Ileana D’cruz: ಕೊನೆಗೂ ತಮ್ಮ ಮಗುವಿನ ತಂದೆ ಯಾರು ಎಂದು ಬಹಿರಂಗಪಡಿಸಿದ ನಟಿ ಇಲಿಯಾನ!

Written by Pooja Siddaraj

Published on:

Ileana D’cruz: ನಟಿ ಇಲಿಯಾನ ಅವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಇವರು ಸೌತ್ ಇಂಡಿಯಾ ಮತ್ತು ಬಾಲಿವುಡ್ ಎರಡು ಚಿತ್ರರಂಗದಲ್ಲಿ ಬಹುಬೇಡಿಕೆ ಹೊಂದಿದ್ದ ನಟಿ. ಮೊದಲಿಗೆ ಇವರು ಸಿನಿಮಾ ಜರ್ನಿ ಶುರು ಮಾಡಿದ್ದು ತೆಲುಗು ಮತ್ತು ತಮಿಳು ಸಿನಿಮಾಗಳ ಮೂಲಕ. ಈ ಎರಡು ಭಾಷೆಯ ಸ್ಟಾರ್ ಹೀರೋಗಳ ಜೊತೆಗೆ ನಟಿಸಿ, ಸಿನಿಮಾಗಳು ಹಿಟ್ ಆದ ಕಾರಣ ಇವರಿಗೆ ಭಾರಿ ಬೇಡಿಕೆ ಇತ್ತು.

ದಕ್ಷಿಣ ಭಾರತ ಚಿತ್ರರಂಗದಲ್ಲಿ ಒಂದಷ್ಟು ವರ್ಷಗಳ ಕಾಲ ಕೆಲಸ ಮಾಡಿದ ಬಳಿಕ ಇಲಿಯಾನ ಅವರು ಬಾಲಿವುಡ್ ಗೆ ಎಂಟ್ರಿ ಕೊಟ್ಟರು. ಬರ್ಫಿ, ಮೇ ತೇರಾ ಹೀರೋ, ಬಾದ್ ಶಾಹೋ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದರು ಕೂಡ, ಇಲಿಯಾನ ಅವರಿಗೆ ದೊಡ್ಡ ಯಶಸ್ಸು ಬಾಲಿವುಡ್ ನಲ್ಲಿ ಸಿಗಲಿಲ್ಲ. ಬಳಿಕ ತೆಲುಗಿನಲ್ಲಿ ರವಿತೇಜ ಅವರ ಅಮರ್ ಅಕ್ಬರ್ ಆಂಟೋನಿ ಸಿನಿಮಾ ಸೌತ್ ಗೆ ಕಂಬ್ಯಾಕ್ ಮಾಡಿದರು. ಆದರೆ ಈ ಸಿನಿಮಾ ಕೂಡ ಅವರಿಗೆ ಹೆಚ್ಚಿನ ಹೆಸರು ತಂದುಕೊಡಲಿಲ್ಲ.

ಈಗ ಸಿನಿಮಾರಂಗದಲ್ಲಿ ಮೊದಲಿನಷ್ಟು ಆಕ್ಟಿವ್ ಇಲ್ಲ ಎಂದರು ಸಹ, ಇಲಿಯಾನ ಅವರು ಆಗೊಮ್ಮೆ ಈಗೊಮ್ಮೆ ಬಾಲಿವುಡ್ ನ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ಇವರು ಗರ್ಭಿಣಿ ಎನ್ನುವ ಸುದ್ದಿಯನ್ನು ಬಹಿರಂಗಪಡಿಸಿ ಶಾಕ್ ನೀಡಿದ್ದರು. ಮದುವೆ ಬಗ್ಗೆ ಎಂದೂ ಹೇಳಿರದ ಇಲಿಯಾನ ದಿಢೀರ್ ಎಂದು ಪ್ರೆಗ್ನೆನ್ಸಿ ವಿಷಯ ಅನೌನ್ಸ್ ಮಾಡಿದಾಗ ಅವರ ಅಭಿಮಾನಿಗಳು ಕೂಡ ಶಾಲ್ ಆಗಿದ್ದರು. ಬಹುಶಃ ಇಲಿಯಾನ ಅವರು ಮದುವೆಯಾಗದೆ ತಾಯಿ ಆಗುತ್ತಿದ್ದಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು.

ಈ ವರ್ಷ ಆಗಸ್ಟ್ 1ರಂದು ಇಲಿಯಾನ ಅವರು ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಈಗ ಇವರ ಮಗುವಿಗೆ 3 ತಿಂಗಳು ತುಂಬಿದ್ದು, ಮಗುವನ್ನು ನೋಡಿಕೊಳ್ಳುವುದರಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ ಇಲಿಯಾನ. ತಮ್ಮ ಮಗುವಿಗೆ ಕೋವಾ ಫೀನಿಕ್ಸ್ ಡೋಲನ್ ಎಂದು ಹೆಸರನ್ನು ಇಟ್ಟಿದ್ದಾರೆ. ಹಾಗೆಯೇ ಇತ್ತೀಚೆಗೆ ತಮ್ಮ ಮಗುವಿನ ತಂದೆ, ತಮ್ಮ ಗಂಡ ಯಾರು ಎನ್ನುವುದನ್ನು ಕೂಡ ರಿವೀಲ್ ಮಾಡಿದ್ದಾರೆ ಇಲಿಯಾನ.

ಇನ್ಸ್ಟಾಗ್ರಾಮ್ ನಲ್ಲಿ ಅಭಿಮಾಮಿಗಳು ಕೇಳಿದ ಪ್ರಶ್ನೆಗಳಿಗೆ ಇಲಿಯಾನ ಉತ್ತರ ಕೊಡುತ್ತಿದ್ದರು, ಆಗ ಒಬ್ಬ ಅಭಿಮಾನಿ, ಸಿಂಗಲ್ ಪೇರೆಂಟಿಂಗ್ ಮಾಡೋದು ಹೇಗಿದೆ ಎಂದು ಪ್ರಶ್ನೆ ಕೇಳಿದ್ದರು. ಅದಕ್ಕೆ ಇಲಿಯಾನ ಅವರು ತಮ್ಮ ಗಂಡನ ಜೊತೆಗಿರುವ ಫೋಟೋ ಶೇರ್ ಮಾಈ, ನಾನು ಸಿಂಗಲ್ ಪೇರೆಂಟ್ ಅಲ್ಲ ಎಂದು ಹೇಳಿದ್ದಾರೆ. ಇವರ ಗಂಡನ ಹೆಸರು ಮೈಕಲ್ ಡೋಲನ್ ಎಂದು ಹೇಳಲಾಗಿದೆ. ಒಂದು ವರ್ಷದ ಹಿಂದೆ ಇವರಿಬ್ಬರ ಮದುವೆ ನಡೆದಿದೆ ಎಂದು ಕೂಡ ಹೇಳಲಾಗುತ್ತಿದೆ.

Leave a Comment