Horoscope: ತುಳಸಿ ಪೂಜೆ ಮತ್ತು ಸೇವಾರ್ಥ ಸಿದ್ಧಿ ಯೋಗದಲ್ಲಿ ಮಹಾವಿಷ್ಣುವಿನ ಆಶೀರ್ವಾದದಿಂದ ಈ 4 ರಾಶಿಯವರ ಬದುಕು ಬಂಗಾರ!

Written by Pooja Siddaraj

Published on:

Horoscope: ಈ ವರ್ಷದ ತುಳಸಿ ವಿವಾಹವು ನವೆಂಬರ್ 24ರಂದು ನಡೆಯಲಿದೆ, ಶುಕ್ರವಾರ ಲಕ್ಷ್ಮೀದೇವಿಯನ್ನು ಪೂಜಿಸುವ ಶುಭದಿನ ಆಗಿದ್ದು, ಅದೇ ದಿನ ತುಳಸಿ ಪೂಜೆ ಇದೆ. ತುಳಸಿ ಪೂಜೆ ಮಾಡುವುದರಿಂದ ಮನೆಯಲ್ಲಿ ಸಂತೋಷ, ಶಾಂತಿ, ನೆಮ್ಮದಿ, ಸಮೃದ್ಧಿಯ ಸಿಗಲಿದ್ದು, ದೇವರ ಅನುಗ್ರಹ ನಿಮ್ಮ ಮೇಲೆ ಇರುತ್ತದೆ. ಲಕ್ಷ್ಮೀದೇವಿ ತುಳಸಿಯಲ್ಲಿ ನೆಲೆಸಿದ್ದಾಳೆ ಎಂದು ಹೇಳಲಾಗುತ್ತದೆ, ಹಾಗೆಯೇ ಶುಕ್ರ ಪ್ರದೋಷ ದಿನ ಭಗವಾನ್ ಶಿವನ ಆರಾಧನೆ ಮಾಡಿದರೆ ದಾಂಪತ್ಯ ಜೀವನ ಚೆನ್ನಾಗಿರುತ್ತದೆ..

ಈ ವಿಶೇಷ ದಿನ 3 ಶುಭಯೋಗಗಳು ರೂಪುಗೊಳ್ಳುತ್ತಿದೆ, ಅವು ಅಮೃತಾ ಸಿದ್ಧಿ ಯೋಗ, ಸೇವಾರ್ಥ ಸಿದ್ಧಿ ಯೋಗ ಹಾಗೂ ಸಿದ್ಧಿ ಯೋಗ. ಈ ಎಲ್ಲಾ ವಿಶೇಷತೆಗಳು ಒಂದೇ ದಿನ ನಡೆಯುತ್ತಿರುವುದರಿಂದ ಇದರ ಫಲ ಎಲ್ಲಾ ರಾಶಿಗಳ ಮೇಲೆ ಬೀರಲಿದ್ದು, 4 ರಾಶಿಗಳ ಮೇಲೆ ವಿಶೇಷ ಫಲ ಸಿಗಲಿದೆ, ಆ ರಾಶಿಗಳು ಯಾವುವು? ಅವುಗಳಿಗೆ ಏನೆಲ್ಲಾ ವಿಶೇಷತೆ ಸಿಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಮಿಥುನ ರಾಶಿ :- ಮೂರು ಶುಭ ಯೋಗಗಳ ಪರಿಣಾಮ ನಿಮ್ಮ ಅದೃಷ್ಟ ಬೆಳಗುತ್ತದೆ. ನಿಮ್ಮ ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ಏಳಿಗೆ ಕಾಣುತ್ತೀರಿ. ನಿಮ್ಮ ಆದಾಯಕ್ಕೆ ಹೊಸ ಮೂಲಗಳು ಸೃಷ್ಟಿಯಾಗುತ್ತದೆ.

ಕನ್ಯಾ ರಾಶಿ :- ಶುಭ ಯೋಗಗಳು ಈ ರಾಶಿಯವರಿಗೆ ಎಲ್ಲಾ ಒಳ್ಳೆಯ ಫಲಗಳನ್ನು ನೀಡುತ್ತದೆ. ನೀವು ಶುರು ಮಾಡುವ ಎಲ್ಲಾ ಕೆಲಸಗಳಲ್ಲಿ ಯಶಸ್ಸು ನಿಮ್ಮದಾಗುತ್ತದೆ. ನಿಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತದೆ, ಜೊತೆಗೆ ಕೆಲಸದಲ್ಲಿ ಬಡ್ತಿ ಸಿಗುತ್ತದೆ.

ತುಲಾ ರಾಶಿ :- ತುಳಸಿ ಪೂಜೆ ನಿಮಗೆ ಶುಭ ತರುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಮನೆಯಲ್ಲಿ ಸಂತೋಷದ ವಾತಾವರಣ ತುಂಬಿರುತ್ತದೆ.

ಕುಂಭ ರಾಶಿ :- ಮೂರು ಯೋಗಗಳು ಜೊತೆಗೆ ತುಳಸಿ ಹಬ್ಬ ಇರುವುದರಿಂದ ಈ ದಿನ ಇವರಿಗೆ ಅದೃಷ್ಟ ನಿಮ್ಮ ಕೈ ಹಿಡಿಯುತ್ತದೆ. ಶತ್ರುಗಳ ತೊಂದರೆಯಿಂದ ಮುಕ್ತಿ ಸಿಗುತ್ತದೆ. ಜೊತೆಗೆ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.

Leave a Comment