Horoscope: ನಕ್ಷತ್ರ ಬದಲಾವಣೆ ಮಾಡಲಿದ್ದಾನೆ ಶನಿದೇವ, ಇದರಿಂದ ಕೆಲವು ರಾಶಿಗಳಿಗೆ ವಿಶೇಷ ಪ್ರಯೋಜನ!

0 3

ಶನಿದೇವರು ಕರ್ಮಫಲದಾತ ಎಂದು ಕರೆಯುತ್ತಾರೆ, ಪ್ರತಿ ವ್ಯಕ್ತಿ ಮಾಡುವ ಫಲದ ಅನುಸಾರ ಅವರಿಗೆ ಫಲ ನೀಡುತ್ತಾನೆ ಶನಿದೇವ. 2023ರಲ್ಲಿ ಶನಿದೇವರು ಕುಂಭ ರಾಶಿಗೆ ಪ್ರವೇಶ ಮಾಡಿದ್ದು, 2025ರವರೆಗು ಇದೇ ರಾಶಿಯಲ್ಲಿ ಇರಲಿದ್ದಾನೆ. ಆದರೆ 2024ರಲ್ಲಿ ಶನಿದೇವರು ನಕ್ಷತ್ರ ಬದಲಾವಣೆ ಮಾಡಲಿದ್ದಾನೆ, ಈಗ ಶನಿದೇವರು ಶತಭಿಷ ನಕ್ಷತ್ರದಲ್ಲಿದ್ದು, 2024ರ ಏಪ್ರಿಲ್ 6ರಂದು ಪೂರ್ವ ಭಾದ್ರಪದ ನಕ್ಷತ್ರಕ್ಕೆ ಪ್ರವೇಶ ಮಾಡುತ್ತಾನೆ. ಇದರ ಪರಿಣಾಮ ಕೆಲವು ರಾಶಿಗಳ ಮೇಲೆ ಇರಲಿದ್ದು, ಇದರಿಂದ ಕೆಲವು ರಾಶಿಗಳಿಗೆ ವಿಶೇಷ ಪ್ರಯೋಜನ ಸಿಗುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಶನಿದೇವರಿಂದ ನಿಮಗೆ ಮಂಗಳಕರ ಫಲ ಸಿಗುತ್ತದೆ. ಶನಿದೇವರ ಆಶೀರ್ವಾದದಿಂದ ನಿಮಗೆ ಬದುಕಿನಲ್ಲಿ ನೆಮ್ಮದಿ ಎಲ್ಲಾ ಕೆಲಸದಲ್ಲಿ ಯಶಸ್ಸು ನಿಮ್ಮ ಪಾಲಿಗೆ ಸಿಗುತ್ತದೆ.

ವೃಷಭ ರಾಶಿ :- ಹೊಸ ವರ್ಷಕ್ಕೆ ಈ ರಾಶಿಯವರ ಮೇಲೆ ಶನಿದೇವರು ಕರುಣೆ ತೋರಲಿದ್ದಾನೆ. ಈ ವೇಳೆ ಉದ್ಯೋಗದಲ್ಲಿ ನಿಮ್ಮ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಈ ವೇಳೆ ವಿಶೇಷ ಪ್ರಯೋಜನ ಸಿಗಲಿದ್ದು, ಹೊರದೇಶಕ್ಕೆ ಹೋಗುವ ಅವಕಾಶ ಸಿಗುತ್ತದೆ.

ಸಿಂಹ ರಾಶಿ :- 2024ರಲ್ಲಿ ಶನಿದೇವರು ನಿಮ್ಮ ಕೈಹಿಡಿಯಲಿದ್ದು, ನಿಮಗೆ ಎಲ್ಲಾ ಕ್ಷೇತ್ರದಲ್ಲೂ ಸಹಾಯ ಮಾಡಲಿದ್ದಾನೆ. ಕೆಲಸದಲ್ಲಿ ನಿಮಗೆ ಬಡ್ತಿ ಸಿಗುತ್ತದೆ. ನಿಮ್ಮ ಪರ್ಸನಲ್ ಲೈಫ್ ಚೆನ್ನಾಗಿರುತ್ತದೆ. ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತದೆ.

Leave A Reply

Your email address will not be published.