Horoscope: ಶನಿದೇವರ ಹಿಮ್ಮುಖ ಚಲನೆ ಎಫೆಕ್ಟ್, ಈ ರಾಶಿಯವರು ಹುಷಾರಾಗಿರಿ

Written by Pooja Siddaraj

Published on:

Horoscope: ಒಬ್ಬ ವ್ಯಕ್ತಿಯ ಜಾತಕದಲ್ಲಿ ಶನಿದೇವರ ಸ್ಥಾನ ಚೆನ್ನಾಗಿದ್ದರೆ, ಆತನಿಗೆ ಬದುಕಿನಲ್ಲಿ ಯಾವುದೇ ತೊಂದರೆ ಆಗುವುದಿಲ್ಲ. ಆದರೆ ಶನಿದೇವರ ಸ್ಥಾನ ಚೆನ್ನಾಗಿಲ್ಲ ಎಂದರೆ, ಹೆಚ್ಚಿನ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಪ್ರಸ್ತುತ ಶನಿದೇವರು ತನ್ನದೇ ಆದ ಕುಂಭ ರಾಶಿಯಲ್ಲಿದ್ದು, 2024ರಲ್ಲಿ ಕೂಡ ಇದೇ ರಾಶಿಯಲ್ಲಿ ಇರಲಿದ್ದಾನೆ. ಆದರೆ 2024ರ ಜೂನ್ 29ರಿಂದ ನವೆಂಬರ್ 15ರವರೆಗು ಶನಿದೇವರು ಕುಂಭ ರಾಶಿಯಲ್ಲೇ ಹಿಮ್ಮುಖವಾಗಿ ಚಲಿಸಲಿದ್ದು, ಈ ವೇಳೆ ಕೆಲವು ರಾಶಿಗಳು ಹುಷಾರಾಗಿ ಇರಬೇಕು. ಅವರುಗಳ ಮೇಲೆ ಶನಿದೇವರ ನೆಗಟಿವ್ ಪರಿಣಾಮ ಬೀರಬಹುದು. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಕರ್ಕಾಟಕ ರಾಶಿ :- ಶನಿದೇವರ ಹಿಮ್ಮುಖ ಚಲನೆಯ ಕಾರಣ ಈ ರಾಶಿಯವರು ಉದ್ಯೋಗದ ವಿಚಾರದಲ್ಲಿ ಹೆಚ್ಚಿನ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಈ ಕಾರಣಕ್ಕೆ ನಿಮ್ಮ ಬದುಕಿನಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಎರಡು ರೀತಿಯಲ್ಲಿ ಒತ್ತಡ ಜಾಸ್ತಿಯಾಗುತ್ತದೆ.

ಮಕರ ರಾಶಿ :- ಶನಿದೇವರ ಹಿಮ್ಮುಖ ಚಲನೆಯ ಕಾರಣ ನಿಮ್ಮ ಬದುಕಿನಲ್ಲಿ ತೊಂದರೆಗಳು ದುಪ್ಪಟ್ಟಾಗಲಿದೆ. ಸಾಡೇಸಾತಿ ಸಮಸ್ಯೆ ಎದುರಿಸುತ್ತಿರುವವರು, ಇನ್ನು ಹೆಚ್ಚು ಜಾಗ್ರತೆ ಇಂದ ಇರುವುದು ಒಳ್ಳೆಯದು.

ಕುಂಭ ರಾಶಿ :- ಶನಿದೇವರ ಹಿಮ್ಮುಖ ಚಲನೆಯ ಕಾರಣ ಈ ರಾಶಿಯವರಿಗೆ ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೆ, ಬದುಕಿನ ಪ್ರತಿ ವಿಷಯದಲ್ಲಿ ಏರಿಳಿತ ಇರುತ್ತದೆ. ಎಲ್ಲಾ ವಿಷಯಗಳಲ್ಲಿ ಹುಷಾರಾಗಿ ಇರುವುದು ಒಳ್ಳೆಯದು.

Leave a Comment