ಅವಕಾಶ ಕೊಡ್ತೀವಿ, ಮಂಚಕ್ಕೆ ಬಾ ಅಂದ್ರು: ಸ್ಟಾರ್ ನಟಿ ನಯನ ತಾರ ಸಿಡಿಸಿದ ಹೊಸ ಬಾಂ ಬ್!

0
35

If you give me a chance, come to the couch ನಯನ ತಾರ(Nayana Thara) ಈ ಹೆಸರು ದಕ್ಷಿಣ ಸಿನಿಮಾ(South cinema) ರಂಗದಲ್ಲಿ ದೊಡ್ಡ ಹೆಸರು. ಸ್ಟಾರ್ ನಟಿಯಾಗಿ, ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿರುವ ನಟಿ ನಯನ ತಾರ ತನಗಾಗಿ ಸಿನಿಮಾ ರಂಗದಲ್ಲಿ ಒಂದು ಸ್ಥಾನವನ್ನು ಪಡೆದುಕೊಂಡಿದ್ದಾರೆ. ನಟಿ ನಯನ ತಾರಾ ನಂತರ ಸಿನಿಮಾ ರಂಗಕ್ಕೆ ಅಡಿಯಿಟ್ಟ ನಟಿಯರು ಈಗಾಗಲೇ ಬೇಡಿಕೆ ಕಳೆದುಕೊಂಡಿದ್ದಾರೆ. ಆದರೆ ನಯನ ತಾರಾ ಅವರ ತಾರಾ(Nayanthara) ವರ್ಚಸ್ಸು ಮಾತ್ರ ಕುಗ್ಗಿಲ್ಲ. ಆದ್ದರಿಂದಲೇ ಈ ನಟಿ ದಕ್ಷಿಣದ ಲೇಡಿ ಸೂಪರ್ ಸ್ಟಾರ್ ಎನ್ನುವ ಹೆಸರನ್ನು ಪಡೆದುಕೊಂಡು ಸಿನಿಮಾ ರಂಗದಲ್ಲಿ ಮಿಂಚುತ್ತಿದ್ದಾರೆ.

ನಟಿ ನಯನ ತಾರ ಇತ್ತೀಚಿಗೆ ಮಾದ್ಯಮವೊಂದರ ಸಂದರ್ಶನದಲ್ಲಿ ನೀಡಿದ ಹೇಳಿಕೆ ಅಥವಾ ತಿಳಿಸಿದ ವಿಚಾರ ಈಗ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಹೌದು, ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್(Casting couch) ಅಂದರೆ ಅವಕಾಶಕ್ಕಾಗಿ ನಟಿಯರನ್ನು ಮಂಚಕ್ಕೆ ಕರೆಯುವ ಒಂದು ಕೆಟ್ಟ ಸಂಸ್ಕೃತಿ ಇದೆ ಎಂದು ಆಗಾಗ ಕೆಲವು ನಟಿಯರು ತಮಗೆ ಆದ ಕಹಿ ಅನುಭವವನ್ನು ಹೇಳಿಕೊಂಡಿದ್ದಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಸ್ಟಾರ್ ನಟಿಯರೂ ಕೂಡಾ ಈ ಅನುಭವ ತಮಗೂ ಆಗಿದೆ ಎಂದು ಸತ್ಯ ಬಹಿರಂಗ ಪಡಿಸಿ ಕಾಸ್ಟಿಂಗ್ ಕೌಚ್ ಎಂಬ ಕರಾಳ ಸತ್ಯದ ಮೇಲಿಂದ ಪರದೆ ಎಳೆಯುತ್ತಿದ್ದಾರೆ.‌

ನಯನ ತಾರ(Nayanthara) ಮಾತನಾಡುತ್ತಾ, ತಾನು ಸಿನಿಮಾ ರಂಗಕ್ಕೆ ಎಂಟ್ರಿ ನೀಡಿದ ದಿನಗಳಲ್ಲಿ ಕಾಸ್ಟಿಂಗ್ ಕೌಚ್ ಅನುಭವ ಎದುರಿಸಿದ್ದೆ ಎಂದಿದ್ದು, ಸಿನಿಮಾ ಅವಕಾಶ ನೀಡುತ್ತವೆ ಅದರ ಬದಲಿಗೆ‌ ಕಮಿಟ್ಮೆಂಟ್ ಕೊಡುವಂತೆ ಕೇಳಿದ್ದರು. ಆದರೆ ನಾನು ಅದನ್ನು ತಿರಸ್ಕರಿಸಿದೆ. ಏಕೆಂದರೆ ನನಗೆ ನನ್ನ ನಟನೆಯ ಮೇಲೆ ನಂಬಿಕೆಯಿತ್ತು ಎನ್ನುವ ಮಾತನ್ನು ಹೇಳಿದ್ದಾರೆ. ಈ ಮೂಲಕ ಕಾಸ್ಟಿಂಗ್ ಕೌಚ್ ಎನ್ನುವುದು ಚಿತ್ರರಂಗದಲ್ಲಿ ಇದೆ ಎನ್ನುವವರ ಸಾಲಿಗೆ ಈಗ ನಟಿ ನಯನ ತಾರ ಸಹಾ ಸೇರ್ಪಡೆ ಆಗಿದ್ದಾರೆ.‌

ದಕ್ಷಿಣದಲ್ಲಿ ಬಹು ಬೇಡಿಕೆಯ ನಟಿಯಾಗಿರುವ ನಯನತಾರ ಪ್ರಸ್ತುತ ಬಾಲಿವುಡ್ ನಟ ಶಾರೂಖ್ ಖಾನ್(Shah Rukh Khan) ಅವರ ಮುಂದಿನ ಸಿನಿಮಾ‌ ಜವಾನ್ ನಲ್ಲಿ(Jawan) ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಮೂಲಕ ನಟಿ ಬಾಲಿವುಡ್ ಗೂ ಎಂಟ್ರಿಯನ್ನು ನೀಡುತ್ತಿದ್ದಾರೆ. ಇದುವರೆಗೆ ದಕ್ಷಿಣದಲ್ಲಿ ಪ್ರೇಕ್ಷಕರ ಮೇಲೆ ಮೋಡಿ ಮಾಡಿದ್ದ ನಟಿ ಜವಾನ್ ಸಿನಿಮಾ ಮೂಲಕ ಬಾಲಿವುಡ್ ನಟಿಯರಿಗೆ ಟಕ್ಕರ್ ಕೊಡ್ತಾರಾ? ಎನ್ನುವುದನ್ನು ಕಾದು ನೋಡಬೇಕಾಗಿದೆ.

LEAVE A REPLY

Please enter your comment!
Please enter your name here