Horoscope: ವಿಪರೀತ ರಾಜಯೋಗದಿಂದ ಈ ರಾಶಿಗಳ ಅದೃಷ್ಟ ಬದಲು, ಇವರು ಮುಟ್ಟಿದ್ದೆಲ್ಲ ಚಿನ್ನ

Written by Pooja Siddaraj

Published on:

Horoscope: ದೀಪಾವಳಿ ಹಬ್ಬಕ್ಕೆ ಇನ್ನು ಕೆಲವು ದಿನಗಳು ಇರುವಾಗ ಅಂದರೆ 2023ರ ನವೆಂಬರ್ 6ರಂದು ವಿಪರೀತ ರಾಜಯೋಗ ಸೃಷ್ಟಿಯಾಗಿದೆ. ಈ ರಾಜಯೋಗವು 4 ರಾಶಿಗಳಿಗೆ ವಿಶೇಷ ಫಲ ತರಲಿದೆ. ಅವರಿಗೆಲ್ಲಾ ಆದಾಯಕ್ಕೆ ಹೊಸ ಮೂಲ ಸೃಷ್ಟಿಯಾಗುತ್ತದೆ, ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ, ಈ ವೇಳೆ ವಾಹನ ಅಥವಾ ಆಸ್ತಿ ಖರೀರಿ ಮಾಡಬಹುದು. ಹಾಗಿದ್ದಲ್ಲಿ ಅದೃಷ್ಟ ಪಡೆಯುವ ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮಕರ ರಾಶಿ :- ಈ ರಾಶಿಯವರಿಗೆ ವಿಪರೀತ ರಾಜಯೋಗದಿಂದ ಇವರ ಎಲ್ಲಾ ದೊಡ್ಡ ಆಸೆಗಳು ನೆರವೇರುತ್ತದೆ. ಈ ವೇಳೆ ಹೊಸ ಮನೆ ಮತ್ತು ವಾಹನ ಖರೀದಿ ಮಾಡುತ್ತೀರಿ. ಈ ವೇಳೆ ಹೂಡಿಕೆ ಮಾಡುವುದರಿಂದ ಲಾಭ ಸಿಗುತ್ತದೆ. ಬ್ಯುಸಿನೆಸ್ ಮಾಡುವವರು ಒಳ್ಳೆಯ ಲಾಭ ಗಳಿಸಬಹುದು. ಈ ವೇಳೆ ನಿಮ್ಮ ಗೌರವ ಹೆಚ್ಚಾಗುತ್ತದೆ. ಒಳ್ಳೆಯ ಸ್ಥಾನಕ್ಕೆ ತಲುಪುತ್ತೀರಿ.

ಕರ್ಕಾಟಕ ರಾಶಿ :- ವಿಪರೀತ ರಾಜಯೋಗದಿಂದ ನಿಮಗೆ ಹೆಚ್ಚಿನ ಪ್ರಯೋಜನಗಳು ಸಿಗುತ್ತದೆ. ಹೆಚ್ಚಿನ ಆರ್ಥಿಕ ಲಾಭ ಪಡೆಯುತ್ತೀರಿ. ಬಹಳ ಸಮಯದಿಂದ ಬೇರೆ ಕಡೆ ಸಿಕ್ಕಿಹಾಕಿಕೊಂಡಿದ್ದ ನಿಮ್ಮ ಹಣ ವಾಪಸ್ ಸಿಗುತ್ತದೆ. ಸಂಗಾತಿಯ ಜೊತೆಗೆ ನಿಮ್ಮ ಸಂಬಂಧ ಚೆನ್ನಾಗಿರುತ್ತದೆ. ಈ ವೇಳೆ ಐಷಾರಾಮಿ ವಸ್ತುಗಳ ಖರೀದಿ ಮಾಡುತ್ತೀರಿ.

ಮೇಷ ರಾಶಿ :- ವಿಪರೀತ ರಾಜಯೋಗ ನಿಮಗೂ ಹೆಚ್ಚಿನ ಅನುಕೂಲ ತಂದುಕೊಡುತ್ತದೆ. ನಿಮಗೆ ಅದೃಷ್ಟ ಸಾಥ್ ನೀಡುತ್ತದೆ. ನಿಮ್ಮ ಎಲ್ಲಾ ಕಷ್ಟಗಳು ಕಳೆದು ಸಂತೋಷ ಬರುತ್ತದೆ. ದಿಢೀರ್ ಧನಲಾಭ ಉಂಟಾಗುತ್ತದೆ. ಬ್ಯುಸಿನೆಸ್ ನಲ್ಲಿ ಲಾಭ ಪಡೆಯುತ್ತೀರಿ.

ಮಿಥುನ ರಾಶಿ :- ಈ ರಾಶಿಯವರಿಗೆ ಬ್ಯುಸಿನೆಸ್ ನಲ್ಲಿ ಹೆಚ್ಚು ಲಾಭ ಸಿಗುತ್ತದೆ. ಆದಾಯಕ್ಕೆ ಹೊಸ ಮೂಲ ಸೃಷ್ಟಿಯಾಗುತ್ತದೆ. ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ. ಈ ವೇಳೆ ನೀವು ಆಸ್ತಿ ಅಥವಾ ವಾಹನ ಖರೀದಿ ಮಾಡಬಹುದು. ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ಯಶಸ್ಸು ಸಿಗುತ್ತದೆ.

Leave a Comment