Jhanvi Kapoor ದಕ್ಷಿಣ ಸಿನಿಮಾ ರಂಗ ಮತ್ತು ಬಾಲಿವುಡ್ ನಲ್ಲಿ ತನ್ನದೇ ಆದ ಒಂದು ಅಧ್ಯಾಯವನ್ನುಳ್ಳ ಏಕೈಕ ಸ್ಟಾರ್ ನಟಿ ದಿವಂಗತ ಶ್ರೀದೇವಿ (Sridevi kpoor) ಅವರ ಪುತ್ರಿ ಜಾನ್ವಿ ಕಪೂರ್ ಈಗ ದಕ್ಷಿಣ ಸಿನಿಮಾ ರಂಗದ ಕಡೆಗೆ ಮುಖ ಮಾಡಿದ್ದಾರೆ. ಹೊರ ಬಂದಿರುವ ಸುದ್ದಿಗಳ ಪ್ರಕಾರ ಈಗ ಜಾನ್ವಿ ಕಪೂರ್(Jhanvi Kapoor) ತೆಲುಗಿನ ಸ್ಟಾರ್ ನಟ ಸೌತ್ ಜ್ಯೂನಿಯರ್ ಎನ್‌ಟಿಆರ್‌ಗೆ (Jr.Ntr) ನಾಯಕಿಯಾಗಿ ಸಿನಿಮಾವೊಂದರಲ್ಲಿ ನಟಿಸಲು ಜಾನ್ವಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದ್ದು, ಜಾನ್ವಿ ಸಹಾ ಮಾದ್ಯಮಗಳ ಮುಂದೆ ನಟ ಎನ್ ಟಿ ಆರ್ ಕುರಿತಾಗಿ ಮೆಚ್ಚುಗೆಯ ಮಾತುಗಳನ್ನು ಆಡುವ ಮೂಲಕ ಗಮನ ಸೆಳೆದಿದ್ದು ಜಾನ್ವಿ ನೀಡಿದ ಹೇಳಿಕೆಗಳು ಸಹಾ ವೈರಲ್ ಆಗಿದೆ.
ಕಾಂತಾರ ನಮ್ಮ ಕನ್ನಡದ ಹೆಮ್ಮೆ: ತೆಲುಗಿಗೆ ಹೋದರೂ ಕನ್ನಡ ಪ್ರೇಮ ಬಿಟ್ಟುಕೊಡದ ಶ್ರೀಲೀಲಾ

ಹಿರಿಯ ನಟಿ ಶ್ರೀದೇವಿ, ನಿರ್ಮಾಪಕ ಬೋನಿ ಕಪೂರ್ ಮಗಳಾಗಿ ಸ್ಟಾರ್ ಕಿಡ್ ಆದ ಕಾರಣ ಬಹಳ ಸುಲಭವಾಗಿಯೇ ಜಾನ್ವಿಗೆ(Jhanvi Kapoor) ಬಾಲಿವುಡ್ ಗೆ ಎಂಟ್ರಿ ಸಿಕ್ಕಿತು. ಧಡಕ್ ಸಿನಿಮಾದ ಮೂಲಕ ಬಾಲಿವುಡ್ ಗೆ ಎಂಟ್ರಿ ನೀಡಿದ ಜಾನ್ವಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಯಾವುದೇ ಸಿನಿಮಾದಿಂದಲೂ ಜಾನ್ವಿಗೆ ಮಾತ್ರ ನಿರೀಕ್ಷಿತ ಮಟ್ಟದ ಯಶಸ್ಸು ದೊರೆತಿಲ್ಲ. ಇನ್ನು ಆಗಾಗ ಜಾನ್ವಿ ದಕ್ಷಿಣದಲ್ಲಿ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿಗಳು ಹರಿದಾಡಿದ್ದರೂ ಯಾವುದೂ ಅಧಿಕೃತ ಘೋಷಣೆ ಆಗಿರಲಿಲ್ಲ. ಆದರೆ ಈ ಬಾರಿ ಬಹುತೇಕ ಖಚಿತ ಎನ್ನಲಾಗಿದೆ.
ಸುಧಾಮೂರ್ತಿ- ನಾರಾಯಣ ಮೂರ್ತಿ ರೋಚಕ ಲವ್ ಸ್ಟೋರಿ , ಮದುವೆಗೆ ಒಪ್ಪಿರಲಿಲ್ಲ ತಂದೆ!
ಎನ್ ಟಿ ಆರ್(Jr. NTR) ಅವರ ಮುಂಬರುವ ಹೊಸ ಸಿನಿಮಾದಲ್ಲಿ ಜಾನ್ವಿ ನಾಯಕಿಯಾಗಲಿದ್ದಾರೆ ಎನ್ನಲಾಗಿದೆ. ಜಾನ್ವಿ ಸಹಾ ದಕ್ಷಿಣ ಸಿನಿಮಾ ರಂಗ ತನ್ನ ತಾಯಿಗೆ ಅಪಾರವಾದ ಪ್ರೀತಿ ನೀಡಿದೆ, ಜೂನಿಯರ್ ಎನ್ ಟಿ ಆರ್(Jr.NTR) ಅವರ ಜೊತೆಗೆ ನಟಿಸಲು ಯಾರು ತಾನೇ ಬಯಸುವುದಿಲ್ಲ. ನಾನು ಸಹಾ ಅವರೊಂದಿಗೆ ನಟಿಸಲು ಇಚ್ಚಿಸುತ್ತೇನೆ ಎನ್ನುವ ಮಾತನ್ನು ಹೇಳಿರುವುದು ಗಮನಾರ್ಹವಾಗಿದೆ. ಒಂದು ಕಡೆ ಜಾನ್ವಿ ದಕ್ಷಿಣದ ಸಿನಿಮಾಗಳ ಕಡೆ ಆಸಕ್ತಿ ತೋರಿಸುವಾಗಲೇ, ಮತ್ತೊಂದು ಕಡೆ ಬಾಲಿವುಡ್ ನಲ್ಲಿ ಯಶಸ್ಸು ಸಿಕ್ಕಿಲ್ಲ, ಅದಕ್ಕೆ ಈಗ ಅದೃಷ್ಟ ಪರೀಕ್ಷೆಗೆ ದಕ್ಷಿಣದ ಕಡೆಗೆ ಮುಖ ಮಾಡಿದ್ದಾರೆ ಜಾನ್ವಿ ಎಂದು ಟ್ರೋಲ್ ಮಾಡಿದ್ದಾರೆ.
ಟ್ರಾಫಿಕ್ ಮಧ್ಯೆ ಒಮ್ಮೆ ಗನ್ ತೆಗೆದಿದ್ದೆ: ವರ್ಷಗಳ ನಂತರ ಶಾಕಿಂಗ್ ವಿಚಾರ ತಿಳಿಸಿದ ನಟ ಯಶ್