Horoscope: ಸ್ಥಾನ ಬದಲಾವಣೆ ಮಾಡಲಿದ್ದಾನೆ ಸೂರ್ಯದೇವ! ಈ ರಾಶಿಗಳ ಕಷ್ಟ ಕಳೆದು ಬೆಳಕಿನ ಭಾಗ್ಯ ಶುರು!

0 1

Horoscope: ಸೂರ್ಯದೇವ ಆತ್ಯಂತ ಶಕ್ತಿಶಾಲಿ ಗ್ರಹ. ಸೂರ್ಯನ ಸ್ಥಾನದಲ್ಲಿ ಬದಲಾವಣೆ ಆದರೆ ಅದು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದೀಗ ಸೂರ್ಯದೇವನು ಧನು ರಾಶಿಗೆ ಪ್ರವೇಶ ಮಾಡಲಿದ್ದು, ಇದರ ಪರಿಣಾಮ ಕೆಲವು ರಾಶಿಗಳ ಮೇಲೆ ಬೀರಲಿದೆ. ಆ ರಾಶಿಗಳು ಯಾವುವು? ಆ ರಾಶಿಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಸಿಂಹ ರಾಶಿ :- ಇದು ವಿದ್ಯಾರ್ಥಿಗಳಿಗೆ ಒಳ್ಳೆಯ ಸಮಯ, ಓದುವ ಕಡೆಗೆ ಆಸಕ್ತಿ ಜಾಸ್ತಿಯಾಗುತ್ತದೆ. ಮನೆಯ ಬೆಳವಣಿಗೆಗೆ ಇದು ಸರಿಯಾದ ಸಮಯ. 2022ರಲ್ಲಿ ನೀವು ಮಾಡಿರುವ ಕೆಲಸಗಳಿಗೆ ಈಗ ಒಳ್ಳೆಯ ಫಲ ಸಿಗುತ್ತದೆ.

ತುಲಾ ರಾಶಿ :- ನಿಮ್ಮ ಒಳ್ಳೆಯ ವ್ಯಕ್ತಿತ್ವ ಬೇರೆಯವರನ್ನು ನಿಮ್ಮ ಎದುರು ಆಕರ್ಷಿಸುತ್ತದೆ. ಮಾರ್ಕೆಟಿಂಗ್ ಅಥವಾ ಸೋಷಿಯಲ್ ಮೀಡಿಯಾದಲ್ಲಿ ವೃತ್ತಿ ಮಾಡುತ್ತಿರುವ ಜನರಿಗೆ ಇದು ಒಳ್ಳೆಯ ಸಮಯ, ಇವರು ಏಳಿಗೆ ಕಾಣಬಹುದು. ಮನೆಯಲ್ಲಿ ದೇವರ ಕೆಲಸಗಳು ನಡೆಯುತ್ತದೆ..

ಧನು ರಾಶಿ :- ಆಧ್ಯಾತ್ಮದ ಕಡೆಗೆ ಆಸಕ್ತಿ ಜಾಸ್ತಿಯಾಗುತ್ತದೆ. ನಿಮ್ಮಲ್ಲಿರುವ ಲೀಡರ್ಶಿಪ್ ಎಲ್ಲರಿಗೂ ಇಷ್ಟವಾಗುತ್ತದೆ., ನಿಮ್ಮ ಜೊತೆಗೆ ಕಾಂಟ್ಯಾಕ್ಟ್ ಬೆಳೆಸಿಕೊಳ್ಳಲು ಇಷ್ಟಪಡುತ್ತಾರೆ. ಉದ್ಯೋಗದಲ್ಲಿ ಮುಂದುವರೆಯುವುದಕ್ಕೆ ಯಶಸ್ಸು ಸಿಗುತ್ತದೆ.

ಕುಂಭ ರಾಶಿ :- ಈ ವೇಳೆ ನಿಮ್ಮ ಸಂಪತ್ತು ವೃದ್ಧಿಯಾಗುತ್ತದೆ. ಇದರಿಂದ ಐಷಾರಾಮಿ ವಸ್ತುಗಳ ಖರೀದಿ ಮಾಡುತ್ತೀರಿ. ಪ್ರೀತಿಯಲ್ಲಿ ಇರುವವರು ಮದುವೆ ಮಾತುಕತೆಯಲ್ಲಿ ಮುಂದುವರೆಯುತ್ತಾರೆ.

Leave A Reply

Your email address will not be published.