Horoscope: ಇನ್ನು 5 ದಿನಗಳಲ್ಲಿ ಶುಕ್ರ ಸಂಚಾರ ಆರಂಭ, ಈ 4 ರಾಶಿಗಳಿಗೆ ಅದೃಷ್ಟ ಶುರು

Written by Pooja Siddaraj

Published on:

Horoscope: ಜ್ಯೋತಿಷ್ಯ ಶಾಸ್ತ್ರದ ಅನುಸಾರ ಪ್ರತಿ ಗ್ರಹವು ನಿರ್ದಿಷ್ಟವಾದ ಸಮಯಕ್ಕೆ ತಮ್ಮ ಸ್ಥಾನವನ್ನು ಬದಲಾವಣೆ ಮಾಡುತ್ತದೆ. ಇದೀಗ ಸಂಪತ್ತು, ಐಶ್ವರ್ಯಾ, ಸಮೃದ್ಧಿಯ ಸಂಕೇತ ಆಗಿರುವ ಶುಕ್ರ ಗ್ರಹವು ಡಿಸೆಂಬರ್ 25ರಂದು ಬೆಳಗ್ಗೆ 6:38ಗೆ ಸ್ಥಾನ ಬದಲಾವಣೆ ಮಾಡಲಿದೆ. ಈಗ ತುಲಾ ರಾಶಿಯಲ್ಲಿರುವ ಶುಕ್ರನು ವೃಶ್ಚಿಕ ರಾಶಿಗೆ ಪ್ರವೇಶ ಮಾಡಲಿದೆ. ಈ ಸ್ಥಾನ ಬದಲಾವಣೆಯ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರಲಿದ್ದು, 4 ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರಲಿದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಶುಕ್ರಗ್ರಹದ ಸಂಚಾರದಿಂದ ಈ ರಾಶಿಯವರಿಗೆ ಶುಭ ಸಮಯ ಸಿಗುತ್ತದೆ. ಈ ವೇಳೆ ನಿಮ್ಮ ಕೆಲಸ ಮತ್ತು ಏಳಿಗೆ ಎರಡರಲ್ಲೂ ಪ್ರಗತಿ ಕಾಣುತ್ತೀರಿ. ಹೊಸ ಕೆಲಸ ಶುರು ಮಾಡಲು ಇದು ಸೂಕ್ತ ಸಮಯ ಆಗಿದೆ.

ವೃಷಭ ರಾಶಿ :- ಶುಕ್ರಗ್ರಹದ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಕೂಡ ಉತ್ತಮವಾದ ಪರಿಣಾಮ ಬೀರಲಿದೆ. ಈ ವೇಳೆ ಪಾರ್ಟ್ನರ್ಶಿಪ್ ಬ್ಯುಸಿನೆಸ್ ಮಾಡುತ್ತಿರುವವರಿಗೆ ಹೆಚ್ಚಿನ ಲಾಭ ಸಿಗುತ್ತದೆ. ಆರ್ಥಿಕವಾಗಿ ಲಾಭ ಪಡೆಯುತ್ತೀರಿ.

ಸಿಂಹ ರಾಶಿ :- ಶುಕ್ರಗ್ರಹದ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ದಿಢೀರ್ ಧನಲಾಭ ಉಂಟಾಗುತ್ತದೆ. ಈ ಕಾರಣಕ್ಕೆ ನಿಮ್ಮ ಐಶ್ವರ್ಯ ವೃದ್ಧಿಯಾಗುತ್ತದೆ. ಜಮೀನಿನ ವಿಚಾರಕ್ಕೆ ಲಾಭ ಪಡೆಯುತ್ತೀರಿ. ನಿಮ್ಮ ಮಕ್ಕಳಿಂದ ಒಳ್ಳೆಯ ಸುದ್ದಿ ಪಡೆಯುತ್ತೀರಿ.

ತುಲಾ ರಾಶಿ :- ಶುಕ್ರಗ್ರಹವು ಈ ರಾಶಿಯಿಂದ ವೃಶ್ಚಿಕ ರಾಶಿಗೆ ಪ್ರವೇಶ ಮಾಡುತ್ತಿರುವ ಕಾರಣ ಈ ರಾಶಿಯವರಿಗೆ ಆದಾಯದ ಮೂಲಗಳು ಜಾಸ್ತಿಯಾಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರು ಹೆಚ್ಚಿನ ಲಾಭ ಪಡೆಯಬಹುದು. ಈ ವೇಳೆ ನಿಮ್ಮ ಆರೋಗ್ಯ ಸುಧಾರಿಸುತ್ತದೆ.

Leave a Comment