ಕಡಿಮೆ ಮಾತನಾಡುವವರು ಈ ಲೇಖನ ತಪ್ಪದೇ ಓದಿ!

Featured-Article

ಎಲ್ಲರಿಗಿಂತ ಕಡಿಮೆ ಮಾತನಾಡುವುದು ತುಂಬಾ ಒಳ್ಳೆಯ ವಿಷಯವಾಗಿದೆ ಹಾಗೂ ಇದು ಒಳ್ಳೆಯ ಸಭ್ಯಸ್ಥ ವ್ಯಕ್ತಿಯ ಗುಣವಾಗಿದೆ.ಜಗತ್ತಿನಲ್ಲಿ ಹಲವಾರು ರೀತಿಯ ಜನ ಗಳಿರುತ್ತಾರೆಒಬ್ಬೊಬ್ಬರ ಆಲೋಚನೆ ಒಂದೊಂದು ರೀತಿ ವಿಭಿನ್ನವಾಗಿರುತ್ತದೆ.

ಕೆಲವರು ಕಡಿಮೆ ಮಾತನಾಡುವವರನ್ನು ಇಷ್ಟಪಡುತ್ತಾರೆ ಹಾಗೂ ಇನ್ನೂ ಕೆಲವರು ಹೆಚ್ಚು ಮಾತನಾಡುವವರನ್ನೂ ಹೆಚ್ಚು ಇಷ್ಟಪಡುತ್ತಾರೆ.

ಹೆಚ್ಚು ಮಾತನಾಡುವವರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಆದರೆ ಕಡಿಮೆ ಮಾತನಾಡುವವರಿಗೆ ಒಮ್ಮೊಮ್ಮೆ ತೊಂದರೆ ಉಂಟಾಗುತ್ತದೆ.ಹಾಗಾಗಿ ಆಚಾರ್ಯ ಚಾಣಕ್ಯರೂ ಕಡಿಮೆ ಮಾತನಾಡುವವರಿಗೋಸ್ಕರ ಕೆಲವು ಸಲಹೆಗಳನ್ನು ನೀಡಿದ್ದಾರೆ

ಅವು ಯಾವುವು ಎಂದು ತಿಳಿಯೋಣ ಬನ್ನಿ.

ಕೋಗಿಲೆಯು ತನ್ನ ಸಮಯ ಬಂದಾಗಷ್ಟೇ ತನ್ನ ಇಂಪಾದ ಧ್ವನಿಯಿಂದ ಹಾಡುತ್ತದೆ
ಹಾಗಾಗಿ ನಮ್ಮ ಮಾತಿಗೆ ಬೆಲೆ ಸಿಗುವುದಾದರೇ ಮತ್ತು ಕೆಲವು ಸಂದರ್ಭಗಳಲ್ಲಿ ನಮ್ಮ ಮಾತು ಮುಖ್ಯವೆನ್ನಿಸುವುದಾದರೆ ಮಾತ್ರ ಮಾತನಾಡಬೇಕು.

ಇನ್ನು ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಸೂಕ್ಷ್ಮವಾಗಿ ಮಾತನಾಡುವುದು ಒಳ್ಳೆಯದು.

ಇನ್ನೂ ಕಾಗೆಯೂ ಕೋಗಿಲೆಯ ಗಿಂತ ಹೆಚ್ಚು ಸದ್ದು ಮಾಡಿದರೂ ಸಹ ಕಾಗೆಯ ಧ್ವನಿ ಎಲ್ಲರಿಗೂ ಕಿರಿಕಿರಿಯನ್ನುಂಟು ಮಾಡುತ್ತದೆ ಆದರೆ ಕೋಗಿಲೆಯ ಧ್ವನಿ ಇಂಪಾಗಿರುತ್ತದೆ ಹಾಗಾಗಿಕೋಗಿಲೆಯಂತೆ ಇಂಪಾಗಿ ಮಧುರವಾಗಿ ಮಾತನಾಡು ವುದು ಒಳ್ಳೆಯದು ಹಾಗೂ ಇಂಥವರನ್ನು ಜನರು ಹೆಚ್ಚು ಇಷ್ಟಪಡುತ್ತಾರೆ.

ಇನ್ನೂ ಆಚಾರ್ಯ ಚಾಣಕ್ಯರು ಹೇಳುವ ಪ್ರಕಾರ ನೇರವಾಗಿ ಮಾತನಾಡುವವರನ್ನು ಜನ ಹೆಚ್ಚು ದ್ವೇಷಿಸುತ್ತಾರೆ ಯಾಕೆಂದರೆ ಕಾಡಿನಲ್ಲಿ ನೇರವಾಗಿ ಇರುವ ಮರವನ್ನು ಮೊದಲು ಕಡಿಯುತ್ತಾರೆ ನಂತರ ಉಳಿದವನ್ನು ಬಿಟ್ಟುಬಿಡುತ್ತಾರೆ.

ಕಡಿಮೆ ಮಾತನಾಡುವವರನ್ನು ಕಂಡು ಬೇರೆಯವರು ಅಪಹಾಸ್ಯ ಮಾಡುತ್ತಾರೆ ,ಅಂತಹ ವ್ಯಕ್ತಿಗಳು ಯಾವುದೇ ಕೆಲಸಕ್ಕೂ ಬಾರದ ವ್ಯಕ್ತಿಗಳಾಗಿರುತ್ತಾರೆ.

ಅಂಥವರನ್ನು ನೀವು ನಿರ್ಲಕ್ಷಿಸುವುದು ಒಳಿತುಹಾಗೂ ಅಂತಹ ವ್ಯಕ್ತಿಗಳೊಡನೆ ಕಹಿಯಾದ ಮಾತನಾಡುವುದು ಒಳ್ಳೆಯದಲ್ಲ.

ಕಡಿಮೆ ಮಾತನಾಡುವ ವ್ಯಕ್ತಿ ಯಾವುದೇ ಕಾರಣಕ್ಕೂ ಯಾರ ತಂಟೆಗೂ ಹೋಗುವುದಿಲ್ಲ ಈ ಕಾರಣದಿಂದ ಅವರು ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತಾರೆ.

ಹಾಗಾಗಿ ಕಡಿಮೆ ಮಾತನಾಡುವುದು ಒಳ್ಳೆಯದು ಆದರೆ ಆ ಸಮಯಕ್ಕೆ ಸಂದರ್ಭಕ್ಕೆ ತಕ್ಕಂತೆ ಮಾತನಾಡಬೇಕೊ ಬೇಡವೋ ಎಂಬುದನ್ನು ಅರಿತು ಮಾತನಾಡುವುದು ಒಳ್ಳೆಯದು.

ಧನ್ಯವಾದಗಳು.

Leave a Reply

Your email address will not be published.