Kannada Actress: ಈ ನಟಿ ಕಿರುತೆರೆಗೆ ಯಾವಾಗ ಬರ್ತಾರೆ ಅಂತಕಾಯ್ತಿದ್ದಾರೆ ಅಭಿಮಾನಿಗಳು, ಯಾರು ಗೊತ್ತಾ ಈ ಸುಂದರಿ?

0 14

Kannada Actress: ಕನ್ನಡ ಕಿರುತೆರೆಗೆ ಸಾಕಷ್ಟು ಕಲಾವಿದೆಯರು ಎಂಟ್ರಿ ಕೊಟ್ಟಿದ್ದಾರೆ. ಬಹಳ ವರ್ಷಗಳ ಹಿಂದೆ ನಟಿಸಿದ್ದ ಕಲಾವಿದರನ್ನು ಕೂಡ ಇನ್ನು ಅಭಿಮಾನಿಗಳು ನೆನೆದು ಅವರು ಮತ್ತೆ ನಟಿಸಲಿ ಎಂದು ಬಯಸುತ್ತಾರೆ. ಆದರೆ ದಿನದಿಂದ ದಿನಕ್ಕೆ ಹೊಸ ಕಲಾವಿದೆ ಕಿರುತೆರೆಗೆ ಬರುತ್ತಿದ್ದಾರೆ ಹೊರತು ಜನರು ಬಯಸುತ್ತಿರುವ ಕಲಾವಿದರಲ್ಲಿ ಕೆಲವರು ಇನ್ನು ಕೂಡ ಕಿರುತೆರೆ ಇಂದ ದೂರವೇ ಉಳಿದಿದ್ದಾರೆ.

ಅಂಥ ಕಲಾವಿದೆಯರಲ್ಲಿ ಒಬ್ಬರು ಶ್ವೇತಾ ಆರ್ ಪ್ರಸಾದ್. ಇವರ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಸುಮಾರು 9 ವರ್ಷಗಳ ಹಿಂದೆ ಶ್ರೀರಸ್ತು ಶುಭಮಸ್ತು ಧಾರವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟವರು ನಟಿ ಶ್ವೇತಾ ಆರ್ ಪ್ರಸಾದ್. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶ್ವೇತಾ ಅವರು ಆರ್.ಜೆ ಪ್ರದೀಪ ಅವರ ಪತ್ನಿ. ಮದುವೆ ಬಳಿಕ ಇವರು ಜೀಕನ್ನಡ ವಾಹಿನಿಯ ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ನಟಿಸಿದರು.

ಜಾಹ್ನವಿ ಪಾತ್ರದ ಮೂಲಕ ಕನ್ನಡ ಕಿರುತೆರೆ ವೀಕ್ಷಕರ ಗಮನ ಸೆಳೆದಿದ್ದರು. ಈ ಧಾರವಾಹಿ ಇವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತ್ತು. ಶ್ರೀರಸ್ತು ಶುಭಮಸ್ತು ಧಾರವಾಹಿ ಬಳಿಕ ಶ್ವೇತಾ ಅವರು ಕಲರ್ಸ್ ಕನ್ನಡ ವಾಹಿನಿಯ ರಾಧಾ ರಮಣ ಧಾರವಾಹಿಯಲ್ಲಿ ನಟಿಸಿದರು. ಈ ಧಾರಾವಾಹಿಯ ಆರಾಧನಾ ಟೀಚರ್ ಪಾತ್ರ ಇನ್ನು ಹೆಚ್ಚಿನ ಹೆಸರು ಜನಪ್ರಿಯತೆ ತಂದುಕೊಟ್ಟಿತು ಎಂದರೆ ತಪ್ಪಲ್ಲ.

ರಾಧಾ ರಮಣ ಧಾರವಾಹಿಯಲ್ಲಿ ಸ್ಕಂದ ಅವರೊಡನೆ ಅತ್ಯುತ್ತಮವಾಗಿ ನಟಿಸಿದರು, ಧಾರವಾಹಿ ವೇಳೆ ಶ್ವೇತಾ ಅವರನ್ನು ಎಲ್ಲರೂ ರಾಧಾ ಮಿಸ್ ಎಂದೇ ಗುರುತಿಸುತ್ತಿದ್ದರು. ಆದರೆ ಶ್ವೇತಾ ಅವರು ಹೆಚ್ಚು ಸಮಯ ರಾಧಾ ರಮಣ ಧಾರವಾಹಿಯಲ್ಲಿ ನಟಿಸಲಿಲ್ಲ, 2 ವರ್ಷಕ್ಕಷ್ಟೇ ಕಾಂಟ್ರ್ಯಾಕ್ಟ್ ಇದ್ದ ಕಾರಣ ರಾಧಾ ಮಿಸ್ ಪಾತ್ರದಿಂದ ಹೊರಬಂದಿದ್ದರು. ಆದರೆ ರಾಧಾ ರಮಣ ಧಾರವಾಹಿ ನಂತರ ಶ್ವೇತಾ ಅವರು ಇನ್ಯಾವುದೇ ಧಾರವಾಹಿಯಲ್ಲಿ ನಟಿಸಲಿಲ್ಲ.

ಇಂದಿಗೂ ಕೂಡ ಶ್ವೇತಾ ಅವರು ನಟನೆ ಇಂದ ದೂರವೇ ಉಳಿದಿದ್ದಾರೆ. ಯಾವುದೇ ಸಿನಿಮಾ ಅಥವಾ ಧಾರವಾಹಿಯಲ್ಲಿ ನಟಿಸಿಲ್ಲ, ಆದರೆ ಅಭಿಮಾನಿಗಳು ಮಾತ್ರ ಇವರು ಮತ್ತೆ ಕಿರುತೆರೆಗೆ ಬರಲಿ ಎಂದು ಕಾಯುತ್ತಿದ್ದಾರೆ. ಆದರೆ ಶ್ವೇತಾ ಅವರು ಮಾತ್ರ ಮತ್ತೆ ಕಿರುತೆರೆಗೆ ಬರುವ ಹಾಗೆ ಕಾಣುತ್ತಿಲ್ಲ.

Leave A Reply

Your email address will not be published.