Investment Schemes: ಕೇವಲ 8,333 ರೂಪಾಯಿ ಹೂಡಿಕೆ ಮಾಡಿ ಬರೋಬ್ಬರಿ 69 ಲಕ್ಷ ರಿಟರ್ನ್ಸ್ ಪಡೆಯಿರಿ, ಇಂದೇ ಹೂಡಿಕೆ ಶುರು ಮಾಡಿ

Written by Pooja Siddaraj

Published on:

ನಾವು ಎಷ್ಟೇ ಹಣ ಗಳಿಸಿದರು ಅದರಲ್ಲಿ ಸ್ವಲ್ಪ ಮೊತ್ತವನ್ನು ಹೂಡಿಕೆ ಮಾಡುವುದು ಒಳ್ಳೆಯದು, ಮುಂದಿನ ಭವಿಷ್ಯ ಮತ್ತು ಜೀವನ ಚೆನ್ನಾಗಿರಬೇಕು ಎಂದರೆ ಈಗಿನಿಂದ ಹೂಡಿಕೆ ಮಾಡುತ್ತಾ ಬಂದರೆ ಮುಂದೆ ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ. ಹಾಗಾಗಿ ಉತ್ತಮ ಯೋಜನೆಗಳನ್ನು ಆಯ್ಕೆ ಮಾಡಿ, ಹೂಡಿಕೆ ಮಾಡುವುದಕ್ಕೆ ಶುರು ಮಾಡಬಹುದು. ಇದರಿಂದ ನೀವು ವಯಸ್ಸಾದ ಕಾಲದಲ್ಲಿ ಆರ್ಥಿಕವಾಗಿ ತೊಂದರೆ ಅನುಭವಿಸುವ ಅವಶ್ಯಕತೆ ಇರುವುದಿಲ್ಲ.

ಒಂದು ವೇಳೆ ನೀವು ಒಳ್ಳೆಯ ಯೋಜನೆಯೊಂದರಲ್ಲಿ ಹೂಡಿಕೆ ಮಾಡಬೇಕು ಎಂದುಕೊಂಡಿದ್ದರೆ, ನಿಮಗಾಗಿ ಒಂದು ಒಳ್ಳೆಯ ಆಯ್ಕೆ ಇದೆ. ಈ ಯೋಜನೆಯಲ್ಲಿ ನೀವು ₹8333 ಹೂಡಿಕೆ ಮಾಡುತ್ತಾ ಬಂದರೆ, ಮೆಚ್ಯುರಿಟಿ ಅವಧಿಯಲ್ಲಿ ಬರೋಬ್ಬರಿ 69 ಲಕ್ಷ ರೂಪಾಯಿ ಪಡೆಯಬಹುದು. ಇಷ್ಟು ಒಳ್ಳೆಯ ರಿಟರ್ನ್ಸ್ ನೀಡುವ ಈ ಯೋಜನೆಯ ಹೆಸರು Public Provident Fund. ಈ ಯೋಜನೆಯ ಬಗ್ಗೆ ಪೂರ್ತಿ ಮಾಹಿತಿ ತಿಳಿಸಿಕೊಡುತ್ತೇವೆ ನೋಡಿ..

ಸರ್ಕಾರದ ಮಾನ್ಯತೆ ಪಡೆದಿರುವ ಯೋಜನೆ ಇದಾಗಿದೆ, Public Provident Fund ನಲ್ಲಿ ಹೂಡಿಕೆ ಮಾಡಿದರೆ, ನೀವು ಹೂಡಿಕೆ ಮಾಡುವ ಹಣಕ್ಕೆ 7.1% ಬಡ್ಡಿದರ ಸಿಗುತ್ತದೆ. ಪರಿಷ್ಕರಿಸಿರುವ ಈ ಬಡ್ಡಿದರ 2023ರ ಏಪ್ರಿಲ್ 1ರಿಂದ ಜಾರಿಗೆ ಬಂದಿದೆ. Public Provident Fund ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದರೆ, ಇದರ ಮೆಚ್ಯುರಿಟಿ ಅವಧಿ 15 ವರ್ಷಗಳವರೆಗು ಇರುತ್ತದೆ, ಒಂದು ವೇಳೆ ವಿಸ್ತರಿಸಲು ಬಯಸಿದರೆ, 5 ವರ್ಷಗಳವರೆಗು ವಿಸ್ತರಿಸಬಹುದು.

ಈ ಯೋಜನೆಯಲ್ಲಿ ನೀವು ಮಿನಿಮಮ್ 500 ರೂಪಾಯಿ ಮತ್ತು ಮ್ಯಾಕ್ಸಿಮಮ್ 1.50 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ 69 ಲಕ್ಷ ರೂಪಾಯಿ ರಿಟರ್ನ್ಸ್ ಪಡೆಯುವುದು ಹೇಗೆ ಎಂದು ನೋಡುವುದಾದರೆ, ಪ್ರತಿ ತಿಂಗಳು ನೀವು ₹8,333 ರೂಪಾಯಿಗಳನ್ನು ಹೂಡಿಕೆ ಮಾಡುತ್ತಾ ಬರಬೇಕು. ಈ ರೀತಿಯಾಗಿ ವರ್ಷಕ್ಕೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ ಹಾಗೆ ಆಗುತ್ತದೆ.

ಇಷ್ಟು ಮೊತ್ತವನ್ನು 25 ವರ್ಷಗಳ ಕಾಲ ಹೂಡಿಕೆ ಮಾಡುತ್ತಾ ಬಂದರೆ, ವರ್ಷಕ್ಕೆ 1 ಲಕ್ಷದ ಹಾಗೆ 25 ವರ್ಷಕ್ಕೆ 25 ಲಕ್ಷ ರೂಪಾಯಿ ಹೂಡಿಕೆ ಮಾಡಿರುತ್ತೀರಿ. 25 ವರ್ಷಗಳ ಬಳಿಕ ಯೋಜನೆ ಮುಗಿಯುವ ಸಮಯಕ್ಕೆ 68.72 ಲಕ್ಷ ರೂಪಾಯಿ ಮೆಚ್ಯುರಿಟಿ ಜೊತೆಗೆ ಸಿಗುತ್ತದೆ. ಹಾಗೆಯೇ ಈ ಯೋಜನೆಯಿಂದ ಸಿಗುವ ಮತ್ತೊಂದು ಪ್ರಯೋಜನ ಏನು ಎಂದರೆ, ಪಿಪಿಎಫ್ ಯೋಜನೆಯಲ್ಲಿ ನೀವು ತೆರಿಗೆ ಕಡಿತ ಪ್ರಯೋಜನ ಕೂಡ ಪಡೆಯಬಹುದು. ನಿಮ್ಮ ಮುಂದಿನ ಜೀವನಕ್ಕೆ ಈ ಯೋಜನೆಯಿಂದ ಹೆಚ್ಚಿನ ಅನುಕೂಲ ಆಗುತ್ತದೆ.

Leave a Comment