Kanaka: ವೈರಲ್ ಆಗಿರೋ ಓ ನಲ್ಲ, ನೀ ನಲ್ಲ ಹಾಡಿನ ಕ್ರಿಯೇಟರ್ ಗೆ ಸಿಕ್ಕಿರೋ ಹಣ ಎಷ್ಟು ಗೊತ್ತಾ?

0 14

Kanaka: ಕಳೆದ ಕೆಲವು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿರೋದು, ಈ ಒಂದು ರೀಲ್ಸ್.. “ಕೊನೆಗೆ ಏನ್ ಹೇಳಿ ಹೋದ್ಲು ಗೊತ್ತಾ.. ಓ ನಲ್ಲ, ನೀ ನಲ್ಲ, ಕರಿಮಣಿ ಮಾಲೀವ್ ನೀ ನಲ್ಲ..”.. ಈ ರೀಲ್ಸ್ ಈಗ ಸಿಕ್ಕಾಪಟ್ಟೆ ವೈರಲ್ ಆಗಿ, ರಿಮಿಕ್ಸ್ ಕೂಡ ಆಗಿದೆ. ಆದರೆ ಇದರ ಒರಿಜಿನಲ್ ಕ್ರಿಯೇಟರ್ ಯಾರು? ಅವರಿಗೆ ಇದರಿಂದ ಹಣ ಸಿಕ್ಕಿದ್ಯ?

ವೈರಲ್ ಆಗಿರೋ ಓ ನಲ್ಲ ನೀ ನಲ್ಲ ಹಾಡಿನ ಆ ಒರಿಜಿನಲ್ ಕ್ರಿಯೇಟರ್ ಹೆಸರು ಕನಕ, ಇವರೇ ಮೊದಲಿಗೆ ವಿಡಿಯೋ ಅಪ್ಲೋಡ್ ಮಾಡಿದ್ದು, ಆದರೆ ವೈರಲ್ ಆಗ್ತಿದ್ದ ಹಾಗೆ ಎಲ್ಲರೂ ಕೂಡ ಈ ಹಾಡಿನ ರೀಲ್ಸ್ ಅಪ್ಲೋಡ್ ಮಾಡೋಕೆ ಶುರುವಾಗಿ, ಒರಿಜಿನಲ್ ಆಗಿ ಮಾಡಿದವರನ್ನೇ ಜನ ಮರೆತು ಹೋಗಿದ್ದಾರೆ. ಎಲ್ಲಾ ರೀಲ್ಸ್ ಗಳು ಕೂಡ ಮಿಲಿಯನ್ ಗಟ್ಟಲೇ ವೀಕ್ಷಣೆ ಪಡೆಯುತ್ತಿದೆ. ಆದರೆ ಒರಿಜಿನಲ್ ಮಾಡಿದ ಕನಕ ಅವರನ್ನೇ ಜನರು ಮರೆತಿದ್ದಾರೆ.

ಮೊದಲಿಗೆ ಒರಿಜಿನಲ್ ಆಗಿ ಈ ವಿಡಿಯೋ ಮಾಡಿದ ಕನಕ ಅವರಿಗೆ ಇದರಿಂದ ಏನಾದರು ಹಣ ಬಂತ ಎನ್ನುವ ಪ್ರಶ್ನೆ ಬರೋದಂತೂ ನಿಜ. ಇದಕ್ಕೆ ಖುದ್ದು ಕನಕ ಅವರೇ ಉತ್ತರ ಕೊಟ್ಟಿದ್ದು, ವಿಡಿಯೋ ವೈರಲ್ ಆದ ಬಳಿಕ ಅವರಿಗೆ ಯಾವುದೇ ಹಣ ಸಿಕ್ಕಿಲ್ಲ. ಪ್ರೊಮೋಷನ್ ಗಾಗಿ ಬರುವ ರಿಕ್ವೆಸ್ಟ್ ಗಳು ಕೂಡ ಬಹುತೇಕ ಫೇಕ್ ಇರುತ್ತದೆ ಎಂದು ಬೇಸರದಿಂದ ಹೇಳಿದ್ದಾರೆ..

ಒಟ್ಟಿನಲ್ಲಿ ಒಂದು ರೀಲ್ ವೈರಲ್ ಆದಾಗ ಒರಿಜಿನಲ್ ಆಗಿ ಕಂಟೆಂಟ್ ಕೊಟ್ಟವರಿಗಿಂತ ಬೇರೆಯವರಿಗೆ ಅದರ ಉಪಯೋಗ ಆಗಿರುವುದು ನಿಜಕ್ಕೂ ಬೇಸರದ ವಿಚಾರವೇ.

Leave A Reply

Your email address will not be published.