Horoscope: ಶನಿದೇವರ ನಡೆಯಿಂದ 3 ರಾಶಿಗಳಿಗೆ ಸಾಡೇಸಾತಿ 2 ರಾಶಿಗೆ ಧೈಯಾ ಪ್ರಭಾವ! ಹುಷಾರಾಗಿರಿ!

Written by Pooja Siddaraj

Published on:

Horoscope: ಶನಿದೇವರು ಪ್ರಸ್ತುತ ತನ್ನದೇ ರಾಶಿಯಲ್ಲಿದ್ದಾನೆ. ಶನಿದೇವರನ್ನು ಕರ್ಮಫಲದಾತ ಎಂದು ಕರೆಯುತ್ತಾರೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ಶನಿದೇವರ ಸ್ಥಾನ ಉತ್ತಮವಾಗಿದ್ದರೆ, ಆ ವ್ಯಕ್ತಿಗೆ ಬದುಕಿನಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಇಲ್ಲವಾದರೆ ಶನಿದೇವರ ವಕ್ರದೃಷ್ಟಿಯಿಂದ ಸಮಸ್ಯೆಗೆ ಸಿಲುಕಿಕೊಳ್ಳಬಹುದು. ಹಾಗಾಗಿ ಎಲ್ಲರೂ ಹುಷಾರಾಗಿರಬೇಕು ಎಂದು ಜ್ಯೋತಿಷ್ಯದಲ್ಲಿ ತಿಳಿಸಲಾಗಿದೆ.

ಶನಿದೇವರು 2023ರ ಶುರುವಿನಲ್ಲಿ ತನ್ನದೇ ಆದ ತ್ರಿಕೋನ ರಾಶಿಗಳಿಗೆ ಪ್ರವೇಶ ಮಾಡಿದ್ದಾನೆ. ಇನ್ನೇನು 2024ರ ಹೊಸ ವರ್ಷ ಶುರುವಾಗಲಿದ್ದು, ಈ ವರ್ಷ ಕೂಡ ಶನಿದೇವರು ಇದೇ ರಾಶಿಗಳಲ್ಲಿ ಇರಲಿದ್ದಾನೆ. ಆದರೆ ಶನಿದೇವರ ಸ್ಥಾನ ಮತ್ತು ಸಂಚಾರದ ಫಲವು ಎಲ್ಲಾ ರಾಶಿಗಳ ಮೇಲೆ ಇರಲಿದ್ದು, ಅದರಲ್ಲೂ ಕೆಲವು ರಾಶಿಗಳು ಈ ಕಾರಣದಿಂದ ತೊಂದರೆ ಅನುಭವಿಸಲಿದೆ.

ಅವರುಗಳ ಬದುಕಿನಲ್ಲಿ ಕಷ್ಟಗಳೇ ಜಾಸ್ತಿ ಇರಲಿದೆ. 2024ರಲ್ಲಿ ಶನಿದೇವರು ಇರುವ ರಾಶಿಗಳು ಮತ್ತು ಅದರ ಫಲದಿಂದ 3 ರಾಶಿಗಳು ಸಾಡೇಸಾತಿಯ ತೊಂದರೆ ಅನುಭವಿಸುತ್ತಾರೆ. ಇನ್ನು ಎರಡು ರಾಶಿಗಳು ಶನಿದೇವರ ಧೈಯಾ ಪ್ರಭಾವವನ್ನು ಎದುರಿಸಬೇಕಾಗುತ್ತದೆ..ಮುಂದಿನ ವರ್ಷ ಯಾವ ರಾಶಿಗಳ ಮೇಲೆ ಸಾಡೇಸಾತಿ ಪ್ರಭಾವ ಇರುತ್ತದೆ ಎಂದರೆ, ಕುಂಭ, ಮೀನ ಮತ್ತು ಮಕರ ರಾಶಿಗಳ ಮೇಲೆ ಸಾಡೇಸಾತಿ ಪ್ರಭಾವ ಇರಕಿದ್ದು ಇವರು ಹುಷಾರಾಗಿರಬೇಕು.

2024ರಲ್ಲಿ ಮಕರ ರಾಶಿಗೆ 3ನೇ ಹಂತದ ಸಾಡೇಸಾತಿ ಶುರುವಾಗಲಿದೆ. 2024ರಲ್ಲಿ ಕುಂಭ ರಾಶಿಯವರಿಗೆ 2ನೇ ಹಂತದ ಸಾಡೇಸಾತಿ ನಡೆಯಲಿದೆ, ಮೀನ ರಾಶಿಯವರಿಗೆ ಮೊದಲ ಹಂತದ ಸಾಡೇಸಾತಿ ನಡೆಯಲಿದೆ. ಇನ್ನು ಧೈಯಾ ಪ್ರಭಾವ ಯಾವ ರಾಶಿಯ ಮೇಲೆ ಎಂದು ನೋಡಿದರೆ ವೃಶ್ಚಿಕ ರಾಶಿ ಮತ್ತು ಕರ್ಕಾಟಕ ರಾಶಿಯವರ ಮೇಲೆ ಧೈಯಾ ಪ್ರಭಾವ ಇರಲಿದ್ದು, ಈ ರಾಶಿಯ ಜನರು ಹುಷಾರಾಗಿರಬೇಕು.

Leave a Comment