ಮಂದಿರ ಪ್ರದೇಶದಲ್ಲಿ ಮಟನ್ ಡಿಲೆವರಿ ಕೊಡಲ್ಲ, ನನಗೆ ಉದ್ಯೋಗಕ್ಕಿಂತ ಧರ್ಮ ಮುಖ್ಯ: ಸ್ವಿಗ್ಗಿ ಡಿಲೆವರಿ ಬಾಯ್

0
43

Kannada News :ಧರ್ಮ ಹಾಗೂ ಧಾರ್ಮಿಕ ಆಚರಣೆಗಳಿಗೆ ನಮ್ಮ ದೇಶದಲ್ಲಿ ವಿಶೇಷವಾದ ಪ್ರಾಮುಖ್ಯತೆ ಮತ್ತು ಮಹತ್ವ ಇದ್ದು, ಸಂಪ್ರದಾಯವಾದಿಗಳು ತಮ್ಮ ಧರ್ಮವನ್ನು ಮೀರಿ ಯಾವುದೇ ಕೆಲಸವನ್ನು ಮಾಡಲು ಒಪ್ಪುವುದಿಲ್ಲ. ಇತ್ತೀಚಿಗಷ್ಟೇ ಟಿವಿ ಯ ಕುಕ್ಕಿಂಗ್ ರಿಯಾಲಿಟಿ ಶೋ ನಲ್ಲಿ ಮಹಿಳೆಯೊಬ್ಬರು ಮೊಟ್ಟೆ ಬೇಯಿಸುವುದಕ್ಕೆ ತನ್ನ ಧರ್ಮದಲ್ಲಿ ಅನುಮತಿ ಇಲ್ಲ ಎಂದು ಶೋ ನಿಂದ ಹೊರ ಬರಲು ಸಜ್ಜಾಗಿದ್ದರು. ಆ ಸುದ್ದಿ ಮಾಸುವ ಮೊದಲೇ ಇದೀಗ ಅಂತಹುದೇ ಮತ್ತೊಂದು ಸುದ್ದಿ ದೊಡ್ಡ ಸದ್ದನ್ನು ಮಾಡುತ್ತಿದೆ. ಹಾಗಾದರೆ ಏನಿದು ವಿಷಯ? ತಿಳಿಯೋಣ ಬನ್ನಿ.

ತಂದೆಯಿಂದಲೆ ನನಗೆ ಲೈಂ ಗಿ ಕ ಕಿರುಕುಳ.. ಶಾಕಿಂಗ್ ಸತ್ಯ ಬಿಚ್ಚಿಟ್ಟ ನಟಿ

ಸಚಿನ್ ಪಾಂಚಾಲ್ ಸ್ವಿಗ್ಗಿಯಲ್ಲಿ ಡಿಲೆವರಿ ಬಾಯ್ ಆಗಿ ಕೆಲಸವನ್ನು ಮಾಡುತ್ತಿದ್ದು, ಇತ್ತೀಚಿಗೆ ಇವರ ವೀಡಿಯೋವೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಸ್ವಿಗ್ಗಿಯಲ್ಲಿ ಆರ್ಡರ್ ಮಾಡಲಾಗಿದ್ದ ಮ ಟ ನ್ ಕೊರ್ಮಾ ವನ್ನು ಸಚಿನ್ ಡಿಲೆವರಿ ಮಾಡಬೇಕಿತ್ತು. ಆದರೆ ಅವರ ಡೆಸ್ಟಿನೇಷನ್ ರಾಮ್ ಕಚೋರಿ, ಯಮುನಾ ಬಜಾರ್, ಹನುಮಾನ್ ಮಂದಿರ ಎನ್ನುವ ವಿಳಾಸವಾಗಿದ್ದು, ಈ ಘಟನೆಯು ಮಾರ್ಚ್ 1, 2023 ರಂದು ನಡೆದಿತ್ತು. ಅಂದರೆ ಡೆಸ್ಟಿನೇಷನ್ ಇರುವುದು ಮಂದಿರ ಇದ್ದ ಪ್ರದೇಶವಾಗಿತ್ತು.

ಡೆಸ್ಟಿನೇಷನ್ ಹಳೇ ದೆಹಲಿಯ ಕಾಶ್ಮೀರ್ ಗೇಟ್‌ನಲ್ಲಿರುವ ಮಾರ್ಗಟ್ ಹನುಮಾನ್ ಮಂದಿರದ ದೇವಾಲಯದ ಆವರಣದಲ್ಲಿ ಇದ್ದ ಕಾರಣ ಮಟನ್ ಕೊರ್ಮಾ ಆರ್ಡರ್ ಅನ್ನು ಡೆಸ್ಟಿನೇಷನ್ ಗೆ ತಲುಪಿಸಲು ಸಚಿನ್ ನಿರಾಕರಿಸದ್ದರು. ಅವರ ಈ ವೀಡಿಯೋಗಳು ವೈರಲ್ ಆಗಿತ್ತು, ಅಲ್ಲದೇ ಸಚಿನ್ ತಾನು ಫುಡ್ ಡಿಲೆವರಿ ಮಾಡದ ಕಾರಣ ಸ್ವಿಗ್ಗಿ ತನ್ನನ್ನು ಕೆಲಸದಿಂದ ತೆಗೆದುಹಾಕಿದೆ ಎನ್ನುವ ಮಾತನ್ನು ಅವರು ಹೇಳಿದ್ದಾರೆ. ಆದರೆ ಅನಂತರ ಕಂಪನಿ ಅವರು ಕೆಲಸ ಮುಂದುವರೆಸುತ್ತಾರೆ ಎಂದು ಸಹಾ ಹೇಳಿತ್ತು.

ತಂದೆಯಿಂದಲೆ ನನಗೆ ಲೈಂ ಗಿ ಕ ಕಿರುಕುಳ.. ಶಾಕಿಂಗ್ ಸತ್ಯ ಬಿಚ್ಚಿಟ್ಟ ನಟಿ

Kannada News :ಇನ್ನು ತಾನು ಮಂದಿರ ಪ್ರದೇಶ ವ್ಯಾಪ್ತಿಯಲ್ಲಿ ಮಾಂಸಾಹಾರ ಡಿಲೆವರಿ ಮಾಡದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿನ್, ಉದ್ಯೋಗ ಇವತ್ತಲ್ಲದೇ ಹೋದರೆ ನಾಳೆಯಾದರೂ ಸಿಗುತ್ತದೆ. ಆದರೆ ನನಗೆ ನಮ್ಮ ಧರ್ಮ ಕೂಡಾ ಮುಖ್ಯ‌. ನನ್ನ ಕುಟುಂಬವನ್ನು ನಡೆಸುವುದಕ್ಕಾಗಿ ನಾನು ನಮ್ಮ ಸನಾತನ ಧರ್ಮದ ಸಹೋದರರ ಭಾವನೆಗಳಿಗೆ ಧ ಕ್ಕೆ ಯನ್ನು ಉಂಟು ಮಾಡುವುದಕ್ಕೆ ಬಯಸುವುದಿಲ್ಲ ಎಂದು ಹೇಳಿದ್ದು ಇದು ಅನೇಕರ ಮೆಚ್ಚುಗೆಗಳಿಗೆ ಪಾತ್ರವಾಗಿದೆ.

LEAVE A REPLY

Please enter your comment!
Please enter your name here