Kamal Hasan: ತಮಗೆ ತಾಯಿಯಾಗಿ ನಟಿಸಿದ್ದ ಹೀರೋಯಿನ್ ಜೊತೆಗೆ ಲವ್ ನಲ್ಲಿ ಬಿದ್ದಿದ್ರು ನಟ ಕಮಲ್ ಹಾಸನ್! ಯಾರು ಗೊತ್ತಾ ಆಕೆ?

Written by Pooja Siddaraj

Published on:

Kamal Hasan: ನಟ ಕಮಲ್ ಹಾಸನ್ ಅವರ ಬಗ್ಗೆ ಹೊಸದಾಗಿ ಹೇಳುವ ಅವಶ್ಯಕತೆ ಇಲ್ಲ, ಅವರನ್ನು ಉಲಗ ನಾಯಗನ್ ಎಂದೇ ಕರೆಯುತ್ತಾರೆ. ಕಮಲ್ ಹಾಸನ್ ಅವರು ನಟನೆ ಶುರು ಮಾಡಿದ್ದು, ತಮಿಳು ಚಿತ್ರರಂಗದ ಮೂಲಕವೇ ಆದರೂ, ಕನ್ನಡ, ತೆಲುಗು, ಮಲಯಾಳಂ ಹೀಗೆ ಎಲ್ಲಾ ಭಾಷೆಯ ಸಿನಿಮಾಗಳಲ್ಲಿ ನಟಿಸಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿ, ಎಲ್ಲಾ ಭಾಷೆಗಳಲ್ಲಿ ಅಭಿಮಾನಿ ಬಳಗ ಗಳಿಸಿಕೊಂಡವರು ಕಮಲ್.

ಕಮಲ್ ಹಾಸನ್ ಅವರು ಚಿಕ್ಕ ವಯಸ್ಸಿಗೆ ನಟನೆ ಶುರು ಮಾಡಿ, ಎಲ್ಲಾ ಭಾಷೆಗಳನ್ನು, ಕಲಿತು, ನಟಿಸಿ, ಅಪಾರವಾದ ಅನುಭವ ಹೊಂದಿದವರು. ಆರಂಭದಲ್ಲಿ ಇವರು ನಟಿಸಿದ ಅಪೂರ್ವ ರಾಗಂಗಳ್ ಸಿನಿಮಾದಲ್ಲಿ ಇವರಿಗೆ ಜೋಡಿಯಾಗಿ ನಟಿಸಿದ್ದ ಶ್ರೀವಿದ್ಯಾ ಅವರೊಡನೆ ಪ್ರೀತಿ ಶುರುವಾಗಿತ್ತು. ಶ್ರೀವಿದ್ಯಾ ಅವರದ್ದು ಕೂಡ ಕಲಾಕುಟುಂಬ. ಇವರ ತಂದೆ ಖ್ಯಾತ ಹಾಸ್ಯ ಕಲಾವಿದರಾಗಿದ್ದರು, ತಾಯಿ ಸಂಗೀತಗಾರ್ತಿ ಆಗಿದ್ದರು.

ಆಗ ಶ್ರೀವಿದ್ಯಾ ಅವರು ಕೂಡ ಚಿತ್ರರಂಗದಲ್ಲಿ ಬೆಳೆಯುತ್ತಿದ್ದ ಕಲಾವಿದೆ. ಇವರಿಬ್ಬರು ಪ್ರೀತಿಸಿದರು ಕೂಡ ಕಾರಣಾಂತರಗಳಿಂದ ಮದುವೆಯಾಗಲು ಸಾಧ್ಯ ಆಗಲಿಲ್ಲ. ಬಳಿಕ ಕಮಲ್ ಹಾಸನ್ ಅವರು 1978ರಲ್ಲಿ ನಟಿ ವಾಣಿ ಗಣಪತಿ ಅವರೊಡನೆ ಮದುವೆಯಾದರು. ಕೆಲ ವರ್ಷಗಳ ನಂತರ ಅವರಿಗೆ ವಿಚ್ಛೇದನ ಕೊಟ್ಟು ನಟಿ ಸಾರಿಕಾ ಅವರೊಡನೆ ಮದುವೆಯಾದರು. ನಂತರ ನಟಿ ಗೌತಮಿ ಅವರೊಡನೆ ಮದುವೆಯಾದರು.

ಈಗ ಸಿಂಗಲ್ ಆಗಿದ್ದಾರೆ. ಇತ್ತ ನಟಿ ಶ್ರೀವಿದ್ಯಾ ಅವರು ಸಹಾಯಯ ನಿರ್ದೇಶಕ ಆಗಿದ್ದ ಜಾರ್ಜ್ ಥಾಮಸ್ ಎನ್ನುವವರನ್ನು ಮದುವೆಯಾದರು. ಗಂಡನೇ ಸರ್ವಸ್ವ ಎಂದುಕೊಂಡು ಗಂಡನಿಗಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧವಾಗಿದ್ದರು ನಟಿ ಶ್ರೀವಿದ್ಯಾ, ಆದರೆ ಆತನಿಂದ ಹಿಂಸೆ ಅನುಭವಿಸಿ, ಕೊನೆಗೆ ಆಸ್ತಿಯನ್ನು ಕಳೆದುಕೊಂಡ ಬಳಿಕ ವಿಚ್ಛೇದನ ನೀಡಿದರು. ನಂತರದ ದಿನಗಳಲ್ಲಿ ಕಮಲ್ ಹಾಸನ್ ಅವರ ಅಪೂರ್ವ ಸಹೋದರ್ಗಳ್ ಸಿನಿಮಾದಲ್ಲಿ ಅವರಿಗೆ ತಾಯಿಯಾಗಿ ನಟಿಸಿದ್ದರು. ಈಕೆ 2006ರಲ್ಲಿ ಕ್ಯಾನ್ಸರ್ ಇಂದ ವಿಧಿವಶರಾದರು.

Leave a Comment