Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಪ್ರತಿ ಗ್ರಹದ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದೀಗ ನವೆಂಬರ್ 3ರಂದು ಶುಕ್ರ ಗ್ರಹವು ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ಪ್ರವೇಷ ಮಾಡಿದ್ದು, ಈ ಪರಿಣಾಮ ಕೆಲವು ರಾಶಿಗಳ ಮೇಲೆ ಇರಲಿದೆ. ಅವರಿಗೆಲ್ಲಾ ಅದೃಷ್ಟ ಬದಲಾಗಿ, ಬದುಕಿನಲ್ಲಿ ಯಶಸ್ಸು, ಕೀರ್ತಿ ಎಲ್ಲವು ಜೊತೆಗಿರುತ್ತದೆ. ಹಾಗಿದ್ದಲ್ಲಿ, ಆ ರಾಶಿಗಳು ಯಾವುವು? ಅವರಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..
ಕನ್ಯಾ ರಾಶಿ :- ಈ ವೇಳೆ ನಿಮಗೆ ಶುಕ್ರದೆಸೆ ಶುರುವಾಗುತ್ತದೆ. ವಿಶೇಷವಾಗಿ ಒಳ್ಳೆಯ ಫಲ ಸಿಗಲಿದೆ. ಈ ವೇಳೆ ನಿಮ್ಮ ಖುಷಿ ಜಾಸ್ತಿಯಾಗುತ್ತದೆ. ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ಕೂಡ ನಿಮ್ಮ ಇಷ್ಟದ ಹಾಗೆ ಯಶಸ್ಸು ಸಿಗುತ್ತದೆ. ಈ ವೇಳೆ ನಿಮ್ಮ ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಸಂಗಾತಿಯಿಂದ ಹೆಚ್ಚು ಪ್ರೀತಿ ಪಡೆಯುತ್ತೀರಿ. ಆದರೆ ಸೋಮಾರಿತನ ಜಾಸ್ತಿಯಾಗುತ್ತದೆ. ಊಟದ ವಿಷಯದಲ್ಲಿ ಹೆಚ್ಚು ಗಮನವಿಡಿ.
ವೃಷಭ ರಾಶಿ :- ಶುಕ್ರನ ಸ್ಥಾನ ಬದಲಾವಣೆ ಇಂದ ನಿಮ್ಮ ಐಶ್ವರ್ಯ ಹೆಚ್ಚಾಗುತ್ತದೆ. ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲಿ ಲಾಭ ಗಳಿಸುತ್ತೀರಿ. ಮಧ್ಯದಲ್ಲಿ ಸಿಲುಕಿರುವ ನಿಮ್ಮ ಹಣ ವಾಪಸ್ ಸಿಗುತ್ತದೆ. ಎಲ್ಲಾ ಕೆಲಸಗಳಲ್ಲಿ ಯಶಸ್ಸು ನಿಮ್ಮದಾಗುತ್ತದೆ.
ಧನು ರಾಶಿ :- ಈ ವೇಳೆ ನಿಮ್ಮ ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲಿ ಏಳಿಗೆ ಕಾಣುತ್ತೀರಿ. ಇದರಿಂದ ಬ್ಯುಸಿನೆಸ್ ಮಾಡುತ್ತಿರುವವರಿಗೆ ಹೆಚ್ಚು ಲಾಭವಾಗುತ್ತದೆ. ಉದ್ಯೋಗದಲ್ಲಿ ಯಶಸ್ಸು ಕಾಣುತ್ತೀರಿ. ಹೊಸ ಕೆಲಸಕ್ಕಾಗಿ ಹುಡುಕುತ್ತಿರುವವರಿಗೆ ಒಳ್ಳೆಯ ಕಡೆ ಕೆಲಸ ಸಿಗುತ್ತದೆ.
ತುಲಾ ರಾಶಿ :- ಈ ಸಮಯದಲ್ಲಿ ಫೋನ್, ಲ್ಯಾಪ್ ಟಾಪ್ ಇಂಥ ವಸ್ತುಗಳಿಗೆ ಹಣ ಖರ್ಚಾಗುತ್ತದೆ. ಈ ವೇಳೆ ಸಂಗಾತಿಯ ಜೊತೆಗೆ ಹೊರಗಡೆ ಹೋಗುವ ಅವಕಾಶ ಸಿಗುತ್ತದೆ. ಮನೆಯಲ್ಲಿ ಕೆಲವು ಒಳ್ಳೆಯ ಕೆಲಸಗಳು ನಡೆಯುತ್ತದೆ.
ಮಕರ ರಾಶಿ :- ಕನ್ಯಾ ರಾಶಿಗೆ ಶುಕ್ರನ ಪ್ರವೇಶದಿಂದ ಈ ರಾಶಿಯವರಿಗೆ ಲಾಭ ಮತ್ತು ಅನುಕೂಲ ಹೆಚ್ಚಾಗುತ್ತದೆ. ಅದೃಷ್ಟ ನಿಮಗೆ ಸಾಥ್ ನೀಡುತ್ತದೆ. ಮುಟ್ಟಿದ್ದೆಲ್ಲ ಚಿನ್ನ ಎನ್ನುವಷ್ಟು ಅದೃಷ್ಟ ಇರುತ್ತದೆ.