್ದರೆ ಬದುಕಿನಲ್ಲಿ ಯಾವುದೇ ಕಷ್ಟವೂ ಬರುವುದಿಲ್ಲ. ಪ್ರಸ್ತುತ ಶನಿದೇವರು ತನ್ನದೇ ಆದ ಕುಂಭ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾರೆ, ಮುಂದಿನ ವರ್ಷ ಕೂಡ ಶನಿದೇವರು ಇದೇ ರಾಶಿಯಲ್ಲಿ ಇರಲಿದ್ದು, ಬೇರೆ ರಾಶಿಗೆ ಸ್ಥಾನ ಬದಲಾವಣೆ ಮಾಡುವುದಿಲ್ಲ. ಬದಲಾಗಿ ಕುಂಭ ರಾಶಿಯಲ್ಲೇ ಇದ್ದು, ಅಲ್ಲಿಯೇ ಸ್ಥಾನಗಳ ಬದಲಾವಣೆ ಆಗುತ್ತದೆ. ಮುಂದಿನ ವರ್ಷ 2024ರ ಫೆಬ್ರವರಿ 11 ರಿಂದ ಮಾರ್ಚ್ 18ರ ವರೆಗು ಶನಿದೇವ ಅಸ್ತಮಿಸಲಿದ್ದಾನೆ.
ಮಾರ್ಚ್ 18ರಂದು ಉದಯಿಸಲಿದ್ದಾನೆ, ಹಾಗೆಯೇ 2024ರ ಜೂನ್ 29 ರಿಂದ ನವೆಂಬರ್ 15ರವರೆಗು ಹಿಮ್ಮುಖ ಚಲನೆ ಇರುತ್ತದೆ. ಶನಿದೇವರ ಈ ಸ್ಥಿತಿಯಲ್ಲಿ 5 ರಾಶಿಗಳಿಗೆ ವಿಶೇಷ ಫಲ ಸಿಗಲಿದೆ, ಆ ರಾಶಿಗಳು ಯಾವುವು? ಅವುಗಳಿಗೆ ಏನೆಲ್ಲಾ ವಿಶೇಷ ಫಲ ಸಿಗುತ್ತದೆ ಎಂದು ತಿಳಿಸುತ್ತೇವೆ..
ಮೇಷ ರಾಶಿ :- ಶನಿದೇವರು ಚಲನೆ ಇಂದ ಈ ರಾಶಿಯವರಿಗೆ ಹೆಚ್ಚು ಅದೃಷ್ಟ ಸಿಗುತ್ತದೆ. ಇವರಿಗೆ ಎಲ್ಲಾ ಥರದ ಖುಷಿ, ಸುಖಗಳು ಪ್ರಾಪ್ತಿಯಾಗುತ್ತದೆ. ಹೊಸದಾಗಿ ಶುರು ಮಾಡಿರುವ ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ಇವರಿಗೆ ಯಶಸ್ಸು ಸಿಗುತ್ತದೆ.
ವೃಷಭ ರಾಶಿ :- ಇವರಿಗೆ ಶನಿದೇವರಿಂದ ವಿಶೇಷ ಆಶೀರ್ವಾದ ಸಿಗಲಿದ್ದು, ನಿಮ್ಮ ಆದಾಯ ಹೆಚ್ಚಾಗುತ್ತದೆ. ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ನಿಮಗೆ ಏಳಿಗೆ ಕಾಣುತ್ತದೆ. ಹೆಚ್ಚಿನ ಲಾಭ ಪಡೆಯುತ್ತೀರಿ.
ತುಲಾ ರಾಶಿ :- ಶನಿದೇವರ ಕೃಪೆ ಇರುವುದರಿಂದ ನೀವು ಶುರು ಮಾಡುವ ಎಲ್ಲಾ ಕೆಲಸದಲ್ಲಿ ಯಶಸ್ಸು ನಿಮ್ಮದೇ ಆಗುತ್ತದೆ. ಶಿಕ್ಷಣಕ್ಕಾಗಿ ಅಥವಾ ಕೆಲಸಕ್ಕಾಗಿ ಹೊರದೇಶಕ್ಕೆ ಹೋಗಬೇಕು ಎಂದು ಅಂದುಕೊಂಡಿದ್ದರೆ, ನಿಮ್ಮ ಎಲ್ಲಾ ಕನಸುಗಳು ನನಸಾಗುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.
ಧನು ರಾಶಿ :- ಶನಿದೇವರ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಹೆಚ್ಚಿನ ಪ್ರಯೋಜನ ಸಿಗುತ್ತದೆ. ಎಲ್ಲಾ ಕೆಲಸದಲ್ಲಿ ಅದೃಷ್ಟ ನಿಮ್ಮ ಜೊತೆಗಿರುತ್ತದೆ. ಬದುಕಲ್ಲಿ ಸಂತೋಷ ಮತ್ತು ಸಮೃದ್ಧಿ ತುಂಬಿರುತ್ತದೆ.
ಮಕರ ರಾಶಿ :- ಮುಂದಿನ ವರ್ಷ ಶನಿದೇವರ ಕೃಪೆಯಿಂದ ನಿಮ್ಮ ಬದುಕಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಕೆಲಸದಲ್ಲಿ ಏಳಿಗೆ ಹಾಗೂ ಹಣಕಾಸಿನ ವಿಷಯದಲ್ಲಿ ಲಾಭ ಪಡೆಯುತ್ತೀರಿ. ಶನಿದೇವರ ಸಹಾಯದಿಂದ ನಿಮ್ಮ ಎಲ್ಲಾ ಸಮಸ್ಯೆಗಳು ಕರಗಿ ಹೋಗುತ್ತದೆ.