Kannada Big Boss ಕನ್ನಡ ಬಿಗ್ ಬಾಸ್ ಸೀಸನ್ 9 ರ ಫಿನಾಲೆ ವಾರ ಆರಂಭವಾಗಿದ್ದು ಆರ್ಯವರ್ಧನ್ ಗುರೂಜಿ ಅವರ ಎಲಿಮಿನೇಷನ್ ನಂತರ ಮನೆಯಲ್ಲಿ 5 ಜನ ಸ್ಪರ್ಧಿಗಳು ಮಾತ್ರ ಉಳಿದಿದ್ದಾರೆ. ಉಳಿದಿರುವ ಐವರು ಕೂಡಾ ಪ್ರಬಲ ಸ್ಪರ್ಧಿಗಳಾಗಿ ಬಿಗ್ ಬಾಸ್ ಮನೆಯಲ್ಲಿ ಗುರುತಿಸಿಕೊಂಡಿದ್ದು ಇವರಲ್ಲಿ ಈ ಬಾರಿ ಬಿಗ್ ಬಾಸ್ ಟ್ರೋಫಿಯನ್ನು ಯಾರು ಹಿಡಿಯಲಿದ್ದಾರೆ ಎನ್ನುವುದನ್ನು ಈಗಲೇ ಊಹೆ ಮಾಡುವುದು ನಿಜವಾಗಲೂ ಕಷ್ಟ ಎನಿಸುತ್ತದೆ. ಕೊನೆಯ ವಾರದಲ್ಲಿ ಬಿಗ್ ಬಾಸ್ ಮನೆಯ ಸದಸ್ಯರ ಕೋರಿಕೆಗಳನ್ನು ಈಡೇರಿಸುವ ಮೂಲಕ ಅವರಿಗೆ ಸರ್ಪ್ರೈಸ್ ನೀಡುತ್ತಿದ್ದಾರೆ. ಇದೀಗ ಅಂತಹದ್ದೇ ಒಂದು ಸರ್ಪ್ರೈಸನ್ನು ಪಡೆದುಕೊಂಡು ದಿವ್ಯ(Divya Uruduga) ಮತ್ತು ರೂಪೇಶ್ ಶೆಟ್ಟಿ (Roopesh Shetty) ಖುಷಿಯಾಗಿದ್ದಾರೆ.

ದಿವ್ಯ ಉರುಡುಗ ಬಿಗ್ ಬಾಸ್ ಮುಂದೆ ಅರವಿಂದ್ ಕೆ ಪಿ(Arvind K P) ಅವರನ್ನು ಭೇಟಿ ಮಾಡಬೇಕೆನ್ನುವ ಕೋರಿಕೆಯೊಂದನ್ನು ಇಟ್ಟಿದ್ದರು. ಈಗ ಅವರ ಕೋರಿಕೆಯಂತೆ ಅರವಿಂದ್ ಕೆ ಪಿ ಬಿಗ್ ಬಾಸ್ ಮನೆಗೆ ಬಂದಿದ್ದು ಇದನ್ನು ಕಂಡು ದಿವ್ಯ ಬಹಳ ಖುಷಿಯಾಗಿದ್ದಾರೆ. ಸಂತೋಷದಿಂದ ಅರವಿಂದ್ ಅವರನ್ನು ಒಪ್ಪಿಕೊಂಡಿದ್ದಾರೆ. ಕಳೆದ ಸೀಸನ್ ಅಂದರೆ ಬಿಗ್ ಬಾಸ್ 8 ರಲ್ಲಿ ಅರವಿಂದ್ ಮತ್ತು ದಿವ್ಯ ಉರುಡುಗ (Arvind and Divya) ನಡುವಿನ ಸ್ನೇಹ ಮತ್ತು ಆತ್ಮೀಯತೆ ಬಹಳಷ್ಟು ಸುದ್ದಿಯಾಗಿತ್ತು. ಅಲ್ಲದೇ ಈ ಜೋಡಿ ಪರೋಕ್ಷವಾಗಿ ತಾವು ಒಬ್ಬರನ್ನೊಬ್ಬರು ಪ್ರೀತಿಸುತ್ತಿರುವುದಾಗಿ ಕೂಡಾ ಹೇಳಿಕೊಂಡಿದ್ದರು. ಇನ್ನು ಈ ಬಾರಿ ಪ್ರವೀಣರ ಸಾಲಿನಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದ ದಿವ್ಯ ಜೊತೆಯಲ್ಲಿ ಅರವಿಂದ್ ಇರಲಿಲ್ಲ.
ಬಿಗ್ ಬಾಸ್(Big Boss Kannada) ಈ ಬಾರಿ ಕೊನೆಯ ವಾರದಲ್ಲಿ ಮನೆಯ ಸದಸ್ಯರ ಒಂದೊಂದು ಆಸೆಯನ್ನು ಈಡೇರಿಸುವ ಭರವಸೆಯನ್ನು ನೀಡಿದ್ದರು ಈ ವೇಳೆ ದಿವ್ಯ ಉರುಡುಗ, ಅರವಿಂದ್ ಮನೆ ಒಳಗೆ ಬರಲಿ ಎಂದು ಕೋರಿಕೊಂಡಿದ್ದರು. ರೂಪೇಶ್ ಶೆಟ್ಟಿ ತಾನು ಹುಲಿ ಕುಣಿತ ನೋಡಬೇಕು ಎಂದು ಕೋರಿಕೆ ಇಟ್ಟಿದ್ದರು ಈಗ ಇಬ್ಬರ ಕೋರಿಕೆಯೂ ಈಡೇರಿದೆ. ವಾಹಿನಿ ಹಂಚಿಕೊಂಡಿರುವ ಹೊಸ ಪ್ರೋಮೋ ದಲ್ಲಿ ನೋಡಿದಾಗ ಮೊದಲು ರೂಪೇಶ್ ಶೆಟ್ಟಿಗೆ ಸರ್ಪ್ರೈಸ್ ಎನ್ನುವಂತೆ ಹುಲಿ ವೇಷಧಾರಿಗಳು ಬಂದು ಭರ್ಜರಿಯಾಗಿ ಕುಣಿದಿದ್ದು, ರೂಪೇಶ್(Roopesh Shetty) ಕೂಡಾ ಅವರೊಂದಿಗೆ ಹೆಜ್ಜೆ ಹಾಕಿ ಎಂಜಾಯ್ ಮಾಡಿದ್ದಾರೆ.
ಅನಂತರ ಮನೆ ಒಳಗೆ ಅರವಿಂದ್(Arvind K P) ಸರ್ಪ್ರೈಸ್ ಎಂಟ್ರಿ ನೀಡಿದ್ದು, ಇದನ್ನು ನೋಡಿ ದಿವ್ಯ ಖುಷಿಯಿಂದ ಕುಣಿದಾಡಿದ್ದಾರೆ, ಅವರ ಬಾಯಿಂದ ಮಾತೇ ಬರಲಿಲ್ಲ. ನಂತರ ದಿವ್ಯ ಅರವಿಂದ್ ಗಾಗಿ ಹಾಡೊಂದನ್ನು ಬರೆದಿರುವುದಾಗಿ, ಅದನ್ನು ಅರವಿಂದ್ ಮುಂದೆ ಹೇಳುವಾಗ ದಿವ್ಯ ಇನ್ನಷ್ಟು ನಾಚಿಕೊಂಡು, ನನಗೆ ನಿಜಕ್ಕೂ ನಾಚಿಕೆಯಾಗುತ್ತಿದೆ ಎಂದು ಅರವಿಂದ್ ಅವರನ್ನು ಗಟ್ಟಿಯಾಗಿ ತಬ್ಬಿಕೊಂಡಿದ್ದಾರೆ. ಪ್ರಸ್ತುತ ಈ ಪ್ರಮೋ ಸೋಶಿಯಲ್ ಮೀಡಿಯಾ ಗಳಲ್ಲಿ ವೈರಲ್ ಆಗುತ್ತಿದೆ.