Horoscope: ಸೂರ್ಯ ಮತ್ತು ಶನಿ, ತಂದೆ ಮಗನ ಸಂಯೋಗ 3 ರಾಶಿಗಳಿಗೆ ಒಳ್ಳೆಯದಲ್ಲ! ಈ ರಾಶಿಯವರು ತುಂಬಾ ಹುಷಾರಾಗಿರಿ!

0 17

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಎಲ್ಲಾ ರಾಶಿಗಳ ರಾಜ ಎಂದು ಸೂರ್ಯದೇವನನ್ನು ಕರೆಯಲಾಗುತ್ತದೆ. ಫೆಬ್ರವರಿ 13ರಂದು ಸೂರ್ಯದೇವ ಕುಂಭ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಈಗಾಗಲೇ ಕುಂಭ ರಾಶಿಯಲ್ಲಿ ಶನಿದೇವ ಇದ್ದಾನೆ, ಹಾಗಾಗಿ ಕುಂಭ ರಾಶಿಯಲ್ಲಿ ಶನಿ ಮತ್ತು ಸೂರ್ಯನ ಸಂಯೋಗ ಆಗಲಿದ್ದು, ಇವೆರಡು ಶತ್ರು ಗ್ರಹ ಆಗಿರುವುದರಿಂದ ಇಬರಿಬ್ಬರ ಸಂಯೋಗ ಎಲ್ಲಾ ರಾಶಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅದರಲ್ಲೂ 3 ರಾಶಿಗಳು ಬಹಳ ಹುಷಾರಾಗಿ ಇರಬೇಕು. ಆ ಮೂರು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಕರ್ಕಾಟಕ ರಾಶಿ :- ಸೂರ್ಯ ಮತ್ತು ಶನಿ ಗ್ರಹದ ಸಂಯೋಗದ ಕಾರಣ ಈ ರಾಶಿಯವರಿಗೆ ಮನೆಯಲ್ಲಿ ಸಮಸ್ಯೆ ಶುರುವಾಗುತ್ತದೆ. ಅಷ್ಟೇ ಅಲ್ಲದೆ ನಿಮ್ಮ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಬಹುದು. ಈ ವೇಳೆ ನೀವು ಹೂಡಿಕೆ ಮಾಡಿದರೇ ಆಗಲು ನೀವು ನಷ್ಟ ಅನುಭವಿಸಬೇಕಾಗಬಹುದು. ಹಾಗಾಗಿ ಈ ವೇಳೆ ಹುಷಾರಾಗಿರಿ.

ಸಿಂಹ ರಾಶಿ :- ಸೂರ್ಯ ಮತ್ತು ಶನಿಗ್ರಹದ ಸಂಯೋಗದ ಸಮಯದಲ್ಲಿ ಈ ವೇಳೆ ಸಿಂಹ ರಾಶಿಯವರು ಬಹಳ ಹುಷಾರಾಗಿರಬೇಕು. ನಿಮ್ಮ ದಾಂಪತ್ಯ ಜೀವನದಲ್ಲಿ ಈ ವೇಳೆ ಮುನಿಸು, ಜಗಳ ಉಂಟಾಗಬಹುದು. ಅನಾವಶ್ಯಕ ವಿಚಾರಗಳಿಂದ ಮನಸ್ಸಿಗೆ ಒತ್ತಡ ಆಗಬಹುದು. ಹಾಗಾಗಿ ಹುಷಾರಾಗಿರಿ.

ಮಕರ ರಾಶಿ :- ಶನಿ ಮತ್ತು ಸೂರ್ಯನ ಸಂಯೋಗದ ಕಾರಣ ಈ ರಾಶಿಯವರಿಗೆ ತೊಂದರೆಗಳು ಹೆಚ್ಚಾಗುತ್ತದೆ. ಈ ವೇಳೆ ಆರ್ಥಿಕ ಸಮಸ್ಯೆ ಶುರುವಾಗಬಹುದು. ನಿಮ್ಮ ಪರ್ಸನಲ್ ಲೈಫ್ ಮೇಲೆ ಕೂಡ ಪರಿಣಾಮ ಬೀರಬಹುದು..ಈ ಸಮಯದಲ್ಲಿ ನೀವು ಬ್ಯುಸಿನೆಸ್ ಅಥವಾ ಹೂಡಿಕೆಗೆ ಬಂಡವಾಳ ಹಾಕುವುದು ಒಳ್ಳೆಯದಲ್ಲ, ನಷ್ಟ ಅನುಭವಿಸಬೇಕಾಗಬಹುದು.

Leave A Reply

Your email address will not be published.