Horoscope: ಸೂರ್ಯ ಮತ್ತು ಶನಿ ಸಂಯೋಗದಿಂದ ಈ ರಾಶಿಗಳಿಗೆ ಅಶುಭ, ಜಾಗ್ರತೆಯಿಂದ ಇರುವುದು ಒಳ್ಳೆಯದು!

Written by Pooja Siddaraj

Published on:

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಸೂರ್ಯ ದೇವನ ಮಗ ಶನಿದೇವ. ಇವರಿಬ್ಬರು ಬಹಳ ಶಕ್ತಿಶಾಲಿ ಗ್ರಹಗಳು ಜೊತೆಗೆ ವೈರಿ ಗ್ರಹಗಳು ಕೂಡ ಹೌದು, ಇಲ್ಲಿ ಸೂರ್ಯದೇವ ಪ್ರತಿ ತಿಂಗಳು ರಾಶಿ ಬದಲಾವಣೆ ಮಾಡುತ್ತಾನೆ, ಶನಿದೇವ ಎರಡೂವರೆ ವರ್ಷಕ್ಕೆ ಒಂದು ಸಾರಿ ಸ್ಥಾನ ಬದಲಾವಣೆ ಮಾಡುತ್ತಾನೆ. ಪ್ರಸ್ತುತ ಶನಿದೇವರು ಕುಂಭ ರಾಶಿಯಲ್ಲಿದ್ದು, ಮುಂದಿನ ವರ್ಷ 2024ರಲ್ಲಿ ಸೂರ್ಯದೇವ ಕೂಡ ಕುಂಭ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಇವರಿಬ್ಬರ ಸಂಯೋಗದಿಂದ 3 ರಾಶಿಗಳಿಗೆ ಡೇಂಜರ್ ಆಗಿರಲಿದೆ..

2024ರ ಫೆಬ್ರವರಿ 15 ರಿಂದ ಮಾರ್ಚ್ 15ರವರೆಗೂ ಶನಿದೇವ ಮತ್ತು ಸೂರ್ಯದೇವನ ಸಂಯೋಗ ನಡೆಯಲಿದೆ, ಈ ವೇಳೆ ಹುಷಾರಾಗಿ ಇರಬೇಕಾದ ಆ ಮೂರು ರಾಶಿಯವರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ..
ಕರ್ಕಾಟಕ ರಾಶಿ :- ಈ ರಾಶಿಯವರಿಗೆ ನೆಗಟಿವ್ ಪರಿಣಾಮ ಶುರುವಾಗುತ್ತದೆ. ಈ ವೇಳೆ ನಿಮ್ಮ ದಾಂಪತ್ಯ ಜೀವನ ಮತ್ತು ಕೆಲಸದ ಜೀವನ ಎರಡರಲ್ಲೂ ಕೂಡ ಒತ್ತಡ ಮತ್ತು ತೊಂದರೆ ಜಾಸ್ತಿಯಾಗುತ್ತದೆ. ಚರ್ಮಕ್ಕೆ ಸಂಬಂಧಿಸಿದ ಹಾಗೆ ಆರೋಗ್ಯ ಸಮಸ್ಯೆ ಉಂಟಾಗಬಹುದು, ಜಾಗ್ರತೆಯಿಂದ ಇರಿ.

ಕನ್ಯಾ ರಾಶಿ :- ಈ ವೇಳೆ ಕೋರ್ಟ್ ಕೇಸ್ ನಡೆಯುತ್ತಿದ್ದರೆ ನಿಮಗೆ ಯಶಸ್ಸು ಸಿಗುವುದಿಲ್ಲ. ಅಪಘಾತ ಆಗುವ ಸೂಚನೆ ಇರುವುದರಿಂದ ವಾಹನ ಚಲಿಸುವಾಗ ಹುಷಾರಾಗಿರಿ. ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು ಜಾಗರೂಕವಾಗಿರಿ. ಕೆಲಸಗಳ ಬಗ್ಗೆ ಹೆಚ್ಚು ಗಮನ ಕೊಡಿ.

ಮೀನ ರಾಶಿ :- ಇವರಿಗೂ ಕೂಡ ಇದು ಒಳ್ಳೆಯ ಸಮಯ ಅಲ್ಲ. ನಿಮ್ಮ ಖರ್ಚಿಗಿಂತ ಆದಾಯ ಕಡಿಮೆ ಇರುತ್ತದೆ. ಹಣಕಾಸಿನ ಸಮಸ್ಯೆ ಜಾಸ್ತಿ ಆಗಬಹುದು. ಬ್ಯುಸಿನೆಸ್ ನಲ್ಲಿ ನಿಮ್ಮ ಮೇಲೆ ಆಪಾದನೆ ಕೇಳಿಬರುವ ಸಾಧ್ಯತೆ ಇರುತ್ತದೆ, ಹಾಗಾಗಿ ಹುಷಾರಾಗಿರಿ.

Leave a Comment