Jyothika: 2 ದಶಕಗಳ ಹಿಂದೆ ದಕ್ಷಿಣ ಭಾರತ ಚಿತ್ರರಂಗದ ಟಾಪ್ ಹೀರೋಯಿನ್ ಆಗಿ ಗುರುತಿಸಿಕೊಂಡವರು ನಟಿ ಜ್ಯೋತಿಕಾ. ಮೂಲತಃ ಮುಂಬೈನವರಾದ ನಟಿ ಜ್ಯೋತಿಕಾ ಅವರು, ಹಿಂದಿಯ ಸಿನಿಮಾ ಮೂಲಕವೇ ನಟನೆ ಶುರು ಮಾಡಿದರು. ಆದರೆ ಜ್ಯೋತಿಕಾ ಅವರಿಗೆ ಹೆಸರು ತಂದುಕೊಟ್ಟಿದ್ದು, ತಮಿಳು ಸಿನಿಮಾಗಳು ಎಂದು ಹೇಳಿದರೆ ತಪ್ಪಲ್ಲ. ಇಂದಿಗೂ ಅದೇ ಚಾರ್ಮ್ ಉಳಿಸಿಕೊಂಡಿರುವ ಜ್ಯೋತಿಕಾ ಅವರ ಒಟ್ಟು ಆಸ್ತಿ ಎಷ್ಟು ಗೊತ್ತಾ?
ನಟಿ ಜ್ಯೋತಿಕಾ ಅವರು ತಮಿಳಿನ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ನಟನೆ ಮಾಡಿದ್ದಾರೆ. ವಿಜಯ್, ಸೂರ್ಯ, ಅಜಿತ್, ಶ್ಯಾಮ್, ಕಮಲ್ ಹಾಸನ್, ರಜನಿಕಾಂತ್ ಹೀಗೆ ಹಿರಿಯ ಕಲಾವಿದರು ಕಿರಿಯ ಕಲಾವಿದರು ಎಲ್ಲರೊಡನೆ ನಟಿಸಿ, ಸ್ಟಾರ್ ಹೀರೋಯಿನ್ ಆಗಿದ್ದರು. ಆಗಿನ ಕಾಲದಲ್ಲಿ ಜ್ಯೋತಿಕಾ ಅವರನ್ನು ನೋಡುವ ಸಲುವಾಗಿಯೇ ಅಭಿಮಾನಿಗಳು ಥಿಯೇಟರ್ ಗೆ ಬರುತ್ತಿದ್ದರು.
ಒಂದು ಥರದ ಪಾತ್ರಕ್ಕೆ ಮಾತ್ರವಲ್ಲದೆ ಎಲ್ಲಾ ಥರದ ಪಾತ್ರಗಳಲ್ಲೂ ನಟಿಸುತ್ತಿದ್ದರು ಜ್ಯೋತಿಕಾ, ಹಳ್ಳಿ ಹುಡುಗಿ ಪಾತ್ರದಿಂದ ಹುಡುಗಿ ಫುಲ್ ಮಾಡರ್ನ್ ಹುಡುಗಿ, ರಫ್ ಅಂಡ್ ಟಫ್ ಹೀಗೆ ಎಲ್ಲಾ ರೀತಿಯ ಪಾತ್ರಗಳಲ್ಲಿ ನಟಿಸುತ್ತಿದ್ದರು. ಚಿತ್ರರಂಗದಲ್ಲಿ ಪೀಕ್ ನಲ್ಲಿ ಇದ್ದಾಗಲೇ ಜ್ಯೋತಿಕಾ ಅವರ ಮದುವೆ ನಡೆಯಿತು. ನಟ ಸೂರ್ಯ ಅವರನ್ನು ಪ್ರೀತಿಸಿ ಮದುವೆಯಾದರು ಜ್ಯೋತಿಕಾ. ಮದುವೆ ಬಳಿಕ ನಟನೆ ಇಂದ ದೂರ ಉಳಿದಿದ್ದರು.
ಮಕ್ಕಳು ಸ್ವಲ್ಪ ದೊಡ್ಡವರಾದ ಬಳಿಕ 36ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿ, ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಕೂಡ ಒಳ್ಳೆಯ ಹೆಸರು ಮಾಡಿದರು. ಸೆಕೆಂಡ್ ಇನ್ನಿಂಗ್ಸ್ ಇಂದ ಜ್ಯೋತಿಕಾ ಅವರು ಒಂದು ಸಿನಿಮಾಗೆ 5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಜ್ಯೋತಿಕಾ ಅವರ ಹೆಸರಿನಲ್ಲಿ ಒಂದು ಐಷಾರಾಮಿ ಮನೆ ಇದ್ದು, BMW ಸೇರಿದಂತೆ ಐಷಾರಾಮಿ ಕಾರ್ ಗಳಿವೆ.
ಇವರ ಒಟ್ಟು ಆಸ್ತಿ ಎಷ್ಟು ಎಂದು ನೋಡುವುದಾದರೆ, ಜ್ಯೋತಿಕಾ ಅವರು ಸುಮಾರು 500ಕೋಟಿ ರೂಪಾಯಿ ಆಸ್ತಿ ಒಡತಿ ಎಂದು ಹೇಳಲಾಗುತ್ತಿದೆ. ಇವರು ಕನ್ನಡದಲ್ಲಿ ಕೂಡ ನಟಿಸಿದ್ದರು, ರಿಯಲ್ ಸ್ಟಾರ್ ಉಪೇಂದ್ರ ಅವರೊಡನೆ ನಾಗರಹಾವು ಸಿನಿಮಾದಲ್ಲಿ ಡ್ಯುಯೆಲ್ ರೋಲ್ ನಲ್ಲಿ ನಟಿಸಿದ್ದರು. ಪ್ರಭುದೇವ ಅವರು ನಟಿಸಿದ್ದ 123 ಸಿನಿಮಾದಲ್ಲಿ ಕೂಡ ನಟಿಸಿದ್ದರು.