Kabza Movie News :ದೇಶದಾದ್ಯಂತ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ(Kabza) ಬಿಡುಗಡೆಯ ಹವಾ ಜೋರಾಗಿ ಕಂಡಿದೆ. ಕರ್ನಾಟಕ ಮಾತ್ರವಲ್ಲದೇ ಸಿನಿಮಾ ಬಿಡುಗಡೆ ಆಗಲಿರುವ ಎಲ್ಲಾ ಭಾಷೆಗಳಲ್ಲೂ ಸಹಾ ಪ್ರೇಕ್ಷಕರು ತೀವ್ರವಾದ ಕುತೂಹಲದಿಂದ ಈ ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿ ಇದ್ದಾರೆ. ಮಾರ್ಚ್ 17 ರಂದು ಸಿನಿಮಾ ಬೆಳ್ಳಿ ತೆರೆಯ ಮೇಲೆ ಅಬ್ಬರಿಸಲು ಸಜ್ಜಾಗಿದ್ದು, ಪ್ಯಾನ್ ಇಂಡಿಯಾ ಸಿನಿಮಾ ಕಬ್ಜಾ ವಿಶ್ವದಾದ್ಯಂತ ರಿಲೀಸ್ ಆಗುತ್ತಿದ್ದು, ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಚಿತ್ರತಂಡ ಸಿನಿಮಾ ಬಿಡುಗಡೆಗೆ ಮೊದಲು ತಿರುಪತಿ(Tirupati) ತಿಮ್ಮಪ್ಪನ ಆಶೀರ್ವಾದ ಪಡೆಯಲು ತೆರಳಿದೆ.

ಕಬ್ಜಾ ಹೀರೋ ರಿಯಲ್ ಸ್ಟಾರ್ ಉಪೇಂದ್ರ(Upendra) ಟ್ವೀಟ್ ಒಂದನ್ನು ಮಾಡುವ ಮೂಲಕ, ತಾವು ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ತೆರಳುತ್ತಿರುವುದಾಗಿ ಹೇಳಿದ್ದಾರೆ. ಖಾಸಗಿ ವಿಮಾನದಲ್ಲಿ ಉಪೇಂದ್ರ ಮತ್ತು ನಿರ್ದೇಶಕ ಆರ್ ಚಂದ್ರು(R Chandru) ಸೇರಿದಂತೆ ಚಿತ್ರತಂಡ ತಿರುಪತಿಗೆ ತೆರಳಿದೆ. ಇದನ್ನು ನೋಡಿದ ಕಬ್ಜಾ ಸಿನಿಮಾ ಅಭಿಮಾನಿಗಳು ಉಪ್ಪಿ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ್ದಾರೆ ಅಭಿಮಾನಿಗಳು ಮತ್ತು ಸಿನಿ ಪ್ರೇಮಿಗಳು ಕಬ್ಜಾ ಸಿನಿಮಾಗೆ ಶುಭಾಶಯ ತಿಳಿಸಿದ್ದಾರೆ.
ಇತ್ತೀಚೆಗೆ ಕಬ್ಜಾ ಸಿನಿಮಾ ತಂಡವು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ನಟ ಉಪೇಂದ್ರ ಅವರ ಜೊತೆಗೆ ಕಿಚ್ಚ ಸುದೀಪ್(Sudeep), ನಟಿ ತಾನ್ಯಾ ಹೋಪ್, ನಿರ್ದೇಶಕ ಆರ್.ಚಂದ್ರು, ನಟಿ ಶ್ರಿಯಾ ಶರಣ್ (Shriya Saran) ಮತ್ತು ಕನ್ನಡದ ನಟ ನೆನಪಿರಲಿ ಖ್ಯಾತಿಯ ಪ್ರೇಮ್(Prem) ಮತ್ತು ಕನ್ನಡದ ಮತ್ತೊಬ್ಬ ಸ್ಟಾರ್ ನಟ ಡಾಲಿ ಧನಂಜಯ್ ಸೇರಿದಂತೆ ಇನ್ನೂ ಅನೇಕರು ಭಾಗಿಯಾಗಿದ್ದರು. ಮಾರ್ಚ್ 17 ರಂದು ಏಳು ಭಾಷೆಯಲ್ಲಿ ನಾಲ್ಕು ಸಾವಿರ ಥೀಯೇಟರ್‌ನಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ.Kabza Movie News