Isha Koppikar: ಗಂಡನಿಗೆ ವಿಚ್ಛೇದನ ನೀಡಿದ ಸೂರ್ಯವಂಶ ನಟಿ!

0 15

Isha Koppikar: ಕನ್ನಡ ಚಿತ್ರರಂಗದಲ್ಲಿ ಎವರ್ ಗ್ರೀನ್ ಸಿನಿಮಾ ಹೆಸರು ಮಾಡಿರುವ ಲಿಸ್ಟ್ ಗೆ ಬರುವುದು ಸೂರ್ಯವಂಶ ಸಿನಿಮಾ. ಈ ಸಿನಿಮಾ ಈವಾಗ ಟಿವಿಯಲ್ಲಿ ಬಂದರು ಕೂಡ ಜನರು ತುಂಬಾ ಇಷ್ಟಪಟ್ಟು ನೋಡುತ್ತಾರೆ. ವಿಷ್ಣುವರ್ಧನ್ ಅವರ ಅಭಿನಯ, ಲಕ್ಷ್ಮಿ ಅವರು, ನಾಯಕಿಯರಾದ ಇಷಾ ಕೊಪ್ಪಿಕರ್ ಹಾಗೂ ವಿಜಯಲಕ್ಷ್ಮಿ ಅವರ ಪಾತ್ರ ಇದೆಲ್ಲವೂ ಕೂಡ ಎಲ್ಲರ ಫೇವರೆಟ್. ಸಿನಿಮಾದ ನಾಯಕಿ ಇಷಾ ಕೊಪ್ಪಿಕ್ಕರ್ ಅವರು ಎಲ್ಲರಿಗೂ ತುಂಬಾ ಇಷ್ಟವಾಗಿದ್ದರು. ಇದೀಗ ಈ ನಟಿ ವಿಚ್ಛೇದನದ ಕಾರಣಕ್ಕೆ ಸುದ್ದಿಯಾಗಿದ್ದಾರೆ.

ಈ ನಟಿ ಮೂಲತಃ ಉತ್ತರ ಭಾರತದವರು, ಮಾಡೆಲ್ ಆಗಿದ್ದವರು. 1998 ರಲ್ಲಿ ಹಿಂದಿ ಭಾಷೆಯ ಏಕ್ ಥಾ ದಿಲ್ ಏಕ್ ಥಾ ಧಡ್ಕನ್ ಸಿನಿಮಾ ಮೂಲಕ ನಟನೆ ಶುರು ಮಾಡಿದರು. ನಂತರ ದಕ್ಷಿಣ ಭಾರತ ಸಿನಿಮಾಗಳಿಗೂ ಎಂಟ್ರಿ ಕೊಟ್ಟರು. ನಟಿ ಇಷಾ ಕೊಪ್ಪಕರ್ ಕನ್ನಡ, ಹಿಂದಿ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಸಹ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಜೊತೆ ಸೂರ್ಯವಂಶ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.

ಅದಾದ ಬಳಿಕ ಕನ್ನಡದಲ್ಲಿ ರವಿಚಂದ್ರನ್ ಅವರ ಜೊತೆ ಓ ನನ್ನ ನಲ್ಲೇ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡದಲ್ಲು ಫೇಮಸ್ ಆದರು. ಶಿವಣ್ಣ ಅವರ ಜೊತೆ ಕವಚ ಸಿನಿಮಾದಲ್ಲಿ ಸಹ ಮುಖ್ಯವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದರು ಇಷಾ. ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಹ ಸಾಕಷ್ಟು ಒಳ್ಳೆಯ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ಕಾರಣಕ್ಕೆ ಆಗಾಗ ಲೈಮ್ ಲೈಟ್ ನಲ್ಲಿ ಇರುತ್ತಿದ್ದ ಇವರು ಇದೀಗ ವಿಚ್ಛೇದನ ವಿಷಯಕ್ಕೆ ಸುದ್ದಿಯಾಗಿದ್ದಾರೆ.

ಇವರು ಟಮ್ಮಿ ನಾರಂಗ್ ಎನ್ನುವ ವ್ಯಕ್ತಿಯ ಜೊತೆಗೆ 2009ರ ನವೆಂಬರ್ 29ರಂದು ಮದುವೆಯಾಗಿದ್ದರು. ಈ ಜೋಡಿಗೆ ರಿಯಾನ ಹೆಸರಿನ 9 ವರ್ಷದ ಮಗಳಿದ್ದಾಳೆ. ಆದರೆ ಇಬ್ಬರ ನಡುವೆ ಹೊಂದಾಣಿಕೆ ಇಲ್ಲದ ಕಾರಣ ವಿಚ್ಛೇದನ ಪಡೆದಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಇಷಾ ಕೋಪ್ಪಿಕರ್ ಅವರು ಈಗಾಗಲೇ ಪತಿಯಿಂದ ದೂರವಾಗಿ ಬೇರೆ ಮನೆಯಲ್ಲಿ ಮಗಳ ಜೊತೆಗೆ ವಾಸ ಮಾಡುತ್ತಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.