ಐಪಿಎಲ್ ಆರಂಭಕ್ಕೂ ಮುನ್ನ ಈ ತಂಡಕ್ಕೆ ದೊಡ್ಡ ಪೆಟ್ಟು!ಈ ಅನುಭವಿ ಆಟಗಾರ ಇಡೀ ಸೀಸನ್ ನಿಂದ ಹೊರಕ್ಕೆ!

0
38
Indian players look dejected after their defeat during the first one-day international cricket match between New Zealand and India at Eden Park in Auckland on November 25, 2022. (Photo by DAVID ROWLAND / AFP) (Photo by DAVID ROWLAND/AFP via Getty Images

IPL 2023: IPL 2023 ರ ಕ್ಯಾಪ್ಟನ್ ಬದಲಾವಣೆ: ಇಂಡಿಯನ್ ಪ್ರೀಮಿಯರ್ ಲೀಗ್ (IPL-2023) ನ 16 ನೇ ಸೀಸನ್ ಮಾರ್ಚ್ 31 ರಿಂದ ಪ್ರಾರಂಭವಾಗಲಿದೆ. ಋತುವಿನ ಆರಂಭಕ್ಕೂ ಮುಂಚೆಯೇ, ಅನುಭವಿ ಆಟಗಾರನ ಬಗ್ಗೆ ದೊಡ್ಡ ಅಪ್ಡೇಟ್ ಬಂದಿದೆ. ಈ ಆಟಗಾರ ಇಡೀ ಋತುವಿನಲ್ಲಿ ಆಡಲು ಸಾಧ್ಯವಾಗುವುದು ಅನುಮಾನ. ಗಾಯದ ಸಮಸ್ಯೆಯಿಂದ ಟೀಂ ಇಂಡಿಯಾದಿಂದ ಹೊರಗುಳಿದಿರುವ ಈ ದಿಗ್ಗಜನಿಗೆ ಸದ್ಯಕ್ಕೆ ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ.

ಸಕ್ಕರೆ ಕಾಯಿಲೆ ಇದ್ದವರು ದಯವಿಟ್ಟು ಈ ತಪ್ಪು ಯಾವುದೇ ಕಾರಣಕ್ಕೂ ಮಾಡಬೇಡಿ!

ಐಪಿಎಲ್ ಆರಂಭಕ್ಕೂ ಮುನ್ನವೇ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಭಾರೀ ಹಿನ್ನಡೆ ಅನುಭವಿಸಿದೆ. ತಂಡದ ನಾಯಕ ಮತ್ತು ಡ್ಯಾಶಿಂಗ್ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಕನಿಷ್ಠ IPL-2023 ರ ಮೊದಲ ಭಾಗಕ್ಕೆ ಹೊರಗುಳಿಯಲಿದ್ದಾರೆ. ಕ್ರಿಕ್‌ಇನ್‌ಫೋ ವರದಿ ಮಾಡಲಾಗಿದೆ. ವರದಿಯ ಪ್ರಕಾರ, ಅಯ್ಯರ್ ಅವರು ತಮ್ಮ ಬೆನ್ನಿನ ಕೆಳಭಾಗದ ಗಾಯಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗದಿರಲು ನಿರ್ಧರಿಸಿದ್ದಾರೆ. ಅವರು ತಮ್ಮ ರಿಕವರಿಯನ್ನ ಮುಂದುವರೆಸಿರುವುದರಿಂದ ಅವರಿಗೆ ವಿಶ್ರಾಂತಿಯನ್ನು ಸೂಚಿಸಲಾಗಿದೆ.

ಅಯ್ಯರ್‌ಗೆ ಏಕದಿನ ಸರಣಿಯನ್ನು ಆಡಲು ಸಾಧ್ಯವಾಗಲಿಲ್ಲ

ಶ್ರೇಯಸ್ ಅಯ್ಯರ್ ಗಾಯದ ಸಮಸ್ಯೆಯಿಂದಾಗಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಭಾಗವಾಗಿರಲಿಲ್ಲ. ಇಷ್ಟೇ ಅಲ್ಲ, ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಕೊನೆಯ ಟೆಸ್ಟ್‌ನಲ್ಲೂ ಆಡಿರಲಿಲ್ಲ. ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಬಿಸಿಸಿಐ ವೈದ್ಯಕೀಯ ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿದ್ದಾರೆ.

IPL 2023 Captain Changed :28 ವರ್ಷದ ಶ್ರೇಯಸ್ ಅಯ್ಯರ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶ ಪ್ರವಾಸದ ನಂತರ ಬೆನ್ನಿನ ಕೆಳಭಾಗದಲ್ಲಿ ಅಸ್ವಸ್ಥತೆಯನ್ನು ಅನುಭವಿಸಿದರು. ನಂತರ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ODI ಸರಣಿ ಮತ್ತು ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಶದಿಂದ ಹೊರಗುಳಿದಿದ್ದರು ಸದ್ಯ ಅಯ್ಯರ್ ಸ್ತ್ರಚಿಕಿತ್ಸೆಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಆಯ್ಕೆಗಳನ್ನು ನೋಡಲು ಬಯಸುವುದಾಗಿ ಅಯ್ಯರ್ ಬಿಸಿಸಿಐ ವೈದ್ಯಕೀಯ ಸಿಬ್ಬಂದಿಗೆ ತಿಳಿಸಿದ್ದಾರೆ. ನೈಟ್ ರೈಡರ್ಸ್ ಮ್ಯಾನೇಜ್‌ಮೆಂಟ್‌ನಿಂದಲೂ ಅವರಿಗೆ ಸಂಪೂರ್ಣ ಬೆಂಬಲ ಸಿಕ್ಕಿದೆ

LEAVE A REPLY

Please enter your comment!
Please enter your name here