Jaya Bachchan: ವಿಶ್ವಸುಂದರಿಯನ್ನು ಸೊಸೆ ಮಾಡಿಕೊಳ್ಳುವುದಕ್ಕೆ ಜಯಾ ಬಚ್ಚನ್ ಅವರಿಗೆ ಇಷ್ಟವೇ ಇರಲಿಲ್ಲವಂತೆ, ಇವರ ಮನಸ್ಸಲ್ಲಿದ್ದ ಮತ್ತೊಬ್ಬ ನಟಿ ಯಾರು ಗೊತ್ತಾ?

Written by Pooja Siddaraj

Published on:

Jaya Bachchan: ನಮ್ಮ ಕರ್ನಾಟಕದ ಬೆಡಗಿ, ಮಂಗಳೂರಿನ ಹುಡುಗಿ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಅವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅವಶ್ಯಕತೆ ಇಲ್ಲ. ಕರ್ನಾಟಕದ ಹೆಸರನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋದವರಲ್ಲಿ ಐಶ್ವರ್ಯ ರೈ ಕೂಡ ಒಬ್ಬರು. ಮೊದಲಿಗೆ ದಕ್ಷಿಣ ಭಾರತದಲ್ಲಿ ಹೆಸರು ಮಾಡಿದ್ದ ಐಶ್ವರ್ಯ ರೈ ಅವರು ಬಳಿಕ ಬಾಲಿವುಡ್ ನಲ್ಲಿ ಹೆಸರು ಮಾಡಿದರು. ಈಗಲೂ ಕೂಡ ಇವರಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ.

ಐಶ್ವರ್ಯ ರೈ ಅವರು ಬಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ ಹೆಸರು ಮಾಡಿದ್ದಾರೆ. ಕೆರಿಯರ್ ನಲ್ಲಿ ಪೀಕ್ ನಲ್ಲಿ ಇದ್ದಾಗಲೇ ಮದುವೆಯಾದರು. ಬಾಲಿವುಡ್ ನ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರ ಮಗ ಅಭಿಷೇಕ್ ಬಚ್ಚನ್ ಅವರೊಡನೆ ಮದುವೆಯಾದರು. ಐಶ್ವರ್ಯ ರೈ ಅವರ ಅಭಿಷೇಕ್ ಬಚ್ಚನ್ ಅವರೊಡನೆ ಮದುವೆಯಾದ ಬಳಿಕ ಈ ಜೋಡಿಗೆ ಹೆಣ್ಣು ಮಗು ಜನಿಸಿತು, ಮಗಳಿಗೆ ಆರಾಧ್ಯ ಬಚ್ಚನ್ ಎಂದು ಹೆಸರಿಟ್ಟಿದ್ದಾರೆ. ಆರಾಧ್ಯ ಈಗ ಶಾಲೆಯಲ್ಲಿ ಓದುತ್ತಿದ್ದಾರೆ.

16 ವರ್ಷಗಳಿಂದ ಸುಂದರವಾಗಿದ್ದ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿರಬೇಕು ಎನ್ನುವ ವದಂತಿ ಕೇಳಿಬಂದಿದೆ. ಅಭಿಷೇಕ್ ಬಚ್ಚನ್ ಅವರು ವೆಡ್ಡಿಂಗ್ ರಿಂಗ್ ಇಲ್ಲದೆ ಕಾಣಿಸಿಕೊಂಡಿರುವುದು ಈ ವದಂತಿ ಕಾರಣವಾಗಿತ್ತು. ಅದರ ಜೊತೆಗೆ ಈಗ ಮತ್ತೊಂದು ವಿಚಾರಕ್ಕೆ ಅನುಮಾನ ಶುರುವಾಗಿದೆ. ಐಶ್ವರ್ಯ ರೈ ಅವರ ಮಾವ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್, ಇತ್ತೀಚೆಗೆಇವರು ಇನ್ಸ್ಟಾಗ್ರಾಮ್ ನಲ್ಲಿ ಐಶ್ವರ್ಯ ರೈ ಅವರನ್ನು ಅನ್ ಫಾಲೋ ಮಾಡಿದ್ದಾರೆ.

ಈ ವಿಚಾರಗಳು ಮುನ್ನಲೆಗೆ ಬರುತ್ತಿದ್ದ ಹಾಗೆ ಐಶ್ವರ್ಯ ರೈ ಹಾಗೂ ಬಿಗ್ ಬಿ ಕುಟುಂಬದ ನಡುವೆ ಹಲವು ವರ್ಷಗಳಿಂದ ಎಲ್ಲವೂ ಸರಿಯಿಲ್ಲ ಎಂದು ಹೇಳಲಾಗಿತ್ತು. ಆದರೆ ಈ ಫ್ಯಾಮಿಲಿ ಇಷ್ಟು ವರ್ಷಗಳ ಕಾಲ ಯಾವುದನ್ನು ಬಿಟ್ಟುಕೊಟ್ಟಿಲ್ಲ. ಅತ್ತೆ ಜಯಾ ಬಚ್ಚನ್ ಹಾಗೂ ಸೊಸೆ ಐಶ್ವರ್ಯ ರೈ ಅವರ ನಡುವೆ ಸಮಸ್ಯೆ ಇದೆ, ಇತ್ತ ಗಂಡ ಅಭಿಷೇಕ್ ಬಚ್ಚನ್ ಅವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿಲ್ಲ ಎನ್ನಲಾಗುತ್ತಿದೆ. ಹಾಗೆಯೇ ಈ ಜೋಡಿಯ ನಡುವೆ ಸಮಸ್ಯೆ ಇದ್ದರೂ ಸಹ ಮಗಳಿಗೋಸ್ಕರ ಇಬ್ಬರು ಜೊತೆಗಿದ್ದಾರೆ ಎನ್ನಲಾಗುತ್ತಿದೆ.

ಹಾಗೆಯೇ ಐಶ್ವರ್ಯ ರೈ ಅವರು ಅಮ್ಮನ ಮನೆಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿತ್ತು. ಇದೆಲ್ಲದರ ನಡುವೆ ಈಗ ಮತ್ತೊಂದು ವಿಷಯ ವೈರಲ್ ಆಗಿದೆ. ಅದೇನು ಎಂದರೆ ಅಮಿತಾಭ್ ಬಚ್ಚನ್ ಅವರ ಪತ್ನಿ ಜಯಾ ಬಚ್ಚನ್ ಅವರಿಗೆ ಐಶ್ವರ್ಯ ರೈ ಅವರನ್ನು ಮಗನಿಗೆ ಮದುವೆ ಮಾಡಿಕೊಳ್ಳಲು ಇಷ್ಟವೇ ಇರಲಿಲ್ಲವಂತೆ, ಅವರು ಕಪೂರ್ ಕುಟುಂಬದ ಕರಿಷ್ಮಾ ಕಪೂರ್ ಅವರನ್ನು ಮಗನಿಗೆ ತಂದುಕೊಳ್ಳಬೇಕು ಎಂದುಕೊಂಡಿದ್ದರು, ಸಾರ್ವಜನಿಕವಾಗಿ ಕರಿಷ್ಮಾ ಅವರೇ ತಮ್ಮ ಮನೆಯ ಸೊಸೆ ಎಂದು ಕೂಡ ಹೇಳಿದ್ದರು.

ಅದಾಫ್ಡ್ ಕಾರಣಾಂತರಗಳಿಂದ ಇವರಿಬ್ಬರ ಮದುವೆ ಆಗಿಲ್ಲ. ಅಭಿಷೇಕ್ ಅವರು ಐಶ್ವರ್ಯ ರೈ ಅವರನ್ನು ಪ್ರೀತಿಸಿ ಅವರೊಡನೆ ಮದುವೆಯಾಗಬೇಕು ಎಂದುಕೊಂಡರು. ಅದೇ ರೀತಿ ಎಲ್ಲವು ನಡೆಯಿತು.

Leave a Comment