Horoscope: ಸೂರ್ಯ ಮತ್ತು ಮಂಗಳನ ಕೃಪೆ ಜೊತೆಗೆ ಕುಬೇರನ ಆಶೀರ್ವಾದ, ಈ ರಾಶಿಗಳಿಗೆ ಧನಲಾಭ ಗ್ಯಾರೆಂಟಿ

Written by Pooja Siddaraj

Published on:

Horoscope: ವೃಶ್ಚಿಕ ರಾಶಿಯಲ್ಲಿ ಈಗ ಸೂರ್ಯ ಮತ್ತು ಮಂಗಳನ ಯುತಿ ನಡೆಯುತ್ತಿದೆ. ಈ ಎರಡು ಗ್ರಹಗಳ ಕೃಪೆಯ ಜೊತೆಗೆ ಕುಬೇರನ ಆಶೀರ್ವಾದ ಕೂಡ ಇರಲಿದ್ದು, ಇದರಿಂದ ಕೆಲವು ರಾಶಿಗಳ ಮೇಲೆ ವಿಶೇಷ ಫಲ ಸಿಗಲಿದೆ. ಜೊತೆಗೆ ಅಪಾರವಾದ ಧನಲಾಭ ಕೂಡ ಪ್ರಾಪ್ತಿಯಾಗಲಿದೆ. ಆ ರಾಶಿಗಳು ಯಾವುವು? ಅವುಗಳಿಗೆ ಏನೆಲ್ಲಾ ಒಳ್ಳೆಯಫಲ ಸಿಗುತ್ತದೆ ಎಂದು ತಿಳಿಸುತ್ತೇವೆ ನೋಡಿ.

ಕರ್ಕಾಟಕ ರಾಶಿ :- ನಿಮ್ಮ ರಾಶಿಯ 5ನೇ ಮನೆಯಲ್ಲಿ ಈ ಸಂಯೋಗ ನಡೆದಿರುವುದರಿಂದ ತ್ರಿಕೋನ ರಾಜಯೋಗ ರೂಪುಗೊಂಡಿದೆ. ಈ ರಾಶಿಯ 5ನೇ ಭಾವದಲ್ಲಿ ಸೂರ್ಯ ಇದ್ದು, ಈ ವೇಳೆ ನಿಮ್ಮ ಏಳಿಗೆ ಉಂಟಾಗುತ್ತದೆ. ಧನಲಾಭ ಪ್ರಾಪ್ತಿಯಾಗುತ್ತದೆ. ಬುದ್ಧಿಯ ಸಹಾಯದಿಂದ ಹಣಗಳಿಕೆ ಮಾಡುತ್ತೀರಿ. ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿ ಕೇಳುತ್ತೀರಿ. ಈ ವೇಳೆ ಸಮಾಜದಲ್ಲಿ ನಿಮ್ಮ ಗೌರವ ಪ್ರತಿಷ್ಠೆ ಹೆಚ್ಚಾಗುತ್ತದೆ.

ಸಿಂಹ ರಾಶಿ :- ಸಂಯೋಗವು ಈ ರಾಶಿಯ 4ನೇ ಮನೆಯಲ್ಲಿ ರೂಪುಗೊಂಡಿದೆ. ಮಂಗಳನಿಂದ ತ್ರಿಕೋನ ರಾಜಯೋಗ ಸೃಷ್ಟಿಯಾಗಿದೆ. ಈ ವೇಳೆ ನಿಮಗೆ ಸಂಪತ್ತಿನ ಲಾಭ ಸಿಗುತ್ತದೆ. ಉದ್ಯೋಗದಲ್ಲಿ ಅರ್ಧಕ್ಕೆ ನಿಂತಿರುವ ಕೆಲಸಗಳು ಪೂರ್ತಿಯಾಗುತ್ತದೆ. ಬ್ಯುಸಿನೆಸ್ ನಲ್ಲಿ ಲಾಭ ಸಿಗುತ್ತದೆ. ವಾಹನ ಖರೀದಿ ಮಾಡುವ ಯೋಗ ಸಿಗುತ್ತದೆ. ಬದುಕಿನಲ್ಲಿ ಸಂತೋಷ ಇರುತ್ತದೆ.

ತುಲಾ ರಾಶಿ :- ನಿಮ್ಮ ರಾಶಿಯ ಧನದ ಮನೆಯಲ್ಲಿ ತ್ರಿಕೋನ ರಾಜಯೋಗ ರೂಪುಗೊಳ್ಳುತ್ತಿರುವ ಕಾರಣ ನಿಮಗೆ ದಿಢೀರ್ ಧನಲಾಭ ಸಿಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಒಳ್ಳೆಯ ಅವಕಾಶಗಳು ಸಿಗುತ್ತದೆ. ಗುರುವಿನ ದೃಷ್ಟಿ ಈಗ ನಿಮ್ಮ ಲಾಭದ ಮನೆಯಲ್ಲಿದೆ, ಹಾಗಾಗಿ ಹೊಸದಾಗಿ ಬ್ಯುಸಿನೆಸ್ ಶುರು ಮಾಡುವ ಪ್ಲಾನ್ ಇದ್ದರೆ ಇದು ಸರಿಯಾದ ಸಮಯ. ಮನೆಯವರ ಸಪೋರ್ಟ್ ಮರೆಯದೇ ಪಡೆಯಿರಿ.

Leave a Comment