ಅಂಬಾನಿ ಕುಟುಂಬದ ಕಾರು ಚಾಲಕರ ಸಂಬಳ ಇಷ್ಟೊಂದಾ? ಕೇವಲ ಡ್ರೈವಿಂಗ್ ಗೊತ್ತಿದ್ರೆ ಸಾಲಲ್ಲ

0
40

Kannada News :ಭಾರತ ಮಾತ್ರವಲ್ಲ ಇಡೀ ಏಷ್ಯಾದಲ್ಲೇ ಅತಿ ದೊಡ್ಡ ಶ್ರೀಮಂತ ಎನಿಸಿಕೊಂಡಿರುವ ಮುಕೇಶ್‌ ಅಂಬಾನಿ (Mukesh Ambani) ಅವರ ಲೈಫ್ ಸ್ಟೈಲ್ ಕುರಿತಾಗಿ, ಅವರ ಆಸ್ತಿಗಳ ಬಗ್ಗೆ ಈಗಾಗಲೇ ಹಲವು ಮಾಧ್ಯಮಗಳು, ಸಂಸ್ಥೆಗಳು ಲೆಕ್ಕಾಚಾರಗಳನ್ನು ಮಾಡಿ, ಸುದ್ದಿಯನ್ನು ಮಾಡಿವೆ. ಆದರೆ ಈಗ ಬಹಳ ವಿಶೇಷ ಹಾಗೂ ಅಚ್ಚರಿ ಎನಿಸುವಂತೆ ಮುಕೇಶ್ ಅಂಬಾನಿ ಅವರ ಕಾರಿನ ಚಾಲಕನ ವೇತನ ಎಷ್ಟು? ಎನ್ನುವ ಮಾಹಿತಿಯೊಂದು ಮಾದ್ಯಮಗಳ ಸುದ್ದಿ ಗಳಲ್ಲಿ ಹರಿದಾಡುತ್ತಾ ಎಲ್ಲರ ಗಮನವನ್ನು ಸೆಳೆದಿರುವುದು ಮಾತ್ರವೇ ಅಲ್ಲದೇ ಈ ಸುದ್ದಿ ಕೇಳಿ ಜನರು ಅಚ್ಚರಿ ಪಡುವಂತಾಗಿದೆ.

ಮುಕೇಶ್ ಅಂಬಾನಿ ಅವರು ಕಾರು ಚಾಲಕನ(Car Driver) ಸಂಬಳ 2017 ರಲ್ಲಿ ತಿಂಗಳಿಗೆ ಸುಮಾರು 2 ಲಕ್ಷ ರೂಪಾಯಿಗಳಾಗಿತ್ತು ಎಂಬುದಾಗಿ ಲೈವ್ ಮಿಂಟ್ ವರದಿಯೊಂದನ್ನು ಮಾಡಿದೆ. ಅಂದರೆ ಇದರ ಅರ್ಥ ಕಾರು ಚಾಲಕನ ವೇತನ ವರ್ಷಕ್ಕೆ 24 ಲಕ್ಷ ರೂ ಗಳಾಗಿತ್ತು. ಅಂದರೆ ಇದು ಪ್ರಸ್ತುತ ಅಸ್ತಿತ್ವದಲ್ಲಿ ಇರುವ ಅನೇಕ ವೃತ್ತಿಪರ ಉದ್ಯೋಗಗಳಿಗಿಂತ ಹೆಚ್ಚು ಎಂದು ಯಾವುದೇ ಅನುಮಾನ ಇಲ್ಲದೇ ನಾವು ಹೇಳಬಹುದಾಗಿದೆ. ಆದರೆ ಈಗ ಅಂದರೆ 2023ರಲ್ಲಿ ಅವರ ಚಾಲಕನ ವೇತನ ಎಷ್ಟು ಎನ್ನುವುದು ಮಾತ್ರ ಇನ್ನೂ ತಿಳಿದು ಬಂದಿಲ್ಲ.

ವರದಿಗಳ ಪ್ರಕಾರ ಅಂಬಾನಿ ಮನೆಯ ಕಾರುಗಳಿಗೆ ಚಾಲಕರನ್ನು ಖಾಸಗಿ ಸಂಸ್ಥೆಯ ಮೂಲಕ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು ಎನ್ನಲಾಗಿದೆ. ಅಲ್ಲದೇ ಅವರಿಗೆ ಅಂಬಾನಿ ಕುಟುಂಬದ ಜೀವನ ಶೈಲಿಗೆ ಹೊಂದಿಕೊಳ್ಳುವ ಜಾಗೆ ತರಬೇತಿಯನ್ನು ಸಹಾ ನೀಡಲಾಗುತ್ತದೆ ಎನ್ನಲಾಗಿದೆ.

Kannada Newsಅಂಬಾನಿಯವರ ಬುಲೆಟ್ ಪ್ರೂಫ್ ವಾಹನವನ್ನು ನಿರ್ವಹಿಸುವ ಕಾರ್ಯವನ್ನು ಮಾಡುವ ಜೊತೆಗೆ ಐಷಾರಾಮಿ ವಾಹನಗಳ ಚಾಲನೆಯಲ್ಲಿ ಇವರು ಪರಿಣಿತಿ ಪಡೆದಿರುತ್ತಾರೆ ಮತ್ತು ಕಠಿಣ ರಸ್ತೆಗಳು ಮತ್ತು ಅ ಹಿ ತ ಕರ ಸಂದರ್ಭಗಳನ್ನು ನಿರ್ವಹಿಸುವ ಕೌಶಲವನ್ನು ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here