Jyothi Rai: ಲಿಪ್ ಲಾಕ್ ಮಾಡಿದ ನಟಿ ಜ್ಯೋತಿ ರೈ! ಫೋಟೋ ವೈರಲ್!

Written by Pooja Siddaraj

Published on:

Jyothi Rai: ಕನ್ನಡ ಕಿರುತೆರೆ ಲೋಕ ಇಲ್ಲೆಯವರೆಗೂ ಹಲವಾರು ನಟಿಯರನ್ನು ಕಂಡಿದೆ. ಅವರಲ್ಲಿ ಎಲ್ಲರೂ ವೀಕ್ಷಕರ ಮನಸ್ಸಿಗೆ ಹತ್ತಿರ ಆಗುವುದಿಲ್ಲ. ಕೆಲವರು ಮಾತ್ರ ವೀಕ್ಷಕರ ಮನಸ್ಸಿಗೆ ಹತ್ತಿರವಾಗಿ ಈಕೆ ನಮ್ಮ ಮನೆಯ ಹುಡುಗಿಯೇ ಏನೋ ಎಂದು ಅನ್ನಿಸುವ ಹಾಗೆ ಮಾಡಿಬಿಡುತ್ತಾರೆ. ಅಂತಹ ಕಲಾವಿದೆಯರಲ್ಲಿ ಒಬ್ಬರು ಜ್ಯೋತಿ ರೈ. ಹಲವಾರು ಕನ್ನಡ ಸೀರಿಯಲ್ ಗಳಲ್ಲಿ ನಟಿಸಿರುವ ಜ್ಯೋತಿ ರೈ ಅವರು ಹೆಚ್ಚಾಗಿ ತಮ್ಮ ವಯಸ್ಸಿಗೆ ಮೀರಿದಂತಹ ಪಾತ್ರಗಳನ್ನೇ ಮಾಡುತ್ತಾರೆ.

ನಟಿ ಜ್ಯೋತಿ ರೈ ಅವರು ಹುಟ್ಟಿದ್ದು ಮಡಿಕೇರಿಯಲ್ಲಿ ಓದಿದ್ದು ಎಲ್ಲವೂ ಪುತ್ತೂರಿನಲ್ಲಿ. ಕಿರುತೆರೆ ಲೋಕದ ನಟಿಸುವ ಮೂಲಕ ಅಭಿನಯ ಶುರು ಮಾಡಿದ ಜ್ಯೋತಿ ಅವರು ಜನರ ಮನಮುಟ್ಟುವಂತಹ ಅನೇಕ ಪಾತ್ರಗಳಲ್ಲಿ ನಟಿಸಿದ್ದಾರೆ. ಜೀಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೋಗುಳ ಧಾರವಾಹಿಯಲ್ಲಿ ಜ್ಯೋತಿ ಅವರ ಅಭಿನಯವನ್ನು ಇಂದಿಗೂ ಯಾರು ಮರೆಯಲು ಸಾಧ್ಯವಿಲ್ಲ. ಮಗುವಿನ ಮೇಲೆ ಹಂಬಲ ಇಟ್ಟುಕೊಳ್ಳುವ ತಾಯಿ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು ಜ್ಯೋತಿ ರೈ.

ನಂತರದ ದಿನಗಳಲ್ಲಿ ಕಲರ್ಸ್ ಕನ್ನಡ, ಉದಯ ಟಿವಿ, ಕಸ್ತೂರಿ ಟಿವಿ ಹೀಗೆ ಎಲ್ಲಾ ಚಾನೆಲ್ ಗಳಲ್ಲೂ ಅನೇಕ ಧಾರವಾಹಿಗಳಲ್ಲಿ ನಟಿಸಿ ಕಿರುತೆರೆಯ ಬಹುಬೇಡಿಕೆಯ ನಟಿಯಾಗಿದ್ದಾರೆ. ಇಂದಿಗೂ ಸಹ ಜ್ಯೋತಿ ಅವರು ಕಿರುತೆರೆ ಲೋಕದಲ್ಲಿ ಬಹಳ ಬೇಡಿಕೆ ಇದೆ. ಪ್ರಸ್ತುತ ಜ್ಯೋತಿ ಅವರು 9ಕನ್ನಡದಲ್ಲಿ ಕಸ್ತೂರಿ ನಿವಾಸ ಧಾರವಾಹಿಯಲ್ಲಿ ಹಾಗೂ ತೆಲುಗು ಭಾಷೆಯಲ್ಲಿ ಗುಪ್ಪೆದಂತ ಮನಸು ಧಾರವಾಹಿಯಲ್ಲಿ ನಟಿಸಿ ತೆಲುಗು ಕಿರುತೆರೆ ವೀಕ್ಷಕರ ಫೇವರೆಟ್ ನಟಿ ಸಹ ಆಗಿದ್ದಾರೆ.

ಜ್ಯೋತಿ ಅವರು ಕಿರುತೆರೆ ಮಾತ್ರವಲ್ಲದೆ ಬೆಳ್ಳಿತೆರೆಗೆ ಕೂಡ ಪಾದಾರ್ಪಣೆ ಮಾಡಿದ್ದಾರೆ. 99, ದಿಯಾ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಇವರು ಸೋಷಿಯಲ್ ಮೀಡಿಯಾ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇವರ ಹಾಟ್ ಫೋಟೋಶೂಟ್ ಗಳನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ ಎಂದರೆ ತಪ್ಪಲ್ಲ.

ಇದೀಗ ಇವರು ಶೇರ್ ಮಾಡಿರುವ ಒಂದು ಫೋಟೋದಲ್ಲಿ ಲಿಪ್ ಲಾಕ್ ಮಾಡುತ್ತಿದ್ದು, ಈ ಫೋಟೋ ವೈರಲ್ ಆಗಿದೆ. ಇದು ಜ್ಯೋತಿ ರೈ ಅವರು ನಟಿಸುತ್ತಿರುವ ನೋ ಮೋರ್ ಸೀಕ್ರೆಟ್ಸ್ ಎನ್ನುವ ವೆಬ್ ಸೀರೀಸ್ ಫೋಟೋ ಆಗಿದ್ದು, ಇದರಲ್ಲಿ ಕೃನಾಲ್ ಕಪೂರ್ ಅವರೊಡನೆ ನಟಿಸುತ್ತಿದ್ದಾರೆ. ವೆಬ್ ಸೀರೀಸ್ ನ ಪೋಸ್ಟರ್ ಒಂದರಲ್ಲಿ ಲಿಪ್ ಲಾಕ್ ಮಾಡಿದ್ದು, ನೆಟ್ಟಿಗರು ಈ ಫೋಟೋ ನೋಡಿ ಶಾಕ್ ಆಗಿದ್ದಾರೆ.

Leave a Comment