11 ಲಕ್ಷದ ಬೈಕ್ ನಲ್ಲಿ ಹಾಲು ಮಾರಾಟ ಮಾಡಲು ಹೊರಟ ವ್ಯಕ್ತಿ: ವೀಡಿಯೋ ನೋಡಿ ಜನ ಶಾಕ್!!

0
26

Indian man uses Harley-Davidson to deliver milk ಸೋ಼ಷಿಯಲ್ ಮೀಡಿಯಾ(Social Media) ಎನ್ನುವ ಜಗತ್ತಿನಲ್ಲಿ ಪ್ರತಿ ನಿತ್ಯ ವೈವಿದ್ಯಮಯ ಎನಿಸುವ ಅದೆಷ್ಟೋ ವೀಡಿಯೋಗಳು ವೈರಲ್ (viral videos) ಆಗುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ಫನ್ನಿ ಎನಿಸಿದರೆ, ಇನ್ನೂ ಕೆಲವು ಆಶ್ಚರ್ಯವನ್ನು ಉಂಟು ಮಾಡುವ ಹಾಗಿರುತ್ತವೆ. ಇಂತಹ ವೀಡಿಯೋಗಳು ನೆಟ್ಟಿಗರಿಗೆ ಬಹಳ ಇಷ್ಟವಾಗುತ್ತದೆ. ಅಲ್ಲದೇ ಇಂತಹ ವೀಡಿಯೋಗಳು ಬಹಳ ಬೇಗ ವೈರಲ್ ಆಗಿ ಬಿಡುತ್ತವೆ. ನೆಟ್ಟಿಗರಿಂದ ವೈವಿದ್ಯಮಯ ರೀತಿಯಲ್ಲಿ ಕಾಮೆಂಟ್ ಗಳು ಸಹಾ ಹರಿದು ಬರುತ್ತದೆ. ‌ಪ್ರಸ್ತುತ ಅಂತಹುದೇ ಒಂದು ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ಎಲ್ಲರ ಗಮನವನ್ನು ಸೆಳೆಯುತ್ತಿದೆ.

ಹೌದು, ವೈರಲ್ ಆಗಿರುವ ವೀಡಿಯೋದ ವಿಚಾರಕ್ಕೆ ಬಂದರೆ ವ್ಯಕ್ತಿಯೊಬ್ಬರು ಹಾಲನ್ನು ಮಾರಾಟ(milk man) ಮಾಡುವುದಕ್ಕೆ ದುಬಾರಿ ಬೈಕ್ ನಲ್ಲಿ ಹೊರಟಿದ್ದು, ಇದನ್ನು ನೋಡಿ ನೆಟ್ಟಿಗರು ಅಚ್ಚರಿ ಪಡುತ್ತಿದ್ದಾರೆ. ಸಾಮಾನ್ಯವಾಗಿ ಹಾಲು ಮಾರಾಟ ಮಾಡುವವರು ಸೈಕಲ್ ನಲ್ಲಿ ಅಥವಾ ಸಾಧಾರಣ ಎನಿಸುವ ದ್ವಿಚಕ್ರ ವಾಹನಗಳಲ್ಲಿ ಹೋಗುವುದು ಸಾಮಾನ್ಯವಾಗಿ ಕಾಣುವ ದೃಶ್ಯವಾಗಿರುತ್ತದೆ. ಆದರೆ ಈ ವ್ಯಕ್ತಿಯು ದುಬಾರಿ ಬೆಲೆಯ ಪ್ರೀಮಿಯಂ ಬೈಕ್ ಹಾರ್ಲೆ ಡೇವಿಡ್‌‌ಸನ್‌‌‌( Harley-Davidson to deliver milk ) ನಲ್ಲಿ ಹಾಲು ಮಾರಾಟ ಮಾಡಲು ಹೊರಟಿರುವುದು ನೋಡಿ ನೆಟ್ಟಿಗರು ಶಾ ಕ್ ಆಗಿದ್ದಾರೆ.‌

ಹನ್ನೊಂದು ಲಕ್ಷ ರೂಪಾಯಿ ಬೆಲೆಯ ಹಾರ್ಲೆ‌ ಡೇವಿಡ್‌‌ಸನ್‌‌‌ ಬೈಕ್ ನಲ್ಲಿ ಮನೆ ಮನೆಗೆ ಹಾಲು ಹಾಕಲು ಹೋಗುವ ವ್ಯಕ್ತಿಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲೊಂದು ಸಂಚಲನಕ್ಕೆ ಕಾರಣವಾಗಿದೆ. ಮನೆಯಿಂದ ಹಾಲಿನ ಕ್ಯಾನ್ ಗಳನ್ನು ಬೈಕ್ ಗೆ ಕಟ್ಟಿ ಆ ವ್ಯಕ್ತಿ ಹೊರಗೆ ಬರುವಾಗ ಅದನ್ನು ವೀಡಿಯೋ ಮಾಡಿದ್ದು, ಈ ವೀಡಿಯೋ ವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಲಾಗಿದ್ದು, ಈ ವೀಡಿಯೋ ಗೆ ಲಕ್ಷಗಳ ಸಂಖ್ಯೆಯಲ್ಲಿ ವೀಕ್ಷಣೆಗಳು ಹರಿದು ಬಂದಿವೆ ಹಾಗೂ ಸಹಸ್ರಾರು ಮಂದಿ ಮೆಚ್ಚುಗೆಗಳನ್ನು ಸಹಾ ನೀಡಿದ್ದಾರೆ.

ಈ ಘಟನೆ ಎಲ್ಲಿನದು? ಯಾವಾಗ ನಡೆದಿದ್ದು? ಎನ್ನುವುದರ ವಿವರಗಳು ಇಲ್ಲ. ಅಮಿತ್ ಬದ್ನಾನಾ ಎನ್ನುವ ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವೀಡಿಯೋವನ್ನು ಶೇರ್ ಮಾಡಲಾಗಿದೆ. ವೀಡಿಯೋ ನೋಡಿದ ನೆಟ್ಟಿಗರು ವೈವಿದ್ಯಮಯವಾದ ಕಾಮೆಂಟ್ ಗಳನ್ನು ಮಾಡಿದ್ದಾರೆ. ಹಾಲು ಮಾರಾಟ ಮಾಡಲು ಹಾರ್ಲೆ ಡೇವಿಡ್‌‌ಸನ್‌‌‌ ಬೈಕ್ ನಲ್ಲಿ ಹೋಗೋದು ಸೂಪರ್ ಎಂದು ಅನೇಕರು ಮೆಚ್ಚುಗೆಗಳನ್ನು ನೀಡಿದ್ದಾರೆ. ಆದರೆ ಕೆಲವರು ಇದು ವೀಡಿಯೋಗಾಗಿ ಮಾಡಿರುವುದು ಎಂದು ಸಹಾ ಹೇಳಿದ್ದಾರೆ.

LEAVE A REPLY

Please enter your comment!
Please enter your name here