Jyothi Rai: ತಮ್ಮ ನಿಜವಾದ ವಯಸ್ಸನ್ನು ಇನ್ಸ್ಟಾಗ್ರಾಮ್ ನಲ್ಲಿ ರಿವೀಲ್ ಮಾಡಿದ್ದಾರೆ ನಟಿ ಜ್ಯೋತಿ ರೈ! ಅಭಿಮಾನಿಗಳು ಫುಲ್ ಶಾಕ್!

0 28

Jyothi Rai: ಕನ್ನಡ ಕಿರುತೆರೆ ಲೋಕದಲ್ಲಿ ಹೆಸರು ಮಾಡಿರುವ ನಾಯಕಿಯರಲ್ಲಿ ಒಬ್ಬರು ಜ್ಯೋತಿ ರೈ. ಹಲವಾರು ಕನ್ನಡ ಸೀರಿಯಲ್ ಗಳಲ್ಲಿ ನಟಿಸಿರುವ ಜ್ಯೋತಿ ರೈ ಅವರು ಹೆಚ್ಚಾಗಿ ತಮ್ಮ ವಯಸ್ಸಿಗೆ ಮೀರಿದಂತಹ ಪಾತ್ರಗಳನ್ನೇ ಮಾಡಿದ್ದಾರೆ. ನಟಿ ಜ್ಯೋತಿ ರೈ ಅವರು ಹುಟ್ಟಿದ್ದು ಮಡಿಕೇರಿಯಲ್ಲಿ ಓದಿದ್ದು ಎಲ್ಲವೂ ಪುತ್ತೂರಿನಲ್ಲಿ. ಕಿರುತೆರೆ ಲೋಕದ ನಟಿಸುವ ಮೂಲಕ ಅಭಿನಯ ಶುರು ಮಾಡಿದ ಜ್ಯೋತಿ ಅವರು ಜನರ ಮನಮುಟ್ಟುವಂತಹ ಅನೇಕ ಪಾತ್ರಗಳಲ್ಲಿ ನಟಿಸಿದ್ದಾರೆ.

ಜೀಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೋಗುಳ ಧಾರವಾಹಿಯಲ್ಲಿ ಜ್ಯೋತಿ ಅವರ ಅಭಿನಯವನ್ನು ಇಂದಿಗೂ ಯಾರು ಮರೆಯಲು ಸಾಧ್ಯವಿಲ್ಲ. ಮಗುವಿನ ಮೇಲೆ ಹಂಬಲ ಇಟ್ಟುಕೊಳ್ಳುವ ತಾಯಿ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು ಜ್ಯೋತಿ ರೈ. ನಂತರದ ದಿನಗಳಲ್ಲಿ ಕಲರ್ಸ್ ಕನ್ನಡ, ಉದಯ ಟಿವಿ, ಕಸ್ತೂರಿ ಟಿವಿ ಹೀಗೆ ಎಲ್ಲಾ ಚಾನೆಲ್ ಗಳಲ್ಲೂ ಅನೇಕ ಧಾರವಾಹಿಗಳಲ್ಲಿ ನಟಿಸಿ ಕಿರುತೆರೆಯ ಬಹುಬೇಡಿಕೆಯ ನಟಿಯಾಗಿದ್ದಾರೆ.

ಇಂದಿಗೂ ಸಹ ಜ್ಯೋತಿ ಅವರು ಕಿರುತೆರೆ ಲೋಕದಲ್ಲಿ ಬಹಳ ಬೇಡಿಕೆ ಇದೆ, ಪ್ರಸ್ತುತ ಇವರು ತೆಲುಗಿನ ಗುಪ್ಪೆಡಂಥ ಮನಸ್ಸು ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ, ಹಾಗೆಯೇ ಕೆಲವು ತೆಲುಗು ವೆಬ್ ಸೀರೀಸ್ ಗಳಲ್ಲಿ ಬ್ಯುಸಿ ಆಗಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಫೋಟೋಶೂಟ್ ಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈ ನಡುವೆ ಇವರು ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಇನ್ಸ್ಟಾಗ್ರಾಮ್ ನಲ್ಲಿ ಉತ್ತರಿಸಿದ್ದಾರೆ.

ಒಬ್ಬ ಅಭಿಮಾನಿ ನಿಮ್ಮ ವಯಸ್ಸು ಎಷ್ಟು ಎಂದು ಕೇಳಿದ್ದು, ಬೇರೆ ನಟಿಯರು ಈ ಪ್ರಶ್ನೆಗೆ ಉತ್ತರಿಸುವುದೇ ಕಷ್ಟ, ಆದರೆ ಜ್ಯೋತಿ ಅವರು ತಮ್ಮ ಪ್ಯಾನ್ ಕಾರ್ಡ್ ಫೋಟೋವನ್ನೇ ಶೇರ್ ಮಾಡಿ, ವಯಸ್ಸು ಎಷ್ಟು ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ಜ್ಯೋತಿ ರೈ ಅವರ ಪ್ಯಾನ್ ಕಾರ್ಡ್ ನಲ್ಲಿ ಇರುವ ಮಾಹಿತಿ ಪ್ರಕಾರ ಅವರು ಹುಟ್ಟಿದ ದಿನಾಂಕ 4/7/1994. ಅಂದರೆ ಇವರಿಗೆ ಈಗ ಕೇವಲ 30 ವರ್ಷ ವಯಸ್ಸು..

ಈ ಪ್ಯಾನ್ ಕಾರ್ಡ್ ಫೋಟೋ ನೋಡಿ ನೆಟ್ಟಿಗರೇ ತಲೆ ಕೆಡಿಸಿಕೊಂಡಿದ್ದಾರೆ. ಇಷ್ಟು ಚಿಕ್ಕ ವಯಸ್ಸಾ ಇವರಿಗೆ ಎನ್ನುತ್ತಿದ್ದಾರೆ. ಇನ್ನು ಜ್ಯೋತಿ ರೈ ಅವರು ಬಹಳ ಚಿಕ್ಕ ವಯಸ್ಸಿಗೆ ಮದುವೆಯಾಗಿ, ಒಬ್ಬ ಮಗ ಇದ್ದಾನೆ. ಪ್ರಸ್ತುತ ಗಂಡನಿಂದ ವಿಚ್ಛೇದನ ಪಡೆದಿರುವ ಜ್ಯೋತಿ ರೈ ಅವರು, ತೆಲುಗು ನಿರ್ದೇಶಕರೊಬ್ಬರ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ.

Leave A Reply

Your email address will not be published.