Jayaprada: ಭಾರತ ಚಿತ್ರರಂಗದ ಸ್ಟಾರ್ ಆಗಿದ್ದ ಜಯಪ್ರದಾ ಅವರು ದಾಂಪತ್ಯ ಜೀವನದಲ್ಲಿ ಎಷ್ಟು ಕಷ್ಟ ಪಟ್ಟಿದ್ದಾರೆ ಗೊತ್ತಾ?

Written by Pooja Siddaraj

Published on:

Jayaprada: ಭಾರತ ಚಿತ್ರರಂಗದಲ್ಲಿ ಹೆಸರು ಗಳಿಸಿದ ಕಲಾವಿದೆಯರಲ್ಲಿ ಒಬ್ಬರು ಜಯಪ್ರದಾ ಅವರು. ಕನ್ನಡದಲ್ಲಿ ಡಾ. ರಾಜ್ ಕುಮಾರ್ ಹಾಗೂ ಜಯಪ್ರದಾ ಅವರ ಜೋಡಿ ಎಲ್ಲರ ಮೆಚ್ಚಿನ ಜೋಡಿಗಳಲ್ಲಿ ಒಂದು ಎಂದರೆ ತಪ್ಪಲ್ಲ. ದಕ್ಷಿಣ ಭಾರತ ಹಾಗೂ ಬಾಲಿವುಡ್ ಎರಡು ಕಡೆ ದೊಡ್ಡ ಸ್ಟಾರ್ ಆಗಿ ಮೆರೆದ ನಟಿ ಜಯಪ್ರದಾ ಅವರು ಮದುವೆಯಾದ ಬಳಿಕ ಕಣ್ಣೀರಿನಲ್ಲಿ ಕೈತೊಳೆಯುವ ಪರಿಸ್ಥಿತಿ ಎದುರಾಗಿತ್ತು. ಅಷ್ಟಕ್ಕೂ ಇವರ ಜೀವನದಲ್ಲಿ ಆಗಿದ್ದು ಏನು ಗೊತ್ತಾ?

ನಟಿ ಜಯಪ್ರದಾ ಅವರು ಹುಟ್ಟಿದ್ದು ಆಂಧ್ರಪ್ರದೇಶದಲ್ಲಿ, ಇವರ ತಂದೆ ಚಿತ್ರರಂಗದಲ್ಲಿ ಫೈನಾನ್ಶಿಯರ್ ಆಗಿದ್ದರು. ಜಯಪ್ರದಾ ಅವರು ನಟನೆ ಶುರು ಮಾಡಿದ್ದು ಕೂಡ ತೆಲುಗು ಚಿತ್ರರಂಗದ ಮೂಲಕವೇ. ಆದರೆ ಜಯಪ್ರದಾ ಅವರು ತಮಿಳು, ಕನ್ನಡ, ಮಲಯಾಳಂ, ಹಿಂದಿ ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ನಟಿಸಿ 70 ಮತ್ತು 80ರ ದಶಕದ ಬಹುಬೇಡಿಕೆಯ ನಟಿಯಾಗಿದ್ದರು. ಹಾಗೆಯೇ ಅತಿಹೆಚ್ಚು ಸಂಭಾವನೆ ಪಡೆಯುವ ನಟಿ ಕೂಡ ಆಗಿದ್ದರು.

ಕೆರಿಯರ್ ನಲ್ಲಿ ಉತ್ತುಂಗದಲ್ಲಿ ಇರುವಾಗಲೇ ಜಯಪ್ರದಾ ಅವರು 1986ರಲ್ಲಿ ಜಯಪ್ರದಾ ಅವರು ನಿರ್ಮಾಪಕ ಶ್ರೀಕಾಂತ್ ಅವರೊಡನೆ ಮದುವೆಯಾದರು. ಶ್ರೀಕಾಂತ್ ಅವರಿಗೆ ಅದಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಜಯಪ್ರದಾ ಅವರೊಡನೆ ಮದುವೆಯಾದ ಮೇಲೆ ಮೊದಲ ಹೆಂಡತಿಗೆ ಮೂರನೇ ಮಗುವು ಆಯಿತು. ಇದು ಜಯಪ್ರದಾ ಅವರಿಗೆ ಇಷ್ಟವಾಗಲಿಲ್ಲ. ಹಾಗಾಗಿ ಅವರು ಮೊದಲ ಪತ್ನಿಗೆ ವಿಚ್ಛೇದನ ಕೊಡಬೇಕು ಎಂದು ಒತ್ತಾಯಿಸಿದರು.

ಆದರೆ ಶ್ರೀಕಾಂತ್ ಅವರು ಒಪ್ಪಲಿಲ್ಲ. ಈ ಕಾರಣಕ್ಕೆ ಗಂಡನಿಂದ ವಿಚ್ಛೇದನ ಪಡೆದರು ಜಯಪ್ರದಾ. ವೃತ್ತಿಯಲ್ಲಿ ಎಷ್ಟೇ ಯಶಸ್ಸು ಪಡೆದರು, ವೈಯಕ್ತಿಕ ಜೀವನದಲ್ಲಿ ಸೋಲನ್ನೇ ಕಂಡರು. ಗಂಡನಿಂದ ಸಂತೋಷವಿಲ್ಲದೆ, ದೂರವಾಗಿ ಇಂದು ಒಂಟಿಯಾಗಿದ್ದಾರೆ ನಟಿ ಜಯಪ್ರದಾ.

Leave a Comment