Horoscope: 10 ವರ್ಷಗಳ ಬಳಿಕ ರೂಪುಗೊಂಡಿದೆ ತ್ರಿಗ್ರಹ ಯೋಗ! ಈ 5 ರಾಶಿಗಳಿಗೆ ಅದೃಷ್ಟ ಕಟ್ಟಿಟ್ಟ ಬುತ್ತಿ

Written by Pooja Siddaraj

Published on:

Horoscope: ಧನು ರಾಶಿಯಲ್ಲಿ ಈಗ ಮೂರು ಗ್ರಹಗಳ ಸಂಗಮವಾಗಿದೆ. ಈ ವೇಳೆ ಜನವರಿ ತಿಂಗಳ ಕೊನೆಯ ವಾರದಲ್ಲಿ 10 ವರ್ಷಗಳ ನಂತರ ತ್ರಿಗ್ರಹ ಯೋಗ ರಚನೆ ಆಗಿದ್ದು, ಈ ವೇಳೆ ಐದು ಗ್ರಹಗಳಿಗೆ ವಿಶೇಷವಾದ ಅದೃಷ್ಟ ಶುರುವಾಗಲಿದೆ. ಇವರು ಶುರು ಮಾಡುವ ಎಲ್ಲಾ ಕೆಲಸದಲ್ಲಿ ಯಶಸ್ಸು ಇರುತ್ತದೆ. ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ. ಹಾಗಿದ್ದಲ್ಲಿ ಆ ರಾಶಿಗಳು ಯಾವುವು? ಅವುಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ತ್ರಿಗ್ರಹ ಯೋಗದಿಂದ ಈ ರಾಶಿಯವರಿಗೆ ಒಳ್ಳೆಯ ಕಾಲ ಶುರುವಾಗಲಿದೆ. ಈ ವೇಳೆ ನಿಮ್ಮ ಕೆಲಸ, ಬ್ಯುಸಿನೆಸ್ ಎಲ್ಲದರಲ್ಲೂ ಲಾಭ ಪಡೆಯುತ್ತೀರಿ. ಕೆಲಸಕ್ಕೆ ಹೋಗುತ್ತಿರುವವರಿಗೆ ಇದು ಅತ್ಯುತ್ತಮವಾದ ಸಮಯ. ಈ ವೇಳೆ ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಮತ್ತು ಗೌರವ ಹೆಚ್ಚಾಗುತ್ತದೆ..ನಿಮ್ಮ ದಾಂಪತ್ಯ ಜೀವನ ಸುಖಕರವಾಗಿರುತ್ತದೆ.

ಕನ್ಯಾ ರಾಶಿ :- ತ್ರಿಗ್ರಹ ಯೋಗದಿಂದ ಇವರ ಅದೃಷ್ಟ ಸಂಪೂರ್ಣವಾಗಿ ಬದಲಾಗುತ್ತದೆ. ಈ ಮೊದಲು ಮಾಡಿರುವ ಕೆಲಸಗಳಿಂದ ಈಗ ನಿಮಗೆ ಲಾಭ ಹಾಗೂ ಪ್ರತಿಷ್ಠೆ ಎರಡು ಸಿಗುತ್ತದೆ. ಸರ್ಕಾರಿ ಕೆಲಸ ಸಿಕ್ಕಿರುವವರಿಗೆ ಉದ್ಯೋಗದಲ್ಲಿ ಏಳಿಗೆ ಇರುತ್ತದೆ.

ತುಲಾ ರಾಶಿ :- ಈ ವೇಳೆ ನಿಮಗೆ ಮಂಗಳಕರ ಫಲಿತಾಂಶ ಸಿಗುತ್ತದೆ. ಅದೃಷ್ಟ ಸಂಪೂರ್ಣವಾಗಿ ನಿಮಗೆ ಸಾಥ್ ನೀಡುತ್ತದೆ. ಕೆಲಸದ ವಿಚಾರದಲ್ಲಿ ಮುಂದಕ್ಕೆ ಹೋಗಲು ಹೆಚ್ಚಿನ ಅವಕಾಶಗಳು ಸಿಗುತ್ತದೆ. ಈ ವೇಳೆ ಒಬ್ಬ ಮಹಿಳೆ ಇಂದ ನಿಮಗೆ ಸಹಾಯ ಸಿಗುತ್ತದೆ.

ಧನು ರಾಶಿ :- ಈ ಇಡೀ ವಾರ ನಿಮಗೆ ಶುಭ ಹಾಗೂ ಯಶಸ್ಸು ಸಿಗುತ್ತದೆ. ಹಾಗೆಯೇ ಉನ್ನತ ಮಟ್ಟಕ್ಕೆ ಏರುವಂಥ ಅವಕಾಶಗಳನ್ನು ಪಡೆಯುತ್ತೀರಿ. ಮನೆಯಲ್ಲಿ ಸಂತೋಷ ತುಂಬಿರುತ್ತದೆ.

ಮೀನ ರಾಶಿ :- ಈ ವರ್ಷ ನಿಮಗೆ ಅದೃಷ್ಟ ತರುತ್ತದೆ. ಮನೆಯಲ್ಲಿ ದೇವರಿಗೆ ಸಂಬಂಧಿಸಿದ ಕೆಲಸಗಳು ನಡೆಯುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಲಾಭ ಸಿಗುತ್ತದೆ. ಕೆಲಸಕ್ಕಾಗಿ ಮಾಡುವ ಪ್ರಯಾಣದಿಂದ ಲಾಭ ಪಡೆಯುತ್ತೀರಿ.

Leave a Comment