Horoscope: ಇನ್ನು 3 ದಿನಗಳಲ್ಲಿ ರಾಶಿ ಬದಲಾಯಿಸಲಿದ್ದಾನೆ ಸೂರ್ಯದೇವ! ಈ 4 ರಾಶಿಗಳಿಗೆ ಅದೃಷ್ಟ ಶುರು

0 10

Horoscope: ಸೂರ್ಯದೇವನನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜ ಎಂದು ಕರೆಯುತ್ತಾರೆ. ಸೂರ್ಯದೇವ ಪ್ರತಿ ತಿಂಗಳು ರಾಶಿ ಬದಲಾವಣೆ ಮಾಡುತ್ತಾನೆ. ಪ್ರಸ್ತುತ ಧನು ರಾಶಿಯಲ್ಲಿರುವ ಸೂರ್ಯದೇವ, ಇನ್ನು 3 ದಿನಗಳಲ್ಲಿ ಮಕರ ರಾಶಿಗೆ ಪ್ರವೇಷ ಮಾಡುತ್ತಾನೆ. ಇದನ್ನೇ ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ದಿವಸ ಇಡೀ ದೇಶದಲ್ಲಿ ವಿವಿಧ ರೀತಿಯಲ್ಲಿ ಹಬ್ಬದ ಆಚರಣೆ ಮಾಡಲಾಗುತ್ತದೆ. ಸಂಕ್ರಾಂತಿ ಹಬ್ಬದ ವೇಳೆ ಸೂರ್ಯನ ಸ್ಥಾನ ಬದಲಾವಣೆ ಇಂದ 4 ರಾಶಿಗಳ ಅದೃಷ್ಟವೇ ಬದಲಾಗಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಸೂರ್ಯನ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಅನುಕೂಲ ತಂದುಕೊಡುತ್ತದೆ. ಈ ವೇಳೆ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಉದ್ಯೋಗದ ವಿಚಾರದಲ್ಲಿ ನಿಮ್ಮ ಎಲ್ಲಾ ಕನಸುಗಳು ಈಡೇರುತ್ತದೆ. ಸರ್ಕಾರಿ ಕೆಲಸಕ್ಕಾಗಿ ಟ್ರೈ ಮಾಡುತ್ತಿರುವವರಿಗೆ ಒಳ್ಳೆಯ ಕೆಲಸ ಸಿಗುತ್ತದೆ. ಈ ವೇಳೆ ಸಂತೋಷದ ಸುದ್ದಿ ಪಡೆಯುತ್ತೀರಿ.

ವೃಷಭ ರಾಶಿ :- ಸೂರ್ಯದೇವನ ಸ್ಥಾನ ಬದಲಾವಣೆ ನಿಮಗು ಕೂಡ ಅನುಕೂಲ ನೀಡುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಬಂಪರ್ ಲಾಭ ಸಿಗುತ್ತದೆ. ಉದ್ಯೋಗದಲ್ಲಿ ಒಳ್ಳೆಯ ಅವಕಾಶ ಸಿಕ್ಕಾಗ ಅದನ್ನು ಉಪಯೋಗಿಸಿಕೊಂಡರೆ, ನಿಮಗೆ ಸರಿಯಾದ ಯಶಸ್ಸು ಸಿಗುತ್ತದೆ.

ಸಿಂಹ ರಾಶಿ :- ಸೂರ್ಯದೇವನ ಸ್ಥಾನ ಬದಲಾವಣೆ ನಿಮ್ಮ ಜೀವನದಲ್ಲಿ ಮುಖ್ಯವಾದ ಬದಲಾವಣೆ ತರುತ್ತದೆ. ಸೂರ್ಯದೇವ ಈ ರಾಶಿಯ ಅಧಿಪತಿ ಕೂಡ ಆಗಿದ್ದು, ಈ ವೇಳೆ ನಿಮ್ಮಲ್ಲಿ ಪಾಸಿಟಿವ್ ಆದ ಬದಲಾವಣೆ ಇರುತ್ತದೆ. ಆರೋಗ್ಯ ಸಮಸ್ಯೆಗಳು ಸರಿ ಹೋಗುತ್ತದೆ. ಉದ್ಯೋಗದಲ್ಲಿ ಏಳಿಗೆ ಕಾಣುತ್ತೀರಿ..

ವೃಶ್ಚಿಕ ರಾಶಿ :- ಸೂರ್ಯದೇವನ ಸ್ಥಾನ ಬದಲಾವಣೆ ಇವರ ವೃತ್ತಿ ಬದುಕಿಗೆ ಏಳಿಗೆಯನ್ನು ತಂದುಕೊಡುತ್ತದೆ. ಉದ್ಯೋಗದಲ್ಲಿ ನೀವು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಕೆಲಸದಲ್ಲಿ ಬಡ್ತಿ ಸಿಗುತ್ತದೆ, ಕೆಲಸ ಇನ್ನು ಸಿಗದವರಿಗೆ ಒಳ್ಳೆಯ ಕೆಲಸ ಸಿಗುತ್ತದೆ. ಪ್ರವಾಸದ ಕಾರಣಕ್ಕೆ ಹಣಕಾಸಿನ ಲಾಭ ಸಿಗಬಹುದು.

Leave A Reply

Your email address will not be published.