Horoscope: ಕುಂಭ ರಾಶಿಯಲ್ಲಿ ಮಹಾ ಸಂಯೋಗ! ಮೂರು ರಾಶಿಗಳಿಗೆ ಅದೃಷ್ಟ!

Written by Pooja Siddaraj

Published on:

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಒಂದೊಂದು ಗ್ರಹಗಳಗಳ ಸ್ಥಾನ ಬದಲಾವಣೆ ಕೂಡ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇನ್ನು ಎರಡೆ ದಿನಗಳಲ್ಲಿ ಕುಂಭ ರಾಶಿಯಲ್ಲಿ ವಿಶೇಷವಾದ ಸಂಯೋಗ ನಡೆಯಲಿದ್ದು, ಪ್ರಸ್ತುತ ಕುಂಭ ರಾಶಿಯಲ್ಲಿ ಶನಿದೇವ ಇದ್ದಾನೆ. ಫೆಬ್ರವರಿ 14ರಂದು ಇದೇ ರಾಶಿಗೆ ಸೂರ್ಯನ ಪ್ರವೇಶ ಆಗಲಿದೆ. ಬಹಳ ಸಮಯದ ನಂತರ ಕುಂಭ ರಾಶಿಯಲ್ಲಿ ಇವರಿಬ್ಬರ ಸಂಗಮ ಆಗುತ್ತಿದ್ದು, ಇದರಿಂದ 3 ರಾಶಿಗಳಿಗೆ ಅದೃಷ್ಟ ಶುರುವಾಗುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ತುಲಾ ರಾಶಿ :- ಸಂತೋಷದ ಸುದ್ದಿ ಕೇಳುತ್ತೀರಿ, ಮಕ್ಕಳ ಕೆಲಸ ಖುಷಿ ತರುತ್ತದೆ. ಅರ್ಧಕ್ಕೆ ನಿಂತಿರುವ ಆಫೀಸ್ ಕೆಲಸಗಳು ಪೂರ್ತಿಯಾಗುತ್ತದೆ. ಎಲ್ಲಾ ಕೆಲಸದಲ್ಲಿ ಯಶಸ್ಸು ನಿಮ್ಮದೇ.. ಈ ವೇಳೆ ನಿಮ್ಮ ಆತ್ಮವಿಶ್ವಾಸ ಜಾಸ್ತಿಯಾಗುತ್ತದೆ. ಮನೆಯವರ ಪೂರ್ತಿ ಸಪೋರ್ಟ್ ಪಡೆಯುತ್ತೀರಿ. ಮನೆಯಲ್ಲಿ ಸಂತೋಷ, ಶಾಂತಿ ಇರುತ್ತದೆ.

ಮಿಥುನ ರಾಶಿ :- ಇದು ನಿಮಗೆ ಸಂಪೂರ್ಣ ಅದೃಷ್ಟ ಸಾಥ್ ಕೊಡುವ ಸಮಯ. ಉಳಿದಿರುವ ಕೆಲಸಗಳೆಲ್ಲಾ ಪೂರ್ತಿಯಾಗುತ್ತದೆ. ನಿಮ್ಮ ಆದಾಯ ಹಣ ಜಾಸ್ತಿಯಾಗುತ್ತದೆ. ಕೆಲಸಕ್ಕಾಗಿ ಪ್ರಯಾಣ ಮಾಡಬಹುದು. ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ. ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಸಮಯ.

ಕುಂಭ ರಾಶಿ :- ಈ ವೇಳೆ ನಿಮ್ಮ ವ್ಯಕ್ತಿತ್ವ ಇನ್ನು ಚೆನ್ನಾಗಿರುತ್ತದೆ. ನಿಮ್ಮ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ. ಸಂಸಾರ ಸುಖಕರವಾಗಿರುತ್ತದೆ. ನಿಮ್ಮ ದಾಂಪತ್ಯ ಜೀವನದಲ್ಲಿ ಸಂಗಾತಿಯಿಂದ ಸಪೋರ್ಟ್ ಸಿಗುತ್ತದೆ. ಸಮಾಜದಲ್ಲಿ ನಿಮ್ಮ ಸ್ಥಾನ ದೊಡ್ಡದಾಗುತ್ತದೆ.

Leave a Comment